ಬರಪೀಡಿತ ಉತ್ತರ ಕರ್ನಾಟಕದ ಹಳ್ಳಿಗಳಿಗೆ ನೆರವಾಗಿ..!

Date:

ಬರದಿಂದಾಗಿ ರಾಜ್ಯದ ನಾನಾ ಜಿಲ್ಲೆಗಳು ತತ್ತರಿಸಿ ಹೋಗಿವೆ. ಬೆಳೆಗೆ ಮಳೆ ಬರುವುದು ದೂರದ ಮಾತು, ಕುಡಿಯೋ ನೀರಿಗೂ ಅದೆಷ್ಟೋ ಕಡೆ ಹಾಹಾಕರ ಶುರುವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಸಾಕಷ್ಟು ಹಳ್ಳಿಗಳ ಪರಿಸ್ಥಿತಿ ಹೇಳತೀರದು. ಹೀಗಿರುವಾಗ ಅವರ ನೆರವಿಗೆ ನಾವು ನೀವಲ್ಲದೇ ಇನ್ಯಾರಾಗಬೇಕು..? ಈ ಹಿಂದೆ ಮಳೆಯಿಂದ ತತ್ತರಿಸಿ ಹೋಗಿದ್ದ ಚೆನ್ನೈನಲ್ಲಿ ಅವರ ನಿರಾಶ್ರಿತರ ಮನೆಮನೆ ತಲುಪಿ ಸಹಾಯ ಮಾಡಿದ್ದ ಕಿರಿಕ್ ಕೀರ್ತಿ ಮತ್ತು ತಂಡ ಈಗ ಬರದ ನಾಡಿನಲ್ಲಿ ಜನರ ಸಹಾಯಕ್ಕೆ ಸಿದ್ದವಾಗಿದೆ. ಇದೇ ತಿಂಗಳ ಮೇ 9,10,11 ರಂದು ಉತ್ತರ ಕರ್ನಾಟಕದ 20 ಹಳ್ಳಿಗಳಿಗೆ ಕುಡಿಯೋ ನೀರಿನ ಹಾಗೂ ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ತಂಡವೊಂದು ಬೆಂಗಳೂರಿನಿಂದ ಹೊರಟಿದೆ. ಈಗಾಗಲೇ ಕಿರಿಕ್ ಕೀರ್ತಿ ಫೇಸ್ ಬುಕ್ ಪುಟದಿಂದಾಗಿ 100 ಟ್ಯಾಂಕರ್ ಗೆ ಸಾಕಾಗುವಷ್ಟು ಹಣ ಸಂಗ್ರಹಣೆ ಮಾಡಲಾಗಿದೆ. ಇನ್ನೂ 100-150 ಟ್ಯಾಂಕರ್ ನೀರು ಹಾಗೂ ಮೇವಿಗೆ ಕನ್ನಡಿಗರ ನೆರವು ಬೇಕಾಗಿದೆ. ಉತ್ತರ ಕರ್ನಾಟಕದಿಂದ ಬಂದಮೇಲೆ ಬೆಂಗಳೂರಿನಲ್ಲಿ ನೂರಿನ್ನೂರು ಸಸಿ ನೆಡುವ ಕಾರ್ಯಕ್ರಮ ಸಹ ಹಮ್ಮಿಕೊಂಡಿರುವ ಈ ತಂಡ ವಿಶ್ವದ ಮೂಲೆಮೂಲೆಯಲ್ಲಿರೋ ಕನ್ನಡಿಗರಿಂದ ನೆರವಿನ ನಿರೀಕ್ಷೆಯಲ್ಲಿದೆ. ಕುಡಿಯುವ ನೀರಿಗೂ ಕಷ್ಟವಾಗಿರೋ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಸಹಾಯ ಹಸ್ತ ಅವರ ಜೀವನಕ್ಕೆ ದೊಡ್ಡ ಸಹಾಯವಾಗುವುದರಲ್ಲಿ ಅನುಮಾನವಿಲ್ಲ.. ನೆರವು ನೀಡಲಿಚ್ಚಿಸುವವರು ಕಿರಿಕ್ ಕೀರ್ತಿಯವರ ಈ ಖಾತೆಗೆ ಹಣ ಸಂದಾಯ ಮಾಡಬಹುದು… ನಿಮ್ಮ ಒಂದೊಂದು ರೂಪಾಯಿ ಸಹ ಬರಪೀಡಿತರಿಗೆ ತಲುಪಿಸೋ ಭರವಸೆ ಕಿರಿಕ್ ಕೀರ್ತಿ ಮತ್ತು ತಂಡದ್ದು…

Account Details :

Keerthi Kumar SU
05141140051411
IFSC : HDFC0000514
Bannerghatta Road branch

ಕಿರಿಕ್ ಕೀರ್ತಿ ಹಾಗೂ ತಂಡಕ್ಕೆ ಶುಭವಾಗಲಿ

POPULAR  STORIES :

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!

ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )

ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...