ಜೇನುತುಪ್ಪ ಕೂದಲಿಗೆ ಅದ್ಭುತ ಔಷಧಿ ಹೇಗೆ ಗೊತ್ತಾ ?

Date:

ಕೂದಲಿನ ಬಗ್ಗೆ ವಿಶೇಷ ಆರೈಕೆ ಯಾರು ಮಾಡಲ್ಲಾ ಹೇಳಿ . ಸುಂದರವಾದ ಕೇಶ ಇರಬೇಕು ಅಂತಾ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ . ಕೂದಲು ಉದುರುವ ಸಮಸ್ಯ , ಬಾಲ ನೆರೆ , ಕೂದಲು ತುಂಡಾಗುವಿಕೆ ಹೀಗೆ ಸಾಕಷ್ಟು ಸಮಸ್ಯಗಳು ನಮ್ಮನ್ನ ಬಾಧಿಸುತ್ತವೆ . ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕೂದರು ಟಿಸಳು ಒಡೆಯುವುದು ಅಂದರೆ , ಸ್ಲ್ಪಿಟ್ ಹೇರ್ ಹುಣ್ಣುಮಕ್ಕಳಿಗೆ ಹೆಚ್ಚಾಗಿ ಕಾಡುತ್ತೆ .

 

ಸ್ಲ್ಪಿಟ್ ಹೇರ್ ಆಗಲು ಮುಖ್ಯ ಕಾರಣ ಏನು ?

ಇನ್ನೂ ಕಾರಣಗಳನ್ನ ನೋಡುತ್ತ ಹೋದರೆ , ಪೌಷ್ಠಿಕಾಂಶದ ಕೊರತೆ, ಕೂದಲಿನ ಕಳಪೆ ಆರೈಕೆ, ಒತ್ತಡ, ಕೊಳಕಾಗಿರುವುದು . ಮತ್ತು , ವಾಯು ಮಾಲಿನ್ಯಕ್ಕೆ ಸೇರಿದಂತೆ ಸಾಕಷ್ಟು ಕಾರಣಗಳು ಸಿಗುತ್ತವೆ . ಜೊತೆಗೆ ಕೂದಲಿನ ತುದಿಗಳು ಹಾಳಾಗಲು ಮುಖ್ಯ ಕಾರಣವೆಂದರೆ ತೇವಾಂಶ ಮತ್ತು ನೀರಿನ ಸಂಚಯನದ ಕೊರತೆ ಕೂಡಾ ಆಗಬಹುದು . ಅತಿಯಾದ ಶುಷ್ಕತೆ ಅಥವಾ ಬಿಸಿ ವಾತಾವರಣ ಇದ್ದರೆ ನೆತ್ತಿಯನ್ನು ಒಣಗಿಸುತ್ತದೆ . ಇದು ಅಂತಿಮವಾಗಿ ಟಿಸಳು ತುದಿಗಳಂತಹ ಕೂದಲಿನ ಸಮಸ್ಯೆಗಳನ್ನು ಪ್ರಚೋದಿಸುತ್ತದೆ.

ಪರಿಹಾರ ಏನು ಮಾಡಬಹುದು ?

ನಿಮ್ಮ ಕೂದಲಿಗೆ ಜೇನುತುಪ್ಪವನ್ನು ಬಳಸಲು, ಒಂದು ಬಟ್ಟಲಿನಲ್ಲಿ 3 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಮೊಸರು ಮತ್ತು 1 ಟೀಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ.
ಈಗ ನೀವು ಅವುಗಳನ್ನು ಚೆನ್ನಾಗಿ ಬೆರೆಸಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಇಟ್ಟುಕೊಂಡ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಇದು ಒಂದೆ ಬಾರಿಗೆ ಸರಿ ಹೋಗಲು ಸಾಧ್ಯವಿಲ್ಲ ‌ , ಆಗಾಗ್ಗ ಹೀಗೆ ಮಾಡುತ್ತಿದ್ದರೆ ಈ ಸ್ಲ್ಪಿಟ್ ಹೇರ್ ಸಮಸ್ಯ ನಿವಾರಣೆಯಾಗುತ್ತೆ .

Share post:

Subscribe

spot_imgspot_img

Popular

More like this
Related

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ:...

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....