ನಿಮಗೆ ಮದುವೆ ವಯಸ್ಸಾಗಿದೆಯಾ? ಹುಡುಗಿ ಹುಡುಕುತ್ತಾ ಇದ್ದೀರ? ಇನ್ನೂ ಹುಡುಗಿ ಸಿಕ್ಕಿಲ್ವಾ? ತಲೆಕೆಡಿಸಿಕೊಳ್ಳಬೇಡಿ.. ನಿಮಗೊಂದು ಒಳ್ಳೆಯ ಅವಕಾಶವಿದೆ. ಆದರೆ ನೀವು ವಿದೇಶಕ್ಕೆ ಹೋಗಲು ರೆಡಿಯಾಗಬೇಕಷ್ಟೇ..!
ಮದುವೆಗೂ ವಿದೇಶಕ್ಕೂ ಸಂಬಂಧವೇನು ಅಂತೀರಾ? ಸಂಬಂಧವಿದೆ, ನೀವು ಮದುವೆಯಾಗಬೇಕಾಗಿರುವುದು ಐಸ್ಲ್ಯಾಂಡ್ ಹುಡುಗಿಯನ್ನು..!
ಐಸ್ಲ್ಯಾಂಡ್‍ನಲ್ಲಿ ಮಹಿಳೆಯರಿಗಿಂತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪುರುಷರಿದ್ದಾರೆ. ಆದ್ದರಿಂದ ಈ ದೇಶದ ಯುವತಿಯರನ್ನು ಮದುವೆ ಮಾಡಿಕೊಳ್ಳುವ ಬೇರೆ ದೇಶದ ಯುವಕರಿಗೆ ಅಲ್ಲಿನ ಸರಕಾರ ಪ್ರತಿ ತಿಂಗಳು 5ಸಾವಿರ ಡಾಲರ್ (ಸುಮಾರು 3 ಲಕ್ಷದ 25ಸಾವಿರ ರೂ) ಹಣ ನೀಡುತ್ತೆ..! ಅಷ್ಟೇ ಅಲ್ಲ ಈ ಆ ದೇಶದ ನಾಗರಿಕತ್ವವವನ್ನು ಸಹ ಉಚಿತವಾಗಿ ನೀಡಲಿದೆ. ಮದುವೆ ಬಳಿಕ ಆ ದೇಶದಲ್ಲೇ ಉಳಿಯಬೇಕೆಂಬ ಏಕಮಾತ್ರ ನಿಯಮವನ್ನು ಪಾಲಿಸಬೇಕಷ್ಟೆ. ಅಲ್ಲಿನ ಹುಡುಗಿ ಎಂದ ಮಾತ್ರಕ್ಕೆ ಅವರು ಸೂಚಿಸಿದ ಹುಡುಗಿಯನ್ನೇ ಮದುವೆ ಆಗಬೇಕೆಂದೇನಿಲ್ಲ. ಆ ದೇಶದ ಹುಡುಗಿಯ ಆಯ್ಕೆಯೂ ನಿಮ್ಮದೇ (ಹುಡುಗನದ್ದೇ).
ಹೀಗೆಂದು ಫೇಸ್‍ಬುಕ್ ಮೇಮೆ ಹರಿದಾಡುತ್ತಿದ್ದು, ನಾನಾ ಕಡೆಗಳಲ್ಲಿ, ಆಫ್ರಿಕನ್ ವೆಬ್‍ಸೈಟ್‍ಗಳಲ್ಲಿಯೂ ವರದಿ ಕೂಡ ಆಗಿದೆ. ಅನೇಕ ರಾಷ್ಟ್ರಗಳು ಲಿಂಗಾನುಪಾತದಲ್ಲಿ ಭಾರಿ ಅಂತರದ ಸಮಸ್ಯೆ ಎದುರಿಸುತ್ತಿರುವುದರಿಂದ ಹಲವು ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಆದ್ದರಿಂದ ಐಸ್ಲೈಂಡ್ ಕೂಡ ಇಂತಹದ್ದೊಂದು ಕೊಡುಗೆ ನೀಡಿದೆ ಎಂದು ಭಾವಿಸಿ ಅನೇಕರು ಐಸ್ಲೈಂಡ್ ಪ್ರಜೆಗಳನ್ನು ಫೇಸ್‍ಬುಕ್‍ನಲ್ಲಿ ಪರಿಚಯಮಾಡಿಕೊಂಡು ವಿಚಾರಿಸಿದ್ದಾರೆ.
ಅಲ್ಲಿನ ರಾಯಭಾರಿಗಳನ್ನೂ ವಿಚಾರಿಸಿದ್ದಾರೆ. ಬಳಿಕ ಇದು ಕೇವಲ ವದಂತಿ ಎಂದು ಗೊತ್ತಾಗಿದೆ. ಆದರೆ, ವಿಷಯ ವೈರಲ್ ಆಗಿರುವುದರಿಂದ ಫೇಸ್‍ಬುಕ್‍ನಲ್ಲಿ ಐಸ್ಲೈಂಡ್ ಹುಡುಗಿಯರಿಗೆ ಹುಡುಕುತ್ತಿರುವವರೇನೂ ಕಡಿಮೆ ಇಲ್ಲ!
- ಸುಕನ್ಯಾ ಗೌಡ