ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರವಹಿಸಿಕೊಳ್ಳುವ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಬೇಕೆಂದು ಪ್ರಸ್ತಾವನೆ ಪಿಟಿಐ ಪಕ್ಷದಿಂದ ಬಂದಿದ್ದು, ಅಧಿಕೃತ ನಿರ್ಧಾರ ಪ್ರಕಟವಾಗಬೇಕಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಮ್ರಾನ್ ಖಾನ್ ಅವರಿಂದ ಇನ್ನೂ ಆಹ್ವಾನ ಬಂದಿರದೇ ಇರಬಹುದು? ಆದರೆ, ಭಾರತದಲ್ಲಿ ಬೇರೆ ಅವರಿಗೆ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

ಇಮ್ರಾನ್ ಖಾನ್ ಮಾಜಿ ಕ್ರಿಕೆಟಿಗರು. ಜಾಗತಿಕ ಮಟ್ಟದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಭಾರತದಲ್ಲಿನ ಕ್ರಿಕೆಟ್ ಸ್ನೇಹಿತರನ್ನು ಇಮ್ರಾನ್ ಖಾನ್ ಆಹ್ವಾನಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿಧು, ಸುನಿಲ್ ಗವಾಸ್ಕಾರ್, ಕಪಿಲ್ ದೇವ್ ಅವರನ್ನು ಈಗಾಗಲೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಜೊತೆಗೆ ನಟ ಅಮಿರ್ ಖಾನ್ ಗೂ ಆಹ್ವಾನ ಬಂದಿದೆ






