ಮದ್ರಾಸ್, ಕೋಲ್ಕತಾ ಮತ್ತು ಬಾಂಬೆ ಉಚ್ಛ ನ್ಯಾಯಾಲಯಗಳ ಹೆಸರುಗಳನ್ನು ಕ್ರಮವಾಗಿ ಚೆನ್ನೈ, ಕೋಲ್ಕತಾ ಮತ್ತು ಮುಂಬೈ ಉಚ್ಛ ನ್ಯಾಯಾಲಯಗಳೆಂದು ಮರು ನಾಮಕರಣ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ವಿಕ್ಟೋರಿಯ ರಾಣಿಯ ಆಳ್ವಿಕೆಯ ಅವಧಿ(1860)ಯಲ್ಲಿ ಸ್ಥಾಪನೆಗೊಂಡ ಈ ನ್ಯಾಯಾಲಯಗಳ ಹೆಸರನ್ನು ಬದಲಾಯಿಸಬೇಕೆಂಬ ಕೂಗು 1990ರ ದಶಕದಿಂದಲೇ ಕೇಳಿಬರುತ್ತಿತ್ತು. ಈ ಕುರಿತು ಉಚ್ಛ ನ್ಯಾಯಾಲಯಗಳ ಹೆಸರನ್ನು ಬದಲಾಯಿಸಬಹುದಾದ ಹೈ ಕೋರ್ಟ್ ಮಸೂದೆಯನ್ನು ಜಾರಿಗೊಳಿಸುವಂತೆ ನ್ಯಾಯಾಂಗ ಇಲಾಖೆಯು ಕಾನೂನು ಸಚಿವಾಲಯಕ್ಕೆ ಮನವಿ ಮಾಡಿತ್ತು.
ಮಂಗಳವಾರ ಕೇಂದ್ರ ಸಂಪುಟದ ನಿರ್ಧಾರದ ಪ್ರಕಾರ, ಮೊದಲಿಗೆ ಮದ್ರಾಸ್ ಮತ್ತು ಬಾಂಬೆ ಉಚ್ಛ ನ್ಯಾಯಾಲಯಗಳ ಮರು ನಾಮಕರಣ ಮಾಡಲಾಗುವುದು. ಆ ಬಳಿಕ ಕೋಲ್ಕತಾ ಉಚ್ಛ ನ್ಯಾಯಾಲಯದ ಹೆಸರನ್ನು ಕೂಡ ಕೋಲ್ಕತಾ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಬಾಂಬೆ ಮತ್ತು ಮದ್ರಾಸ್ ಉಚ್ಛ ನ್ಯಾಯಾಲಯಗಳ ಮರು ನಾಮಕರಣಕ್ಕೆ ಮಹಾರಾಷ್ಟ್ರ ಮತ್ತು ತಮಿಳುನಾಡಿನ ರಾಜ್ಯ ಸರಕಾರಗಳು ಮಾತ್ರವಲ್ಲದೇ ಅನೇಕ ಸಂಸ್ಥೆಗಳು ಬೇಡಿಕೆ ಇಟ್ಟಿದ್ದ್ಥ್ಬೈ.
- ವಿಶು
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!