ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

1
54

ದೇಶದ ರೈಲು ನಿಲ್ದಾಣಗಳಲ್ಲಿ ಇನ್ನು ಫ್ರೀ ವೈಫೈ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಹಾಗೂ ಗೂಗಲ್ ಸಂಸ್ಥೆ ಮಧ್ಯೆ ನಡೆದ ಒಪ್ಪಂದದ ಫಲವಾಗಿ ಇಂದಿನಿಂದ ದೇಶದ 407 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಗೂಗಲ್ ನೀಡುತ್ತಿದೆ. ಈಗಾಗಲೇ 407 ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಾಗಿದ್ದು, ಇನ್ನೂ 100 ರೈಲು ನಿಲ್ದಾಣಗಳಿಗೆ ವಿಸ್ತಾರಗೊಳ್ಳಲಿದೆ. ಮುಂಬೈ ರೈಲು ನಿಲ್ದಾಣ ಇದನ್ನು ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಂಡ ಕೀರ್ತಿಗೆ ಭಾಜನವಾಗಿದೆ..!
ಗೂಗಲ್ ಸಿಇಓ ಸುಂದರ್ ಪಿಚ್ಚೈ ಪ್ರಕಾರ ಇದು ಸಾಮಾನ್ಯ ವೈಫೈಗಳಿಗಿಂತ ವೇಗವಾಗಿ ಕೆಲಸ ಮಾಡಲಿದ್ದು, ಪುಸ್ತಕ ಡೌನ್ ಲೋಡ್ ಮಾಡಲು, ವೀಡಿಯೋಗಳನ್ನು ನೋಡಲು ಇದು ನೆರವಾಗಲಿದೆ. ಇನ್ನು, ಪ್ರಯಾಣಿಕರಿಗೆ 30 ನಿಮಿಷಗಳ ಕಾಲ ಅತ್ಯಧಿಕ ವೇಗದ ಇಂಟರ್ನೆಟ್ ಲಭ್ಯವಾಗಲಿದ್ದು, ನಂತರ ಅದರ ವೇಗ ಕಡಿಮೆಯಾಗುತ್ತದೆ. ಇದು ಸಂಪೂರ್ಣ ಉಚಿತ ಎನ್ನಲಾಗಿದೆ. ಪ್ರಸ್ತುತ ರೈಲ್ವೆ ಇಲಾಖೆ ಆಯ್ದ ಕೆಲ ಮಾರ್ಗಗಳಲ್ಲಿ, ಕೆಲ ರೈಲುಗಳಲ್ಲಿ ಮಾತ್ರ ಉಚಿತ ಇಂಟರ್ನೆಟ್ ಸೌಲಭ್ಯ ನೀಡುತ್ತಿದೆ.
ಗೂಗಲ್ ಸಿಇಒ ಸುಂದರ್ ಪಿಚ್ಚೈರವರು ಭಾರತಕ್ಕೆ ಭೇಟಿ ನೀಡಿದಾಗ ಈ ಒಪ್ಪಂದ ಏರ್ಪಟ್ಟಿತ್ತು. ಅದು ಈಗ ಕಾರ್ಯಗತಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾಗೆ ನೆರವು ನೀಡಲು ಸುಂದರ್ ಪಿಚ್ಚೈಯವರು ಈ ಯೋಜನೆಗೆ ಕೈಜೋಡಿಸಿದ್ದಾರೆ. ವೈಫೈ ಸೌಲಭ್ಯ ಸಂಪೂರ್ಣ ಉಚಿತವಾಗಿರಲಿದ್ದು, ದೇಶದ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಇಂಟನರ್ೆಟ್ ಬಳಕೆ ಮಾಡಲು ಇದು ನೆರವಾಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ನೆಟ್ ಬಳಕೆ ಮಾಡಿದರೆ ದೇಶದ ಅಭಿವೃದ್ದಿಗೆ ನೆರವಾಗಲಿದೆ ಎಂದು ಗೂಗಲ್ ಸಿಇಓ ಸುಂದರ್ ಪಿಚ್ಚೈ ಹೇಳಿದ್ದಾರೆ.
ಗೂಗಲ್ ಮತ್ತು ಇಂಡಿಯನ್ ರೈಲ್ವೇ ಮಧ್ಯೆ ನಡೆದಿರುವ ಈ ಒಪ್ಪಂದಿಂದಾಗಿ ಸುಮಾರು 407ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫೈ ಸಿಗುತ್ತಿದ್ದು, ದೇಶದ ಅತಿ ದೊಡ್ಡ ವೈಫೈ ಪ್ರಾಜೆಕ್ಟ್ ಎಂಬ ಕೀರ್ತಿಗೆ ಭಾಜನವಾಗಿದೆ. ವಿಶೇಷವೆಂದರೆ 2015ರಲ್ಲೇ ದೇಶದ 100 ರೈಲು ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ದೊರೆತಿದೆ.
ರೈಲು ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವಾಗ ಬೋರ್ ಹೊಡೆಯುವುದು ಸಾಮಾನ್ಯ. ಆದರೆ ಈಗ ವೈಫೈ ಸೌಲಭ್ಯ ದೊರೆತಿರುವುದರಿಂದ ಟೈಮ್ ಪಾಸ್ ಮಾಡಲು ನೆರವಾಗುತ್ತದೆ. ಅಲ್ಲದೇ ಜ್ಞಾನದ ಮಟ್ಟವೂ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

1 COMMENT

LEAVE A REPLY

Please enter your comment!
Please enter your name here