T-20 ಫೈನಲ್..!! ರೋಹಿತ್ ಪಡೆಗೆ ಸಿಗಲಿದ್ಯ ಗೆಲುವು…?
ನಾಳೆ ಭಾರತ ಹಾಗು ನ್ಯೂಜಿಲೆಂಡ್ ನಡುವೆ ಹ್ಯಾಮಿಲ್ಟನ್ ನಲ್ಲಿ ಬಿಗ್ ಫೈಟ್ ನಡೆಯಲಿದೆ.. ರೋಹಿತ್ ಪಡೆ ಟಿ ಟ್ವೆಂಟಿ ಕಪ್ ಅನ್ನ ತನ್ನದಾಗಿಸಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಂಡಿದೆ.. ಇನ್ನು ನ್ಯೂಜಿಲೆಂಡ್ ಭಾರತದ ವಿರುದ್ದ ಏಕದಿನ ಸರಣಿ ಸೋತು ತನ್ನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.. ಹೀಗಾಗೆ ನಾಳಿನ ಪಂದ್ಯವನ್ನಾದ್ರು ಗೆದ್ದು ಟಿ-ಟ್ವೆಂಟಿ ಸರಣಿಯನ್ನ ತನ್ನ ಅಭಿಮಾನಿಗಳಿಗೆ ನೀಡಲು ಸಜ್ಜಾಗಿದೆ…
ಸದ್ಯ ಎರಡು ತಂಡಗಳು ಒಂದೊಂದು ಮ್ಯಾಚ್ ಗೆದ್ದು ಸರಣಿಯನ್ನ ತನ್ನದಾಗಿಸಿಕೊಳ್ಳಲು ತಯಾರಿ ನಡೆಸಿವೆ.. ಅದರಲ್ಲು ರೋಹಿತ್ ಪಡೆ, ಕೊಹ್ಲಿಯ ಅನುಪಸ್ಥಿತಿಯಲ್ಲಿ ಕಪ್ ಅನ್ನ ತವರಿಗೆ ಕೊಂಡೊಯ್ಯಲು ಸಿದ್ದವಾಗಿದ್ದು, ನಾಳೆ ಹೈಓಲ್ಟೇಜ್ ಮ್ಯಾಚ್ ಗೆ ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ಮೈದಾನ ಸಜ್ಜಾಗಿದೆ..