ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

1
51

ಚೀನಾದಿಂದ ಸ್ವತಂತ್ರ್ಯ ರಾಷ್ಟ್ರವನ್ನಾಗುವ ಹಾಂಕಾಂಗ್ ರಾಷ್ಟ್ರದ ಪಾಡು ಈಗ ಹೇಳತೀರದಾಗಿದೆ. ನ.7 ರಂದು ಚೀನಾ ಶಾಸಕಾಂಗ ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆಯನ್ನು ಅಂಗೀಕರಿಸಿದೆ. ಈ ಮೂಲಕ ಹಾಂಕಾಂಗ್ ದೇಶಕ್ಕೆ ಮತ್ತೆ ಕೊಡಲಿ ಪೆಟ್ಟು ನೀಡಿದೆ ಚೀನಾ..!
ಇತ್ತೀಚೆಗಷ್ಟೇ ಹಾಂಕಾಂಗ್‍ನ ಸಂಸದರಾಗಿ ಆಯ್ಕೆಯಾಗಿದ್ದ ಯು ವಾಯ್ ಚಿಂಗ್ ಹಾಗೂ ಬ್ಯಾಗಿಲೋ ಲೆಯುಂಗ್ ಕಾಂಗ್ ಶಾಸನ ಸಭೆಯಲ್ಲಿ ಅಧಿಕಾರ ಸ್ವೀಕರಿಸುವುದಕ್ಕೆ ಚೀನಾ ನಿರ್ಬಂದ ಹೇರಿದ್ದು, ಇದನ್ನು ಹಾಂಕಾಂಗ್‍ನ ಸ್ವಾತಂತ್ರ್ಯವನ್ನು ಹರಣ ಮಸೂದೆ ಎಂದು ಟೀಕೆಗಳು ಕೇಳಿ ಬರುತ್ತಿದೆ.
ಹಾಂಕಾಂಗ್‍ನ ವಿಶೇಷ ಆಡಳಿತ ಪ್ರದೇಶದ ಮೂಲ ಕಾನೂನನ್ನು ಅಂಗೀಕರಿಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಬಹಳ ಅಗತ್ಯವಿದ್ದ ಮಸೂದೆಯನ್ನು ಸೂಕ್ತ ಸಮಯದಲ್ಲಿ ಅಂಗೀರಿಸಲಾಗಿದೆ ಎಂದು ಹಾಂಕಾಂಗ್ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ.
ಚೀನಾ ಅಂಗೀಕರಿಸಿರುವ ಮಸೂದೆಯಲ್ಲಿನ ಆರ್ಟಿಕಲ್ 104ಕ್ಕೆ ಸ್ಪಷ್ಟ ನಿದರ್ಶನ ನೀಡಿದ್ದು, ಅದರ ಪ್ರಕಾರವಾಗಿ ಹಾಂಕಾಂಕ್ ಸ್ವತಂತ್ರ್ಯವನ್ನು ಚೀನಾ ಶಾಸಕಾಂಗ ಸಂಪೂರ್ಣವಾಗಿ ನಿರಾಕರಿಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಚೀನಾ ನೀಡಿರುವ ವ್ಯಾಖ್ಯಾನ ಹಾಂಕಾಂಗ್ ವಿಷೇಶ ಆಡಳಿತ ಪ್ರದೇಶದ ಮೂಲ ಕಾನೂನನ್ನು ರಕ್ಷಿಸುತ್ತದೆ ಹಾಗೂ ಹಾಂಕಾಂಗ್ ಸೇರಿದಂತೆ ಸಮಸ್ತ ಚೀನಾ ಜನರ ಸಾಮಾನ್ಯ ಆಕಾಂಕ್ಷೆಗಳಿಗೆ ಬದ್ಧವಾಗಲಿ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಇನ್ನು ಚೀನಾ ಹಾಂಕಾಂಗ್ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಯತ್ನ ಎಂದು ಆರೋಪಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.

Like us on Facebook  The New India Times

POPULAR  STORIES :

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

1 COMMENT

LEAVE A REPLY

Please enter your comment!
Please enter your name here