No menu items!
10.8 C
Munich
Wednesday, April 29, 2026

ದೂರು ನೀಡಿದವರ ಬಗ್ಗೆ ನಿವೇಧಿತಾ ಹೇಳಿದ್ದೇನು?

Must read

ಕಿಕಿ ಚಾಲೆಂಜ್ ಸ್ವೀಕರಿಸಿ ಡ್ಯಾನ್ಸ್ ಮಾಡಿದ್ದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ತನ್ನ ವಿರುದ್ಧ ದೂರು ನೀಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ…!

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ನನಗೆ ಬ್ಯಾನ್ ಆಗಿದೆ ಎಂದು ಗೊತ್ತಾಗದೆ ಮಾಡಿದೆ. ತಿಳಿದ ಕೂಡಲೇ ಡಿಲೀಟ್ ಮಾಡಿದ್ದೀನಿ. ನಾನು ಡಿಲೀಟ್ ಮಾಡಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನನ್ನ ತಪ್ಪು ಹೈಲೈಟ್ ಆಗ್ತಿದೆ, ಆದರೆ , ರಿಯಲೈಸೇಷನ್ ಹೈಲೈಟ್ ಆಗ್ತಿಲ್ಲ ಎಂದಿದ್ದಾರೆ.


ದೂರು ನೀಡಿರುವವರು ಚಿಕ್ಕವಳು ಕಾನೂನು ಹೋರಾಟ ಹೇಗೆ ನಡೆಸುತ್ತಾಳೆ ಎಂಬುದನ್ನು ಯೋಚಿಸಬಹುದಿತ್ತು. ಅವರು ದೊಡ್ಡವರು ಒಳ್ಳೆಯ ಮಾತಲ್ಲಿ ಹೇಳಿದ್ದರೆ ನಾನು ಕೇಳುತ್ತಿದ್ದೆ . ನಾನೇನು ಯಾರನ್ನೂ ಪ್ರಚೋದಿಸುವ ಉದ್ದೇಶದಿಂದ ಮಾಡಿಲ್ಲ ‌. ಯಾರದರೂ ಹೇಳಿದ್ದರೆ ಕ್ಷಮೆ ಕೇಳಿ, ಈ ರೀತಿ ಡ್ಯಾನ್ಸ್ ಮಾಡಬೇಡಿ ಎಂಬ ಸಂದೇಶ ನೀಡುತ್ತಿದ್ದೆ ಎಂದು ವಿನಮ್ರವಾಗಿ ತಿಳಿಸಿದರು.
ದೂರು ನೀಡಿದವನ್ನು ಪ್ರಶ್ನಿಸುವುದಿಲ್ಲ.‌ ದೇವರು ಅವರಿಗೆ ಒಳ್ಳೆಯದನ್ನೇ ಮಾಡಲಿ. ಅವರು ಚೆನ್ನಾಗಿರಲಿ ಎಂದು ಬೇಬಿ ಡಾಲ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article