ಹೆಲ್ಮೆಟ್ ಕಡ್ಡಾಯ ಮಾಡಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳೋಕಂತ ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಬೈಕಿನಲ್ಲಿ ಹೋಗೋಕೆ ಶುರುಮಾಡಿದವರೇ ಬಹಳಷ್ಟು ಮಂಡಿ…! ನಮ್ಮ ತಲೆ ರಕ್ಷಣೆಗೆ ಪೊಲೀಸರು ಮಂಡೆಬಿಸಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ…! ಪೊಲೀಸರು ಹಿಡೀತಾರೆ ಎಂಬ ಕಾರಣಕ್ಕೆ ಯಾವುದಾಯ್ತೋ ಆ ಹೆಲ್ಮೆಟ್ ಹಾಕಿಕೊಂಡು ಹೋಗ್ತಿರೋರು ಸ್ವಲ್ಪ ಈ ಸ್ಟೋರಿ ಓದಿ.
ಹೆಲ್ಮೆಟ್ ಅಂತ ಕಂಡ್ ಕಂಡಿದ್ದನ್ನು ಹಾಕಿಕೊಂಡು ಇನ್ಮುಂದೆ ಪೊಲೀಸರನ್ನು ಯಾಮಾರಿಸಿ ಹೋಗಕ್ಕಾಗಲ್ಲ…! ಐಎಸ್‍ಐ ಮಾರ್ಕ್ ಕಡ್ಡಾಯ. ಐಎಸ್‍ಐ ಮಾರ್ಕ್ ಇಲ್ಲದ, ಕಿವಿಯನ್ನು ಮುಚ್ಚದ ಹೆಲ್ಮೆಟ್ ಹಾಕಿಕೊಳ್ಳುವಂತಿಲ್ಲ. ಬೆಂಗಳೂರು ಮತ್ತು ಮೈಸೂರು ಪೊಲೀಸರು ಕಾರ್ಯಚರಣೆಗೆ ಆರಂಭಿಸಿದ್ದು, ಐಎಸ್‍ಐ ಮಾರ್ಕ್ ಇಲ್ಲದ, ಕಿವಿ ಮುಚ್ಚದ ಹೆಲ್ಮೆಟ್ ಹಾಕಿರೋರು ಹೆಲ್ಮೆಟ್ ಕಳೆದುಕೊಳ್ಳಬೇಕಾಗುತ್ತೆ…! ಜೊತೆಗೆ ದಂಡವನ್ನು ಕಟ್ಟಬೇಕು.