ಇಂತಹ ಘಟನೆ ಲಕ್ಷಕ್ಕೊಂದು ನಡೆಯುತ್ತವೆ. ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉದಾಹರಣೆಯಾಗುತ್ತವೆ..! ಕೃಷಿ ಪ್ರಧಾನ ದೇಶ ಎನಿಸಿಕೊಂಡರು ನಮ್ಮಲ್ಲಿ ಅನೇಕ ಜನರಿಗೆ ಇಂದಿಗೂ ಸರಿಯಾಗಿ ಆಹಾರ ದೊರೆಯುತ್ತಿಲ್ಲ. ಆಹಾರ ಇದ್ದವರು, ಅಗತ್ಯಕ್ಕಿಂತ ಹೆಚ್ಚು ಆಹಾರ ಹೊಂದಿರುವವರು ದಾನ ಮಾಡುವ ಔದಾರ್ಯ ತೋರುವುದಿಲ್ಲ. ಆದ್ದರಿಂದ ಅಪಾರ ಪ್ರಮಾಣದ ಆಹಾರ ವ್ಯಯವಾಗುತ್ತಿದೆ. ಆದರೆ ಕೇರಳದಲ್ಲೊಂದು ಘಟನೆ ನಡೆದಿದೆ. ಆ ಘಟನೆ ತಡವಾಗಿ ಬಹಿರಂಗವಾಗಿದೆಯಾದರೂ ಓದಿದವರ ಹೃದಯ ತಟ್ಟುವುದಂತೂ ಖಚಿತ.
ದುಬೈನಲ್ಲಿ ಇಂಜಿನಿಯರ್ ಆಗಿರುವ ಕೇರಳ ಮೂಲದ ಅಖಿಲೇಶ್ ಕುಮಾರ್ ಎಂಬವರು ಇದೇ ಜನವರಿ 6 ರಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದು ವೈರಲ್ ಕೂಡಾ ಆಗಿದೆ. ಅಸಂಖ್ಯಾತ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಕೇರಳದ ಮಲಪ್ಪುರಂನಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಅಖಿಲೇಶ್ ಕುಮಾರ್ ಊಟಕ್ಕೆಂದು ತೆರಳಿದ್ದು, ಊಟವನ್ನು ಆರ್ಡರ್ ಮಾಡಿದ್ದಾರೆ. ಊಟ ತಂದಿಟ್ಟ ವೇಳೆ ಅದನ್ನು ಬಡ ಒಬ್ಬ ಬಾಲಕ ಹಾಗೂ ಬಾಲಕಿ ನೋಡುತ್ತಿರುವುದು ಅವರಿಗೆ ಕಾಣಿಸುತ್ತದೆ. ಅದನ್ನು ಕಂಡ ಅಖಿಲೇಶ್ ಮನ ಕರಗುತ್ತದೆ. ಚಿಂದಿ ಆಯುವ ಆ ಸಹೋದರ ಹಾಗೂ ಸಹೋದರಿಯನ್ನು ಅಖಿಲೇಶ್ ಕುಮಾರ್ ಕರೆದು ಊಟ ಕೊಡಿಸುತ್ತಾರೆ. ಅವರುಗಳು ಅದನ್ನು ಸಂತೃಪ್ತಿಯಿಂದ ತಿನ್ನುವುದನ್ನು ಕಂಡ ಅಖಿಲೇಶ್ ಕುಮಾರ್ ಗೆ ಸಾರ್ಥಕ ಭಾವ ಮೂಡುತ್ತದೆ. ಅದಕ್ಕಿಂತಲೂ ಅವರಿಗೆ ಅಚ್ಚರಿಯಾಗುವುದು ಬಿಲ್ ತಂದಿಟ್ಟ ವೇಳೆ.
ಅಖಿಲೇಶ್ ಕುಮಾರ್ ಚಿಂದಿ ಆಯುವ ಮಕ್ಕಳಿಗೆ ಊಟ ಕೊಡಿಸಿದ್ದನ್ನು ನೋಡಿದ್ದ ರೆಸ್ಟೋರೆಂಟ್ ಮಾಲೀಕ, ಬಿಲ್ ಮೇಲೆ `ಹಣ ಪಡೆಯಲು ನಾವು ಯಂತ್ರವಲ್ಲ, ಮನುಷ್ಯರು’ ಎಂದು ಬರೆದಿರುತ್ತಾರಲ್ಲದೇ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನು ಕಂಡು ಅಖಿಲೇಶ್ ಕುಮಾರ್ ರ ಕಣ್ಣು ತೇವವಾಗುತ್ತದೆ. ಈ ಬಿಲ್ ಅನ್ನು ಈಗ ಅಖಿಲೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಅಂದು ನಡೆದ ಘಟನೆಯನ್ನು ಬರೆದುಕೊಂಡಿದ್ದಾರೆ. ಅದು ವೈರಲ್ ಆಗಿದ್ದು, ಇನ್ನೂ ಮಾನವೀಯತೆ ಜೀವಂತವಾಗಿದೆ ಎಂದು ಸಾರುತ್ತಿದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!