ಲಂಚವಿಲ್ಲದೆ ಯಾವುದೇ ಕಡತ ಮುಂದಕ್ಕೆ ಚಲಿಸುವುದಿಲ್ಲ

0
38

ಸರಕಾರಿ ಕಚೇರಿಗಲ್ಲಿ ಲಂಚವಿಲ್ಲದೆ ಯಾವುದೇ ಕಡತ ಮುಂದಕ್ಕೆ ಚಲಿಸುವುದಿಲ್ಲ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್‌ ಬಿ.ಟಿ.ರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾಮೀನು ನೀಡಲು ನಿರಾಕರಿಸಿದೆ. ರಾಜು ಅವರು ದೂರುದಾರರ ಪರವಾಗಿ ಆದೇಶ ನೀಡಲು 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. ಬಳಿಕ ಚೌಕಾಸಿ ಮಾಡಿ ಕಾಮಗಾರಿ ಪೂರ್ಣಗೊಳಿಸಲು 60 ಲಕ್ಷ ರೂ. ಗೆ ಒಪ್ಪಿಕೊಂಡಿದ್ದರು. 2022ರ ಜೂನ್‌ 7ರಂದು ಲಂಚದ ಮೊತ್ತದಲ್ಲಿ ಮುಂಗಡವಾಗಿ 5 ಲಕ್ಷ ರೂಪಾಯಿ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

LEAVE A REPLY

Please enter your comment!
Please enter your name here