ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?

Date:

raaaಬಹುಕಾಲದ ಶತ್ರು ರಾಷ್ಟ್ರ ಚೀನಾಕ್ಕೆ ತನ್ನ ಪ್ರಾಬಲ್ಯ ತೋರಿಸಲು ಜಪಾನ್ ಕೆಲ ತಿಂಗಳ ಹಿಂದೆ ತನ್ನ ಮಿಲಿಟರಿ ಪವರ್ರನ್ನು ಪ್ರದರ್ಶನಕ್ಕಿಟ್ಟಿತ್ತು. ಅದಕ್ಕುತ್ತರವಾಗಿ ಚೀನಾ, ಯಾವುದೇ ದೇಶದಿಂದ ಪರ್ಚೇಸ್ ಮಾಡದ, ಸ್ವತಃ ತನ್ನ ದೇಶದಲ್ಲೇ ತಯಾರಿಸಿದ ಅತ್ಯಾಧುನಿಕ ವೆಪನ್ ಗಳನ್ನು ಜಗತ್ತಿನ ಮುಂದೆ ಪ್ರದರ್ಶನಕ್ಕಿಟ್ಟಿತ್ತು. ಆ ಮೂಲಕ, `ನಮ್ಮ ತಂಟೆಗೆ ಬಂದರೇ ಹುಷಾರ್’ ಎಂದು ಮೆಸೇಜ್ ತಲುಪಿಸಿದೆ. ಈ ಮೆಸೇಜ್ ಭಾರತಕ್ಕಾ..? ಜಪಾನ್ ಗಾ..? ಅಮೆರಿಕಾಕ್ಕಾ..? ರಷ್ಯಾಗಾ..? ನಿಖರವಾಗಿ ಹೇಳುವುದು ಕಷ್ಟ.

ಜಪಾನ್ ಶಕ್ತಿ ಪ್ರದರ್ಶನ ಮಾಡಿದ ಬೆನ್ನಿಗೆ ತನ್ನ ಮಿಲಿಟರಿ ಪವರ್ ಅನ್ನು ಬಹಿರಂಗಪಡಿಸಿರುವುದರಿಂದ, ಅದು ಜಪಾನ್ಗೆ ತಲುಪಿಸಿದ ಸಂದೇಶ ಎಂದೇ ಹೇಳಲಾಗುತ್ತಿದೆ. ಚೀನಾಕ್ಕೂ
ಜಪಾನ್ಗೂ ಬಹುಕಾಲದ ವೈಷಮ್ಯ. ಮುಗಿಯದ ಶತ್ರುತ್ವ. ಎರಡನೇ ವಿಶ್ವಯುದ್ಧದಲ್ಲಿ ಚೀನಾದ ಮೇಲೆ ಎರಗಿ ಹೋದ ಜಪಾನನ್ನು ಅಟ್ಟಾಡಿಸಿ ಹೊಡೆದಿತ್ತು ಚೀನಾ. ಅಷ್ಟು ಮಾತ್ರವಲ್ಲ, 2ನೇ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿ 70 ವರ್ಷ ತುಂಬಿದ ದಿನದಂದೇ ತನ್ನ ಅಭೂತಪೂರ್ವ ಮಿಲಿಟರಿ ಶಕ್ತಿಯನ್ನು ಅದು ಅನಾವರಣಗೊಳಿಸಿತ್ತು. ಚೀನಾ ಮೊಟ್ಟ ಮೊದಲ ಬಾರಿಗೆ ತನ್ನಲ್ಲಿರುವ ಶೇಕಡಾ 80ರಷ್ಟು ಮಿಲಿಟರಿ ಸಾಧನಗಳನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟಿತ್ತು. ಆದರೆ ತನ್ನ ಶಕ್ತಿ ಪ್ರದರ್ಶನಕ್ಕೆ ಪಾಕ್ ಸೈನಿಕರನ್ನು ಕರೆಸಿಕೊಂಡ ಚೀನಾದ ಅಧ್ಯಕ್ಷ ಭಾರತವನ್ನು ತಿರುಗಿಯೂ ನೋಡಿಲ್ಲ. ಅದಕ್ಕೆ ತನ್ನ ಶತ್ರು ರಾಷ್ಟ್ರ ಜಪಾನ್ ಎಂದು ಗೊತ್ತಿದೆ. ಜಪಾನ್ಗೆ ಭಾರತ ಮಿತ್ರ ಎಂಬುದು ತಿಳಿದಿದೆ. ಇದರ ಜೊತೆಗೆ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಲು ತನಗೆ ಭಾರತ ಅಡ್ಡಿ ಎಂದೂ ಅದಕ್ಕೆ ಗೊತ್ತಿದೆ. ಅಲ್ಲದೇ ಜಪಾನ್ಗೆ ಭಾರತ ಮಣೆ ಹಾಕುತ್ತಿರುವುದರಿಂದ ಅದು ಪಾಕಿಸ್ತಾನಕ್ಕೆ ಚಿತಾವಣೆ ಮಾಡಿ ಭಾರತವನ್ನು ಕೆಣಕುತ್ತಿದೆ. ಎಲ್ಲವೂ ಪ್ರಾಬಲ್ಯದ ಲೆಕ್ಕಾಚಾರ.

ಚೀನಾ, ಜಪಾನ್ ಮೇಲೆ ಮಹಾಯುದ್ಧ ಗೆದ್ದ ದಿನದಂದೇ ತನ್ನ ಮಿಲಿಟರಿ ಪವರ್ ಅನ್ನು ಪ್ರದರ್ಶನಕ್ಕಿಟ್ಟಿತ್ತು. ಚೀನಾ ಅವತ್ತಿಗಿಂತ ಇವತ್ತು ಅತ್ಯಂತ ಬಲಿಷ್ಠವಾಗಿದೆ. ಅದಕ್ಕೆ ಭಾರತದ ಮೇಲೆ ತಣ್ಣನೇ ಶತ್ರುತ್ವವಿದೆ. ಆ ಕಾರಣಕ್ಕೆ ಪಾಕಿಸ್ತಾನವನ್ನು ಭಾರತದ ಮೇಲೆ ಛೂಬಿಟ್ಟು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ. ಭಾರತದ ಮೇಲೆ ಚೀನಾಕ್ಕೆ ಹಲವಾರು ಕಾರಣಗಳಿಂದ ದ್ವೇಷವಿದೆ. ಅದರಲ್ಲಿ ಭಾರತಕ್ಕೂ ಜಪಾನ್ಗೂ ಇರುವ ಸ್ನೇಹ ಸಂಬಂಧವೂ ಒಂದು. ಕೆಲ ವರ್ಷಗಳ ಹಿಂದೇ ಚೀನಾ ಲಡಾಖ್ಗೆ ಹೊಕ್ಕು ಹಿಂದೂಸ್ತಾನದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ ಸಮಯದಲ್ಲೇ ಭಾರತ ಜಪಾನ್ ಜೊತೆ ಹೆಚ್ಚಿನ ಸಂಬಂಧವನ್ನಿಟ್ಟುಕೊಂಡಿತ್ತು. ಹಾಗೆ ನೋಡಿದರೆ ಭಾರತ ಮತ್ತು ಜಪಾನ್ ನ ಸಂಸ್ಕೃತಿಗಳು ಎರಡು ಸಾವಿರ ವರ್ಷಗಳಿಂದಲೂ ಸಮನ್ವಯತೆ ಸಾಧಿಸುತ್ತಾ ಬಂದಿವೆ. ಅಲ್ಲಿ ಈಗಲೂ ಗಣಪತಿ, ಸರಸ್ವತಿ ಮತ್ತು ಶಿವ ಮಂದಿರಗಳಿವೆ.

ಅತ್ತ ಚೀನಾ ಜಪಾನ್ನ ಸೆಂಕಾಕು ದ್ವೀಪ ತನಗೆ ಸೇರಬೇಕಾದದ್ದು ಎಂದು ಹೇಳುತ್ತಿದೆ. ಅಲ್ಲದೆ ದಕ್ಷಿಣ ಚೀನಾ ಮಹಾಸಾಗರದಲ್ಲಿ ತನ್ನ ನಿಯಂತ್ರಣವನ್ನು ಜಪಾನಿ ಗಡಿಯ ಅತಿ ಹತ್ತಿರದಲ್ಲಿ, ಅಂದರೆ ವಿಯೆಟ್ನಾಂ ಮತ್ತು ಫಿಲಿಪೀನ್ಸ್ ನ ಸಾಗರ ಸೀಮೆಗಳವರೆಗೆ ವಿಸ್ತರಿಸಿಕೊಳ್ಳಲು ಸಿದ್ಧವಾಗಿದೆ. ಸೇಂಕಾಕು ದ್ವೀಪಗಳ ವಿಚಾರವಾಗಿ ಚೀನಾ ಮತ್ತು ಜಪಾನ್ ನಡುವೆ ಈಗ ಶೀತಲ ಯುದ್ಧ ಶುರುವಾಗಿದೆ. ಈ ಪರಿಸ್ಥಿತಿಯಲ್ಲಿ ಜಪಾನ್ಗೂ ಕೂಡ ಭಾರತದೊಂದಿಗೆ ಮೈತ್ರಿ ಮಾಡಿಕೊಳ್ಳಲೇಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ. ಹಾಗೆ ನೋಡಿದರೆ ಭಾರತದ ಜಪಾನ್ನೊಂದಿಗಿನ ಆರ್ಥಿಕ ಸಂಬಂಧ ಸದ್ಯಕ್ಕೆ ಚೀನಾಕ್ಕೆ ಹೋಲಿಸಿದರೆ ಅತಿ ಕಡಿಮೆ ಮಟ್ಟದಲ್ಲಿದೆ. ಆದರೂ ಸ್ನೇಹ ಸಂಬಂಧ ಇನ್ನಿಲದಷ್ಟು ಗಟ್ಟಿಯಾಗಿದೆ. ಅಸಲಿಗೆ ಇದೇ ಚೀನಾದ ಕಣ್ಣುರಿಸಿದೆ. ಹಾಗಂತ ಜಪಾನಿಯರಿಗೆ ‘ರಾತ್ರೋರಾತ್ರಿ’ ಭಾರತೀಯರ ಮೇಲೆ ಪ್ರೀತಿ ಪುಟಿದೆದ್ದಿತು ಎಂದರ್ಥವಲ್ಲ. ಒಮ್ಮೆಲೆ ಅವರು ಭಾವುಕತೆಗೆ ಬಿದ್ದು ‘ಹಿಂದಿ-ಜಪಾನಿ ಭಾಯ್ ಭಾಯ್’ ಎನ್ನುವ ಅರ್ಥವಿಲ್ಲದ ಐಡಿಯಾಕ್ಕೆ ಬಲಿಯಾದರು ಎನ್ನುವುದೂ ಅಲ್ಲ. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಸ್ನೇಹದಲ್ಲಿ ‘ಪುಕ್ಕಟೆ’ ಊಟ-ಉಪಚಾರಗಳಾಗುವುದಿಲ್ಲ. ಇಂದು ಚೀನಾದಿಂದ ಪ್ರಪಂಚದ ಬೇರೆಲ್ಲಾ ರಾಷ್ಟ್ರಗಳಿಗಿಂತ ಅತಿ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರ ಜಪಾನ್. ಜೊತೆಗೆ ಭಾರತ ಕೂಡ ಚೀನಾವನ್ನು ‘ಅಪಾಯಕಾರಿ’ ಎಂದೇ ಭಾವಿಸುತ್ತದೆ. ಇವೆಲ್ಲ ಬೆಳವಣಿಗೆಗಳು ಚೀನಾಕ್ಕೆ ಗೊತ್ತಿದೆ. ಚೀನಾಕ್ಕೆ ಜಪಾನ್ ಹೇಗೆ ನಿರಂತರ ಶತ್ರುವೋ…? ಹಾಗೇ ಭಾರತಕ್ಕೆ ಪಾಕಿಸ್ತಾನದ ಜೊತೆ ಮುಗಿಯದ ಶತ್ರುತ್ವವಿದೆ. ಆ ಕಾರಣಕ್ಕೆ ಜಪಾನ್ ಭಾರತಕ್ಕೆ ಉಧೋ ಎಂದರೇ, ಪಾಕಿಸ್ತಾನ ಚೀನಾದ ಕಾಲು ನೆಕ್ಕುತ್ತಿದೆ.

ಅಸಲಿಗೆ ಪಾಕಿಸ್ತಾನ ಯಾವತ್ತಿಗೂ ಗಂಭೀರ ಸಬ್ಜೆಕ್ಟ್ ಆಗಲೇ ಇಲ್ಲ. ಅದು ಭಾರತವನ್ನು ಕೆಣಕೋದು, ಉಗ್ರರನ್ನು ಹುರಿದುಂಬಿಸೋದು, ಅಲ್ಲಲ್ಲಿ ಹಾವಳಿಯಿಡುವ ಕೆಲಸಗಳನ್ನು ಮಾಡುತ್ತಿದೆಯೇ ಹೊರತು, ಭಾರತವನ್ನು ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಮಾಡುವ ಶಕ್ತಿಯಾಗಲಿ, ಯುದ್ಧ ಮಾಡಿ ದಕ್ಕಿಸಿಕೊಳ್ಳುವ ಛಾತಿಯಾಗಲಿ ಅದಕ್ಕಿಲ್ಲ. ಆದರೆ ಚೀನಾದ ಹೆಜ್ಜೆಗಳನ್ನು ನಂಬುವಂತಿಲ್ಲ. ಅದೆಷ್ಟು ತಟಸ್ತವಾಗಿದೆಯೋ ಅಷ್ಟೇ ಖತರ್ನಾಕ್ ಆಗಿದೆ. ಇಡೀ ಜಗತ್ತಿನ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಚೀನಾ ಆರ್ಥಿಕವಾಗಿ ಎಷ್ಟು ಸದೃಡವಾಗಿದೆಯೆಂದರೇ, ಅದಕ್ಕೆ ಅಮೇರಿಕಾ ಕೂಡ ಸರಿಸಾಟಿಯಲ್ಲ. ಎಲ್ಲಾ ದೃಷ್ಟಿಕೋನದಿಂದಲೂ ಸೂಪರ್ ಪವರ್ ಕಿರೀಟ ದಕ್ಕಿಸಿಕೊಳ್ಳುವತ್ತ ಮುನ್ನುಗ್ಗುತ್ತಿರುವ ಚೀನಾಕ್ಕೆ ಮೊದಲಿಗೆ ಏಷ್ಯಾದಲ್ಲಿ ತನ್ನ ಪ್ರಭುತ್ವ ಸಾಧಿಸಿಕೊಳ್ಳುವ ಉದ್ದೇಶವಿದೆ. ಭಾರತ, ಜಪಾನ್, ರಷ್ಯಾ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಮಿಕ್ಕ ರಾಷ್ಟ್ರಗಳು ಮಾತ್ರ ಚೀನಾ ಮಾತಿಗೆ ಕಿಮ್ಮತ್ತು ಕೊಡುತ್ತಿದೆ. ನೆರವಿನ ಬ್ಲಾಕ್ಮೇಲ್ ಮಾಡಿ ಅಷ್ಟೂ ರಾಷ್ಟ್ರಗಳನ್ನು ಕಬ್ಜಾ ಮಾಡಿಕೊಳ್ಳುವಲ್ಲಿ ಚೀನಾ ಬಹುತೇಕ ಯಶಸ್ವಿಯಾಗಿದೆ.

ಮೊದಲಿನಿಂದಲೂ ಭಾರತ ಚೀನಾಕ್ಕೆ ದಾಯಾದಿ ಕಲಹವಿದೆ. ಏಷ್ಯಾದಲ್ಲಿ ಚೀನಾಕ್ಕೆ ಸಡ್ಡು ಹೊಡೆದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿರುವುದರಿಂದ, ಅವನೆಲ್ಲ ಬದಿಗಿಟ್ಟು ಇಡೀ ಏಷ್ಯಾದ ಮಿಕ್ಕ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಕಾಲಾಂತರದಲ್ಲಿ ಭಾರತವನ್ನು ಡ್ಯಾಮೇಜ್ ಮಾಡುವ ಪ್ರಬಲ ಉದ್ದೇಶ ಚೀನಾಗಿದೆ. ಹಾಗಾಗಿ ಚೀನಾ ಪಾಕಿಸ್ತಾನದಂಥ ಕ್ಷುದ್ರ ರಾಷ್ಟ್ರಗಳಿಗೆ ಹೈಡ್ ಆಗಿ ಕರೆನ್ಸಿ ಪೂರೈಸುತ್ತಾ ಅಲ್ಲಿನ ಟೆರ್ರರಿಸಂ ಅನ್ನು ಪೋಷಿಸುತ್ತಿದೆ. ಆ ಮೂಲಕ ಭಾರತದ ಮೇಲೆ ಶೀತಲ ಸಮರವನ್ನು ಕಾಯ್ದುಕೊಂಡಿದೆ. ಅದಕ್ಕೆ ಪೂರಕವಾಗಿ ಟೆರ್ರರಿಸ್ಟ್ ಗಳು ಭಾರತ, ಬಾಂಗ್ಲಾ, ಅಫ್ಘನ್, ಖುದ್ದು ಪಾಕ್ನಲ್ಲೇ ಬಾಂಬಿಟ್ಟು ಸ್ಫೋಟಿಸುತ್ತಿದ್ದಾರೆ. ಅಷ್ಟೇ ಏಕೆ, ದೂರದ ಅಮೇರಿಕಾ, ಫ್ರಾನ್ಸ್, ಇರಾಕ್, ಇರಾನ್, ಇಸ್ರೇಲ್, ಸಿರಿಯಾ, ಆಫ್ರಿಕಾ ಯಾವುದನ್ನು ಬಿಡದೇ ಸ್ಫೋಟಿಸಿದ್ದಾರೆ. ಆದರೆ ಚೀನಾದಲ್ಲಿ ಉಗ್ರರು ಒಂದೇ ಒಂದು ಪಟಾಕಿ ಹೊಡೆದ ಉದಾಹರಣೆಗಳಿಲ್ಲ.

ಇವೆಲ್ಲವನ್ನು ಗಮನಿಸಿದಾಗ ಉಗ್ರರು ಅಥವಾ ಪಾಕಿಸ್ತಾನದ ಬೆನ್ನಿಗೆ ಚೀನಾ ನಿಂತಿದೆ. ಪಾಕಿಸ್ತಾನವನ್ನು ಭಾರತದ ಮೇಲೆ ದ್ವೇಷ ಸಾಧಿಸಲು ಪ್ರೇರೇಪಿಸುತ್ತಿದೆ ಎಂಬುದು ಸಾಬೀತಾಗುತ್ತದೆ. ಇನ್ನು ಪ್ಯಾರೀಸ್ ನ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಪ್ರೊಫೆಟ್ ಮಹಮ್ಮದ್ ಅವರ ಮೇಲೆ ವ್ಯಂಗ್ಯ ಬರಹ ಪ್ರಕಟವಾಗಿದ್ದಕ್ಕೆ ಅನಾಮತ್ತು ಹತ್ತು ಜನರನ್ನು ಬಲಿ ತೆಗೆದುಕೊಂಡ ಉಗ್ರರಿಗೆ ಚೀನಾದ ಮೇಲೂ ತಮ್ಮ ಹಕೀಕತ್ತು ಈಡೇರಿಸಿಕೊಳ್ಳಲು ಅನೇಕ ಕಾರಣಗಳಿತ್ತು. ಆದರೂ ಉಗ್ರರು ಮೊದಲೇ ಹೇಳಿದಂತೆ ಚೀನಾದಲ್ಲಿ ಪಟಾಕಿಯೂ ಹೊಡೆಯಲಿಲ್ಲ. ಇತ್ತೀಚೆಗೆ ಚೀನಾದಲ್ಲಿ ಪವಿತ್ರ ರಂಜಾನ್ ಆಚರಿಸದಂತೆ ನಿಷೇಧಿಸಲಾಗಿತ್ತು. ಉಪವಾಸ ಆಚರಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ರಂಜಾನ್ ನಿಷೇಧಿಸಲಾಗಿತ್ತು. ಆದರೆ ಈ ಬಗ್ಗೆ ಜಾಗತೀಕವಾಗಿ ಯಾರೂ ಮಾತಾಡಲಿಲ್ಲ. ಉಗ್ರರು ಕೂಡ ಚಕಾರವೆತ್ತಲಿಲ್ಲ. ಯಾಕಂದ್ರೆ ಉಗ್ರರಿಗೆ ಸಕಲ ಸೌಕರ್ಯ ಒದಗಿಸುತ್ತಿರುವ ಚೀನಿಯರ ಮೇಲೆ ಅವರು ಬೇಜಾರು ಮಾಡಿಕೊಳ್ಳುವಂತೆಯೇ ಇಲ್ಲ.

ಶತ್ರುಗಳ ಜೊತೆ ಈ ತೆರನಾದ ಬಾಂದವ್ಯ ಚೀನಾದವರಿಗೆ ಇರುವುದಕ್ಕೆ, ಅವರ ದುರಾಸೆಯೇ ಕಾರಣ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಚೀನಾ ಸಿದ್ದವಿದೆ. ಸೂಪರ್ ಪವರ್ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿರುವ ಚೀನಾಕ್ಕೆ, ಎಂಟೈರ್ ಏಷ್ಯಾದಲ್ಲಿ ಸವಾಲು ಅಂತಿದ್ದರೇ ಅದು ಜಪಾನ್, ರಷ್ಯಾ, ಭಾರತ ಮಾತ್ರ. ಅದನ್ನು ಒತ್ತಟ್ಟಿಗಿಡುವ ಪ್ರಯತ್ನ ಮಾಡುತ್ತಿದೆ. ಅತ್ತ ಚೀನಿಯರ ಸೂಕ್ಷ್ಮಗ್ರಹಿ ನಡೆಗಳ ಅರಿವಿರುವ ಅಮೇರಿಕಾಕ್ಕೆ ಚೀನಿಯರನ್ನು ಏಳಲು ಬಿಡಬಾರದು ಎಂಬ ಹುಕಿಯಿದೆ. ಅದಕ್ಕೆ ಭಾರತದ ಸಾಥ್ ಬೇಕು, ಇತ್ತ ಭಾರತಕ್ಕೂ ಚೀನಿಯರ ಉಪದ್ರ ಎದುರಿಸಲು ವಿಶ್ವದ ಬಲಿಷ್ಠ ರಾಷ್ಟ್ರಗಳ ಬೆಂಬಲ ಬೇಕು. ಅದಕ್ಕೆ ಫೌಂಡೇಷನ್ ಅಂತಿದ್ರೇ ಅದು ಅಮೇರಿಕಾ ಮಾತ್ರ.

ಏಷ್ಯಾದಲ್ಲಿ ಚೀನಾ ಪ್ರಾಬಲ್ಯ ತಗ್ಗಿಸಲು ಅಮೇರಿಕಾಕ್ಕೆ ಭಾರತದ ಬೆಂಬಲ ಬೇಕೇ ಬೇಕು. ಚೀನಾದ ಬಳಿ ಹಣವಿದ್ದರೆ ಭಾರತದಲ್ಲಿ ವಿಶ್ವಾಸವಿದೆ. ಏಷ್ಯಾದ ಬಹುತೇಕ ರಾಷ್ಟ್ರಗಳು ಚೀನಾವನ್ನು ಬೆಂಬಲಿಸುತ್ತವೇ ಎನ್ನುವುದು ಎಷ್ಟು ನಿಜವೋ, ಕೆಲ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ ಎನ್ನುವುದೂ ಅಷ್ಟೇ ನಿಜ. ಏಷ್ಯಾದಲ್ಲೇನಾದರೂ ಚೀನಾ ಪ್ರಾಬಲ್ಯ ಸಾಧಿಸಿದರೇ ಅದು ಜಾಗತೀಕ ಮಟ್ಟದಲ್ಲಿ ತನ್ನ ಕಬಂಧ ಬಾಹುವನ್ನು ಚಾಚಲು ರೂಪುರೇಶೆ ಸಿದ್ದಪಡಿಸಿಕೊಳ್ಳಲಿದೆ. ಆಮೇಲೆ ಯುರೋಪ್ ನಲ್ಲಿ ತನ್ನ ಬೇರೂರಲು ಪ್ರಯತ್ನಿಸುತ್ತದೆ. ಹೀಗಾಗಿಬಿಟ್ಟರೇ ದಶಕಗಳಿಂದ ಕಾಪಾಡಿಕೊಂಡು ಬಂದ ಸೂಪರ್ ಪವರ್ ಕಿರೀಟ ಚೀನಾದ ಪಾಲಾಗಲಿದೆ. ಆಮೇಲೆ ಅಮೇರಿಕಾವನ್ನು ಯಾರೂ ಕ್ಯಾರೇ ಅನ್ನೋದಿಲ್ಲ. ಅದು ಅಮೇರಿಕಾಕ್ಕೆ ಇಷ್ಟವಿಲ್ಲ. ಜೊತೆಗೆ ಇಂಥವನ್ನೆಲ್ಲ ಅಮೇರಿಕಾ ಅರಗಿಸಿಕೊಳ್ಳಲು ತಯಾರಿಲ್ಲ. ಹಾಗಾಗಿ ಅದು ಭಾರತವನ್ನು ದಾಳ ಮಾಡಿಕೊಳ್ಳಲು ಮುಂದಾಗಿತ್ತು. ಜಪಾನ್, ರಷ್ಯಾದ ಜೊತೆ ಕೈ ಜೋಡಿಸಲು ಈ ಹಿಂದೆ ಮಾಡಿಕೊಂಡ ದ್ವಂದ್ವಗಳೇ ಬಹಳಷ್ಟಿದೆ. ಅದು ಅಷ್ಟು ಸುಲಭಕ್ಕೆ ಆಗಿಹೋಗುವ ಮಾತಲ್ಲ. ಇಷ್ಟರ ಹೊರತಾಗಿಯೂ ಚೀನಾದ ನಡೆಯನ್ನು ಹೇಳುವುದು ಕಷ್ಟ. ಅದಾಗಲೇ ಭದ್ರವಾದ ನೆಲೆಯಲ್ಲಿ ಠಳಾಯಿಸಿರೋದ್ರಿಂದ, ಈ ವಿದ್ಯಮಾನಕ್ಕೆ ತದ್ವಿರುದ್ಧ ಹಾದಿಯಲ್ಲಿ ಹೆಜ್ಜೆ ಹಾಕುವ ಸಾಧ್ಯತೆಯಿದೆ. ಇನ್ನು ಚೀನಾವನ್ನು ಹೊರತುಪಡಿಸಿದರೇ ಪಾಕಿಸ್ತಾನವನ್ನು ಕಲ್ಪಿಸಿಕೊಳ್ಳುವಂತಿಲ್ಲ. ಚೀನಾ ಬೆನ್ನಿಗಿಲ್ಲದಿದ್ರೇ ಪಾಕಿಸ್ತಾನ ಕೆಮ್ಮುವುದಿಲ್ಲ. ಹಾಗೆಯೇ ಪಾಕಿಸ್ತಾನಕ್ಕೆ ಹುಟ್ಟಿದ ಉಗ್ರರಿಗೂ ಚೀನಾ ಸಾಥ್ ಕೊಡದಿದ್ದರೇ ಬೇಳೆ ಬೇಯುವುದಿಲ್ಲ.

ಒಂದಂತೂ ನಿಜ, ಚೀನಾ ಅಳತೆ ಮೀರಿ ಬೆಳೆದಿದೆ. ಅದನ್ನು ಡ್ಯಾಮೇಜ್ ಮಾಡುವುದು ದುಸ್ತರ. ಅಂಥ ಪ್ರಯತ್ನವಾದರೇ ಮೂರನೇ ವಿಶ್ವಯುದ್ಧ ಆದಂತೆ ಲೆಕ್ಕ. ಹಾಗೇನಾದರೂ ಆದರೆ ಇಡೀ ವಿಶ್ವವೇ ಸ್ಮಶಾನವಾಗಲಿದೆ. ಏಕೆಂದರೇ ಮೊದಲೆರಡು ವಿಶ್ವ ಯುದ್ಧದಲ್ಲಿದ್ದದ್ದಕ್ಕಿಂತ ಹೆಚ್ಚೆಚ್ಚು ಅಪಾಯಕಾರಿಯಾದ ಅತ್ಯಾಧುನಿಕ ವೆಪನ್ಸ್, ಪರಮಾಣು ಬಾಂಬ್ ಗಳು ಪ್ರತಿ ದೇಶದಲ್ಲೂ ಇವೆ. ಕಡು ಬಡತನದಿಂದ ಕಂಗೆಟ್ಟಿರುವ ಪಾಕಿಸ್ತಾನದ ಬಳಿಯೇ ಅಣ್ವಸ್ತ್ರಗಳಿವೆ. ಹೀಗಿರುವಾಗ- ಮೂರನೇ ವಿಶ್ವಯುದ್ಧವನ್ನು ಕಲ್ಪಿಸಿಕೊಂಡರೇ ಬೆಚ್ಚಿಬೀಳುವಂತಾಗುತ್ತದೆ. ಒಟ್ಟಿನಲ್ಲಿ ಚೀನಾದ ಮಿಲಿಟರಿ ಪವರ್, ಅಥವಾ ಈ ಮಿಲಿಟರಿ ಪವರ್ ಗಳು ಅಪಾಯದ ಸೂಚನೆಗಳೇ ಹೊರತು ಬೇರೆಯೇನಲ್ಲ.

POPULAR  STORIES :

ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’

ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?

ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...