ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಅವರಿಗೆ ಓದುವುದರಲ್ಲಿ ಆಸಕ್ತಿಯೇ ಇರಲಿಲ್ಲ..! ಅಪ್ಪನಂತೆ ಕೂಲಿ ಮಾಡುವ ಯೋಚನೆಯೇ ಇತ್ತು..! ಯಾರಪ್ಪಾ ಶಾಲೆಗೆ ಹೋಗ್ತಾರೆ ಅನ್ನೋ ಸೋಮಾರಿತನ..! ಶಾಲೆಗೆ ಹೋಗೋದೇ ಇವರಿಗೆ ಬೇಜಾರು..! ಆದರೆ ಇವರ ಹಣೆ ಬರಹವೇ ಬದಲಾಗಿದೆ..! ಅವತ್ತು ಹಳ್ಳಿಯಲ್ಲಿ ಕೂಲಿಗೆ ಲಾಯಕ್ಕು ಅಂತಿದ್ದ ಹುಡುಗ ಇವತ್ತು ಏನಾಗಿದ್ದಾರೆ ಗೊತ್ತಾ..?! ಲೈಫಲ್ಲಿ ಎಂಥಾ ಬದಲಾವಣೆ ಆಗಿದೆ ಗೊತ್ತಾ..?! ಇವರ ಲೈಫ್ ಸ್ಟೋರಿ ನಮಗೆ, ನಿಮಗೆಲ್ಲಾ ಪ್ರೇರಣಾ ಶಕ್ತಿ..!
ಅವರು `ಮುಸ್ತಾಫಾ’ ಕೇರಳದ ವಯನಾಡುವಿನ ಕಲ್ಪಟ್ಟ ಹತ್ತಿರದ ಚೆನ್ನ ಲೋಡೆ ಎಂಬ ಕುಗ್ರಾಮದವರು..! ಆ ಹಳ್ಳಿಯಲ್ಲಿ ರಸ್ತೆಯಾಗಲೀ ಅಥವಾ ವಿದ್ಯುತ್ ಸಂಪರ್ಕವಾಗಲೀ ಇರ್ಲಿಲ್ಲ..! ಆ ಹಳ್ಳಿಯಲ್ಲಿದ್ದುದು ಒಂದೇ ಒಂದು ಪ್ರಾಥಮಿಕ ಶಾಲೆ..! ಪ್ರೌಢ ಶಾಲೆಗೆ ಹೋಗ್ಬೇಕೆಂದರೆ ನಡೆದು ಕೊಂಡೇ ಹೋಗಬೇಕಿತ್ತು..! ಅಲ್ಲಿನ ಬಹುತೇಕ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೇ ಓದು ಬಿಟ್ಟಿದ್ದರು..! ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಹೈಸ್ಕೂಲ್ ಮೆಟ್ಟಿಲನ್ನೇ ಹತ್ತಿರ್ಲಿಲ್ಲ..!
ಮುಸ್ತಾಫಾರ ಅಪ್ಪ ಅಹ್ಮದ್ ನಾಲ್ಕನೇ ತರಗತಿ ತನಕ ಓದಿ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿದವರು..! ಅಮ್ಮ ಶಾಲೆಗೇ ಹೋದವರಲ್ಲ..!
ಇನ್ನು ಈ ಪರಿಸರದಲ್ಲಿ ಹುಟ್ಟಿದ ಮುಸ್ತಾಫರಿಗೆ ಓದಿನಲ್ಲಿ ಆಸಕ್ತಿ ಇರ್ಲಿಲ್ಲ…! ಶಾಲೆಗೆ ಹೋಗ್ಬೇಕಲ್ಲಪ್ಪಾ ಅಂತ ಹೋಗಿ ಬರ್ತಾ ಇದ್ರಷ್ಟೆ..! ದಿನಾ ಶಾಲೆಯಿಂದ ಬಂದು ಅಪ್ಪನಿಗೆ ಸಹಾಯ ಮಾಡೋಕೆ ಕಾಫಿ ತೋಟಕ್ಕೆ ಹೋಗ್ತಾ ಇದ್ದ ಮುಸ್ತಫಾ ಶನಿವಾರ, ಭಾನುವಾರ ಮತ್ತಿತರ ರಜಾದಿನಗಳಲ್ಲೂ ಅಪ್ಪನೊಡನೆ ಕೂಲಿಗೆ ಹೋಗೋದನ್ನೇ ಮಾಡ್ತಾ ಇದ್ರು..! ಹೋಮ್ ವರ್ಕ್ ಮಾಡಿಕೊಳ್ಳೋದಾಗಲೀ ಅಥವಾ ಕೂತು ಓದುವ ಕೆಲಸವನ್ನಾಗಲೀ ಯಾವತ್ತೂ ಮಾಡಿರ್ಲಿಲ್ಲ..! ಇದೇ ಕಾರಣಕ್ಕಾಗಿ ಆರನೇ ಕ್ಲಾಸ್ ನಲ್ಲಿ ಫೇಲ್ ಆಗಿಬಿಟ್ರು..! ಮುಸ್ತಫಾ ಫೇಲ್ ಆಗಿದ್ದಕ್ಕೆ ಒಳಗೊಳಗೇ ಖುಷಿಪಟ್ಟಿದ್ದರೇನೋ..?! ಶಾಲೆಗೆ ಇನ್ನು ಬರುವುದು ಬೇಡ ಅಂತ..! ಆದರೆ ಹಾಗೆ ಆಗ್ಲೇ ಇಲ್ಲ..! ಮುಸ್ತಫಾರನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕರ್ಕೊಂಡು ಹೋಗ್ಬೇಕು ಅಂತ ಯೋಚಿಸಿದ್ದ ತಂದೆ ಅಹ್ಮದ್ ಅವರಿಗೆ ಮುಸ್ತಫಾರ ಮೇಸ್ಟ್ರು ಮ್ಯಾಥ್ಯು ಕರೆಸಿ ಬುದ್ದಿ ಹೇಳ್ತಾರೆ..! ಮುಸ್ತಫಾ ಶಾಲೆ ಬಿಡುವುದು ಬೇಡ ಅಂತಾರೆ..! ಮುಸ್ತಫಾ ಮತ್ತು ಅವರ ತಂದೆಯನ್ನು ಎದುರ-ಬದುರ ನಿಲ್ಲಿಸಿಕೊಂಡು ಮಾತಾಡಿದ ಮ್ಯಾಥ್ಯು ಮಾಸ್ಟ್ರು ಮುಸ್ತಾಫಾರಿಗೆ ಕೇಳ್ತಾರೆ “ನೋಡು ನೀನು ಕೂಲಿ ಆಗಬೇಕೆಂದಿದ್ದೀಯಾ..? ಅಥವಾ ಶಿಕ್ಷಕನಾಗಬೇಕೆಂದಿದ್ದೀಯಾ..?! ಅಲ್ಲೇ ನಿಂತು ಬುದ್ಧಿ ಹೇಳ್ತಾ ಇದ್ದ ಮಾಥ್ಯು ಸರ್, ಹಾಗೂ ತನ್ನ ತಂದೆ ಇಬ್ಬರನ್ನೂ ನೋಡಿ ಉತ್ತರಕೊಟ್ಟ ಮುಸ್ತಫಾ ಸಾರ್ ನಾನೂ ಶಿಕ್ಷಕನಾಗ್ತೀನಿ ಅಂದೇ ಬಿಟ್ಟರು..! ಮುಸ್ತಾಫಾಗೆ ಮ್ಯಾಥ್ಯು ಮಾಸ್ಟರ್ ಮತ್ತು ತಂದೆಯ ನಡುವಿನ ವ್ಯತ್ಯಾಸ ಗೊತ್ತಾಯ್ತು..! ಕೂಲಿಗಿಂತ ಮಾಸ್ಟರ್ ಆಗೋದೆ ಒಳ್ಳೇದು ಅನ್ನೋದನ್ನು ತಿಳಿದ ಮುಸ್ತಫಾ ಟೀಚರ್ ಆಗ್ತೀನಿ ಅಂತ ಹೇಳಿ ಬಿಟ್ಟಿದ್ರು..! ಅದೇ ಮುಸ್ತಫಾರ ಲೈಫ್ ನ ಮೊದಲ ಪಾಸಿಟೀವ್ ಟರ್ನಿಂಗ್ ಪಾಯಿಂಟ್ ಅನಿಸುತ್ತೆ..! ಅವತ್ತೇ ಓದೋ ಕಡೆ ಗಮನ ಹರಿಸಿದ ಅವರು ಏಳನೇ ತರಗತಿಯಲ್ಲಿ ಇಡೀ ತರಗತಿಗೇ ಫಸ್ಟ್ ಬಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿಬಿಟ್ಟರು..!
ಆರನೇ ಕ್ಲಾಸ್ನಲ್ಲಿ ಫೇಲ್ ಆಗಿದ್ದ ಹುಡುಗ ಏಳನೇ ಕ್ಲಾಸ್ನಲ್ಲಿ ಫಸ್ಟ್ ಬಂದಿದ್ದಲ್ಲದೇ ಹತ್ತನೇ ತರಗತಿಯಲ್ಲೂ ಶಾಲೆಗೇ ಫಸ್ಟ್ ಬಂದು ಬಿಟ್ಟಿದ್ರು..!
ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಕ್ಯಾಲಿಕಟ್ ಕಡೆ ಹೊರಟರು..! ತಂದೆಯ ಸ್ನೇಹಿತರೊಬ್ಬರ ಸಲಹೆ ಮೇರೆಗೆ ಕೋಯಿಕ್ಕೋಡ್ನ ಫಾರೂಕ್ ಕಾಲೇಜಿಗೆ ಸೇರಿದ್ರು..! ಅಲ್ಲಿ ಅವರಿಗೆ ಚಾರಿಟಿ ಹಾಸ್ಟೆಲ್ ಒಂದರಲ್ಲಿ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಯ್ತು..! ಉಚಿತ ಊಟದ ಸೌಲಭ್ಯವನ್ನು ಪಡೆಯತ್ತಿದ್ದ 15 ಜನ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದರು..! ಕಾಲೇಜಿನಲ್ಲಿ ನಾಲ್ಕು ಬೇರೆ ಬೇರೆ ಹಾಸ್ಟೆಲ್ ಗಳಿದ್ದವು..! ತಿಂಡಿಗೊಂದು, ಮಧ್ಯಾಹ್ನ ಊಟಕ್ಕೊಂದು, ರಾತ್ರಿ ಊಟಕ್ಕೊಂದು ಅಂತ..! ಚಾರಿಟಿಯಲ್ಲಿ ಉಚಿತ ಊಟ ಮಾಡ್ತಾ ಇರೋರು ಹೀಗೆ ಬೇರೆ ಬೇರೆ ಹಾಸ್ಟೆಲ್ನಲ್ಲಿ ಊಟ ಮಾಡ್ಬೇಕಿತ್ತು..! ಆಗ ಬೇರೆ ವಿದ್ಯಾರ್ಥಿಗಳು ಇವರನ್ನೆಲ್ಲಾ ನೋಡಿ ನಗ್ತಾ ಇದ್ರು..! ಎಲ್ಲರೂ ಇವರನ್ನು ನಿರ್ಲಕ್ಷ್ಯದಿಂದ ನೋಡ್ತಾ ಇದ್ರು..! ಬೇರೆಯವರ ಆಹಾರವನ್ನು ತಿನ್ನುವ ಹಾಗೇ ಇವರಿಗೆ ನೋವಾಗ್ತಾ ಇತ್ತು..! ತುಂಬಾ ನೊಂದು ಕೊಂಡ್ರು..! ಆದರೆ ಓದ ಬೇಕೆಂಬ ಒಂದೇ ಒಂದು ಉದ್ದೇಶದಿಂದ ಎಲ್ಲಾ ಅಪಮಾನಗಳನ್ನು ತಡೆದುಕೊಂಡ್ರು..! ಅಷ್ಟೇ ಅಲ್ಲದೇ ಹಳ್ಳಿಯಿಂದ ಬಂದ ಇವರು ಇಂಗ್ಲೀಷ್ ನಲ್ಲಿ ತುಂಬಾ ವೀಕ್ ಆಗಿದ್ರು..! ಆದರೂ ಇವರ ಅದೃಷ್ಟಕ್ಕೆ ಒಬ್ಬ ಒಳ್ಳೇ ಗೆಳೆಯ ಎಲ್ಲಾವನ್ನು ಅನುವಾದ ಮಾಡಿ ಅರ್ಥಮಾಡಿಸ್ತಾ ಇದ್ದ..! ಅಮೇಲೆ ನಿದಾನಕ್ಕೆ ಎಲ್ಲವೂ ಅರ್ಥವಾಗ್ತಾ ಹೋಯ್ತು..! ಇಂಗ್ಲೀಷ್ ಕೂಡ ಲೀಲಾಜಾಲವಾಯ್ತು..!
ಅಲ್ಲಿ ಪ್ರಿ-ಡಿಗ್ರಿಯನ್ನು ಮುಗಿಸಿದ (ಇವತ್ತಿನ ಜೂನಿಯರ್ ಕಾಲೇಜ್ ಅಂತ ಹೇಳ್ತೀವಲ್ಲಾ ಇದು ಅಂದಿನ ಪ್ರೀ ಡಿಗ್ರಿ ಕಾಲೇಜ್) ಮುಸ್ತಫಾ ಇಂಜಿನಿಯರಿಂಗ್ ಸೇರೋಕೆ ಅಂತ ಎಕ್ಸಾಮ್ ಬರೆದರು..! ರಾಜ್ಯಕ್ಕೆ 63ನೇ ಸ್ಥಾನ ಪಡೆದ್ರು..! ರೀಜಿನಲ್ ಕಾಲೇಜ್ ಗೆ (ಇವತ್ತಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸೇರಿದ್ರು..! ಸ್ಕಾಲರ್ ಶಿಪ್ ಮತ್ತು ವಿದ್ಯಾರ್ಥಿ ಸಾಲದಿಂದ ಇಂಜಿನಿಯರಿಂಗ್ ಮಾಡಿದ್ರು..! ಹಾಸ್ಟೆಲ್ ನಿರ್ವಹಣೆ ಶುಲ್ಕ ಬಿಟ್ಟರೆ ಮತ್ತೆಲ್ಲವೂ ಉಚಿತವಾಗಿ ಸಿಕ್ತು..! ಉತ್ತಮ ಅಂಕಗಳೊಂದಿಗೆ ಇಂಜಿನಿಯರಿಂಗ್ ಪದವಿದರರಾದ್ರು..! 1995ರಲ್ಲಿ ಮ್ಯಾನ್ಹೋಟನ್ ಅಸೋಷಿಯೇಷನ್ ನಲ್ಲಿ ಕೆಲಸಕ್ಕೆ ಸೇರಿದ್ರು..! ಬೆಂಗಳೂರಲ್ಲಿ ಸ್ವಲ್ಪ ಸಮಯ ಕೆಲಸ ಮಾಡುತ್ತಿದ್ದಂತೆ ಮೊಟರೋಲಾದಿಂದ ಆಫರ್ ಬಂತು..! ಅಲ್ಲಿ ಕೆಲಸಕ್ಕೆ ಸೇರಿ ಸ್ವಲ್ಪ ಸಮಯದಲ್ಲೇ ಅವರನ್ನು ಐರ್ ಲ್ಯಾಂಡ್ ಗೆ ಕಂಪನಿಯಿಂದಲೇ ಕಳುಹಿಸಿಕೊಟ್ಟರು..! ವಯನಾಡಿನ ಹಳ್ಳಿ ಹೈದಾ ಐರ್ ಲ್ಯಾಂಡ್ ವಿಮಾನ ಹತ್ತೇ ಬಿಟ್ಟಿದ್ರು..!
ಅವರೇ ಹೇಳುವಂತೆ ಐರಿಷ್ ಜನರೂ ಐರ್ ಲ್ಯಾಂಡ್ ಕೂಡ ಇಷ್ಟವಾಗ್ತಾ ಇತ್ತಾದರೂ ಭಾರತವನ್ನು, ಭಾರತ ಊಟವನ್ನು, ತನ್ನ ತವರನ್ನು, ಅಪ್ಪ-ಅಮ್ಮನನ್ನು ತುಂಬಾ ಮಿಸ್ ಮಾಡಿಕೊಂಡು ಬಿಟ್ಟಿದ್ರು,..! ಆದ್ರೂ ಜೀವನದಲ್ಲಿ ಅದಾಗಲೇ ಇನ್ನೂ ಎತ್ತರಕ್ಕೆ ಬೆಳಿಬೇಕೆಂಬ ಆಸೆ ಚಿಗುರೊಡೆದಿತ್ತು..! ಸಾಧಿಸುವ ಹುಮ್ಮಸ್ಸು, ಛಲವಿತ್ತು..! ದೂರದ ಗುರಿಯೊಂದು ಇವರನ್ನು ಕೈ ಬೀಸಿ ಕರೀತಾ ಇತ್ತು..! ಐರ್ ಲ್ಯಾಂಡ್ ನಿಂದ ದುಬೈಗೆ ಹೋದ್ರು..! ಕೈತುಂಬಾ ದುಡ್ಡು ಸಿಕ್ತು..! ತನ್ನ ಹಳ್ಳಿಯಲ್ಲಿ ಅಪ್ಪ-ಅಮ್ಮನಿಗಾಗಿ ಒಂದೊಳ್ಳೆ ಮನೆಯನ್ನೂ ಕಟ್ಟಿಸಿಕೊಟ್ರು..! ಸಾಲವನ್ನೂ ತೀರಿಸಿದ್ರು..! ಮನೆಯಲ್ಲಿ ಇವರೇ ಹಿರಿಮಗ, ಇವರಿಗೆ ಇಬ್ಬರು ತಂಗಿಯರಿದ್ರು. ತಂಗಿಯರ ಮದುವೆಯನ್ನೂ ಮಾಡಿದ್ರು..! 2000ರಲ್ಲಿ ಇವರೂ ಮದುವೆ ಆದ್ರು.
ದುಡ್ಡು, ಗೌರವ ಎಲ್ಲವೂ ಸಿಕ್ತು. ಆದರೆ ಭಾರತದಲ್ಲಿನ ನೆಮ್ಮದಿ ಅವರಿಗೆ ಎಲ್ಲೂ ಸಿಗಲಿಲ್ಲ..! ಅಪ್ಪ-ಅಮ್ಮನ ಜೊತೆ ಕಾಲಕಳೆಯೋಣ ದುಡಿದಿದ್ದು ಸಾಕು ಅಂತ 2003ರಲ್ಲಿ ಭಾರತಕ್ಕೆ ವಾಪಸ್ಸಾದ್ರು..! ದೊಡ್ಡ ಉದ್ಯಮಿಯಾಗಿ ಗ್ರಾಮೀಣ ಯುವಕರಿಗೆ ಕೆಲಸ ಕೊಡಬೇಕು ಅಂತ ಡಿಸೈಡ್ ಮಾಡಿದ್ರು..! ಸಿಎಟಿ ಎಕ್ಸಾಮ್ ಪಾಸ್ ಮಾಡಿ ಬೆಂಗಳೂರಿನ ಐಐಎಂನಲ್ಲಿ ಎಂಬಿಎಗೆ ಸೇರಿದ್ರು.
ಹೀಗೆ ಒಮ್ಮೆ ಬ್ಯುಸ್ನೆಸ್ ಬಗ್ಗೆ ಮಾತಾಡ್ತಾ ಇರುವಾಗ ಹತ್ತಿರ ಸಂಬಂಧಿ ಶಂಶುದ್ದೀನ್ ಎಂಬುವವರು ದೋಸೆ, ಇಡ್ಲಿ ಹಿಟ್ಟನ್ನು ಮಾರೋ ಐಡಿಯಾ ಕೊಟ್ಟರು..! ಅವರು ತಮಾಷೆಗೆ ಹೆಳಿದ್ದೋ ಏನೋ ಗೊತ್ತಿಲ್ಲ..! ಆದರೆ ಈ ಐಡಿಯಾ ಮುಸ್ತಫಾರಿಗೆ ಇಷ್ಟವಾಗಿ ಬಿಡ್ತು..! ಕೂಡಲೇ ಸಣ್ಣಜಾಗದಲ್ಲಿ ಮಿಕ್ಸಿ, ಗ್ರೈಂಡರ್ ಹಾಕಿದ್ರು..! 50% ಇವರು ಬಂಡವಾಳ ಹೂಡಿದ್ರು..! ಇನ್ನ 50% ಇವರ ಸಂಬಂಧಿಕಾರದ ನಾಜಿರ್, ಶಂಶು, ಜಾಫರ್, ನೌಶಾದ್ ಹಾಕಿದ್ರು..! ಐದು ಜನ ಸೇರಿ ಇಡ್ಲಿ, ದೋಸಾ ಹಿಟ್ಟಿನ ಉದ್ಯಮವನ್ನು ಶುರುಮಾಡಿದ್ರು,..! ಆರಂಭದಲ್ಲಿ ಹತ್ತಿರದ ಅಂಗಡಿಗಳಿಗೆ ಕೊಡ್ತಾ ಬಂದ್ರು..! ಮೊದಲ ತಿಂಗಳಲ್ಲಿ ಎಲ್ಲಾ ಖರ್ಚು ಕಳೆದು ಉಳಿದಿದ್ದು 400 ರೂ..! ಬರ್ತಾ ಬರ್ತಾ ಒಳ್ಳೇ ಲಾಭ ಆಗ್ತಾ ಬಂತು..! ಹೆಚ್ಚು ಹೆಚ್ಚು ಬಂಡವಾಳ ಹಾಕಿ ದೊಡ್ಡ ಮಟ್ಟದಲ್ಲಿ ಉದ್ಯಮ ಮುಂದುವರೆಸಿದ್ರು…! ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬಂಡವಾಳ ಹಾಕ್ತಾ ಹಾಕ್ತಾ ಹೆಚ್ಚು ಹೆಚ್ಚು ಲಾಭವನ್ನು ಪಡೀತಾ ಬಂದ್ರು..! 2005ರಲ್ಲಿ 10 ಪ್ಯಾಕ್ ಮಾರಟದಿಂದ ಶುರುವಾದ ಇವರ ಉದ್ಯಮ ಇವತ್ತು ದಿನಕ್ಕೆ 50,000 ಪ್ಯಾಕೇಟ್ ಹಿಟ್ಟುಗಳು ಮಾರಾಟವಾಗ್ತಾ ಇವೆ…! ಹೆಚ್ಚು ಕಡಿಮೆ ನಾಲ್ಕು ಕೋಟಿ ಬಂಡವಾಳ ಹೂಡಿದ್ದಾರೆ..! 100 ಕೋಟಿ ಆದಾಯ ಇವರ್ದಾಗಿದೆ..! ಗ್ರಾಮೀಣ ಭಾಗದ 1,100ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ..!
ಇವರ ಇಡ್ಲಿ, ವಡಾ, ದೋಸಾ ಹಿಟ್ಟು ಬೆಂಗಳೂರು, ಚೆನ್ನೈ, ಪುಣೆ, ದೆಹಲಿ, ಹೈದರಾಬಾದ್, ಮಂಗಳೂರು, ದುಬೈಯಲ್ಲೂ ಕೂಡ ಮನೆ ಮನೆಗೆ ತಲುಪ್ತಾಇದೆ..! ಮುಸ್ತಫಾರ ಕಂಪನಿ ದೊಡ್ಡದಾಗಿ ಬೆಳೀತಾ ಇದೆ..!
ಕುಗ್ರಾಮದಲ್ಲಿ ಕೂಲಿಯ ಮಗನಾಗಿ ಹುಟ್ಟಿದ ವ್ಯಕ್ತಿ ಇವತ್ತು 100 ಕೋಟಿ ಬೆಲೆ ಬಾಳೋ ಕಂಪನಿಯ ಒಡೆಯ..! ಇವರ ಲೈಫ್ ನಲ್ಲಿ ಎಂಥಾ ಬದಲಾವಣೆ ಆಯ್ತು ಅಲ್ವಾ..?! ಸಣ್ಣ ಕೆಲಸವೇ ಆಗಿರಲಿ ನಿಷ್ಠೆಯಿಂದ ಮಾಡಿ..! ಹೊಸ ಆಲೋಚನೆಗಳು ಬಂದ ಕೂಡಲೇ ಅದನ್ನು ಕಾರ್ಯರೂಪಕ್ಕೆ ತನ್ನಿ..! ಕಷ್ಟಪಡಿ. ಯಶಸ್ಸು ನಿಮ್ಮದೇ ಅಂತ ಹೇಳುತ್ತೆ ಈ ಮುಸ್ತಫಾರ ಲೈಫ್ ಸ್ಟೋರಿ..!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!