ಹುಚ್ಚವೆಂಕಟ್ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಕುಡಿದು ಬೀದಿಯಲ್ಲಿ ರಂಪಾಟ ಮಾಡಿದ್ದ ಹುಚ್ಚವೆಂಕಟ್ ಇಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹುಚ್ಚಾಟ ಮಾಡಿದ್ದಾರೆ..!
ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ವೆಂಕಟ್ ಮೊನ್ನೆಯ ಬೀದಿ ರಂಪಾಟದ ಬಗ್ಗೆ ದೂರು ದಾಖಲಿಸಲು ಮುಂದಾಗಿದ್ದರು.
ತನ್ನ ಕಂಪ್ಲೆಂಟ್ ಯಾರೂ ತಗೋಳ್ತಾ ಇಲ್ಲ. ಅದಕ್ಕೆ ಇಲ್ಲಿಗೆ ಬಂದಿದ್ದೀನಿ ಎಂದು ವೆಂಕಟ್ ಹೇಳಿದ್ದಾರೆ.
ವೆಂಕಟ್ ಎರಡು ದಿನದ ಹಿಂದೆ ಉಲ್ಲಾಳದ ಬಾರ್ ವೊಂದರಲ್ಲಿ ಕುಡಿದು ಬೀದಿಯಲ್ಲಿ ಅಡ್ಡಾಡಿದ್ದರು. ಬೇಕರಿಯೊಂದರ ಮುಂದೆ ರಂಪಾಟ ಮಾಡಿದ್ದರು. ಓರ್ವನ ಮೇಲೆ ಹಲ್ಲೆ ನಡೆಸಿದ್ದರು. ಆರ್ ಆರ್ ನಗರ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದರು.
ಇಂದು ವೆಂಕಟ್ ಘಟನೆಗೆ ಸಂಬಂಧಪಟ್ಟಂತೆ ಬೇಕರಿ ಮಾಲೀಕರ ವಿರುದ್ಧ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದವರ ವಿರುದ್ಧ ದೂರು ನೀಡಲು ಕಮಿಷನರ್ ಕಚೇರಿಗೆ ಹೋಗಿದ್ದರು.