ಸತತ ಮೂರು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಮತ್ತೇ ಕಾಂಗರೂಗಳ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲೂ ಸೋಲನುಭವಿಸಿದೆ. ಆರಂಭಿಕ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಯವರ ದಾಖಲೆಯ ಜೊತೆಯಾಟದ ಮಧ್ಯೆಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಟೀಮ್ ಇಂಡಿಯಾ ಸೋಲನುಭವಿಸಿತು. ಆ ಮೂಲಕ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 4-0ಯ ಅಂತರವನ್ನು ಪಡೆಯಿತು.
ಇದಕ್ಕೂ ಮುನ್ನ ಮನುಕಾ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದ ಆರಂಭಿಕ ಆ್ಯರೋನ್ ಫಿಂಚ್ ಶತಕದಾಟವಾಡಿದರು. ಅವರಿಗೆ ಭರ್ಜರಿ ಸಾಥ್ ನೀಡಿದ ಡೇವಿಡ್ ವಾರ್ನರ್ 93 ರನ್ ಗಳಿಸಿ ಶತಕವಂಚಿತರಾದರು. ಇನ್ನು ಅಂತಿಮ ಓವರ್ ಗಳಲ್ಲಿ ಸಿಡಿದ ಮ್ಯಾಕ್ಸ್ ವೆಲ್ ಮತ್ತು ಸ್ಟೀವನ್ ಸ್ಮಿತ್ ತಂಡದ ಮೊತ್ತವನ್ನು 348ಕ್ಕೆ ಕೊಂಡೊಯ್ದರು. ಇನ್ನು ಭಾರತ ಪರ ಇಶಾಂತ್ ಶರ್ಮ 77ಕ್ಕೆ4, ಉಮೇಶ್ ಯಾದವ್ 67ಕ್ಕೆ3 ವಿಕೆಟ್ ಗಳಿಸಿದರು
ಕಾಂಗರೂಗಳ ವಿರುದ್ಧ ಮತ್ತೆ ಮುಗ್ಗರಿಸಿದ ಟೀಂ ಇಂಡಿಯಾ
Date: