ಬೆಂಗಳೂರು : ಚಾಮರಾಜಪೇಟೆಯ ಈದ್ಗಾ ಮೈದಾನವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 1974ರ ಸಿಟಿ ಸರ್ವೆ ಪ್ರಕಾರ ಇದು ಆಟದ ಮೈದಾನ. ಸರ್ವೆ ಪ್ರಕಾರ ಈ ಮೈದಾನ ಪಾಲಿಕೆಗೆ ಸೇರಿದೆ. ಅಲ್ಲಿ ಪ್ರಾರ್ಥನೆ ಮಾಡುವ ಸ್ಟಕ್ಚರ್ ಇದೆ ಅಂತ ನಮೂದು.
ಈ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಪ್ರತಿ ಸಿಕ್ಕಿದೆ. ಆದರೆ ಆದೇಶದ ಪ್ರತಿಯಲ್ಲಿ ಒಂದು ಪೇಜ್ ಮಿಸ್ ಆಗಿದೆ. ಈ ಬಗ್ಗೆ ಸೂಕ್ತ ದಾಖಲೆ ಇದ್ದರೆ ತಂದು ಕೊಡಬಹುದು. ಅಲ್ಲಿ ವರ್ಷಕ್ಕೆ 2 ಬಾರಿ ಪ್ರಾರ್ಥನೆ ಮಾಡಲು ಅವಕಾಶ ಇದೆ. ಪ್ರಾರ್ಥನೆ ಮಾಡಲು ನಾವು ಅಡ್ಡಿಪಡಿಸಲ್ಲ. ಮೈದಾನದಲ್ಲಿ ಮಕ್ಕಳು ಆಟವಾಡಲು ಯಾವುದೇ ತೊಂದರೆ ಇಲ್ಲ ಎಂದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.