ಗುಂಡ್ಲುಪೇಟೆಯ ಪ್ರಸಿದ್ಧ ಪ್ರವಾಸಿ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕೆಲವು ದಿನಗಳ ನಂತರ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ.
ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಅಕ್ಟೋಬರ್ 16ರ ಭಾನುವಾರದಿಂದ ಅಂದರೆ 13 ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ವಾಹನಗಳು ಓಡಾಡುವ ರೀತಿಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿ 2 ಬಸ್ಗಳ ಸಂಚಾರ ಮತ್ತೆ ಆರಂಭಗೊಂಡಿದೆ. ವಾರಾಂತ್ಯ ದಿನಗಳಲ್ಲಿ ಬೆಟ್ಟಕ್ಕೆ ಪ್ರವಾಸಿಗರು, ಜನರ ದಂದೇ ಹರಿದು ಬರಲಿದ್ದು, ಅವರಿಗೆ ಬಸ್ ಸಂಚಾರದ ಆರಂಭದಿಂದ ಅನುಕೂಲವಾಗಿದೆ.