ಪಾಕ್‍ಗೆ, ಡೆಲ್ಲಿ ಮೇಲೆ ಅಣುಬಾಂಬ್ ಹಾಕೋದಕ್ಕೆ ಐದು ನಿಮಿಷ ಸಾಕಂತೆ.!!!

Date:

ಪಾಕ್‍ಗೆ, ಡೆಲ್ಲಿ ಮೇಲೆ ಅಣುಬಾಂಬ್ ಹಾಕೋದಕ್ಕೆ ಐದು ನಿಮಿಷ ಸಾಕಂತೆ. ಹೀಗೊಂದು ಮಾತನ್ನ ಹೇಳಿರೋದು ಪಾಕ್ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಎ.ಕ್ಯೂ.ಖಾನ್. ಪಾಪಾ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ, ಭಾರತೀಯರಿಗೆ ಅದೇ ಐದು ನಿಮಿಷ ಸಾಕು ಇಡೀ ಪಾಕಿಸ್ತಾನವನ್ನು ಸುಟ್ಟು ಬೂದಿ ಮಾಡೋದಕ್ಕೆ ಅಂತ. ಹೌದು, ಪಾಕ್ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಅಬ್ದುಲ್ ಖಾದರ್ ಖಾನ್ ಅವರ ಹೇಳಿಕೆಗೆ, ಭಾರತೀಯ ರಕ್ಷಣಾ ತಜ್ಞರು ತಿರುಗೇಟು ನೀಡಿದ್ದಾರೆ. ದೆಹಲಿ ಮೇಲೆ ಪಾಕ್ ದಾಳಿ ಮಾಡಿದ್ರೆ, ಇಡೀ ಪಾಕಿಸ್ತಾನವನ್ನೇ ಧ್ವಂಸ ಮಾಡೋ ಸಾಮಾಥ್ರ್ಯ ಭಾರತಕ್ಕಿದೆ ಎಂದು ಎಚ್ಚರಿಸಿದ್ದಾರೆ. ಖಾನ್ ಅವರ ಹೇಳಿಕೆಗೆ ತಿರುಗೇಟು ನೀಡಿರೋ ಭಾರತದ ರಕ್ಷಣಾ ತಜ್ಞರು, ಅಣ್ವಸ್ತ್ರಗಳು ಇರೋದು ರಕ್ಷಣೆಗೆ ಮಾತ್ರ, ದಾಳಿಗಲ್ಲ, ಪ್ರಚಾರಕ್ಕಾಗಿ ಖಾನ್ ಅವರು ಈ ಹೇಳಿಕೆ ನೀಡಿದ್ದಾರೆ ಅಂತ ಉತ್ತರ ಕೊಟ್ಟಿದ್ದಾರೆ. ಪಾಕ್ 1998ರಲ್ಲಿ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು, ಅದರ 18ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಖಾನ್ ಈ ಹೇಳಿಕೆ ನೀಡಿದ್ರು. ರಾವಲ್ಪಿಂಡಿ ಸಮೀಪದ ಕಟುಹಾ ಸಮೀಪದಿಂದ ದೆಹಲಿ ಮೇಲೆ ಅಣುದಾಳಿ ಮಾಡಬಹುದು ಎಂದು ಹೇಳಿದ್ದರು. ಜೊತೆಗೆ 1984 ರಲ್ಲೇ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಬಹುದಿತ್ತು. ಆದ್ರೆ ಅಂದಿನ ಅಧ್ಯಕ್ಷ ಜಿಯಾ ಉಲ್ ಉಕ್ ಅದನ್ನ ವಿರೋಧಿಸಿದ್ದರು ಅಂತಲೂ ಹೇಳಿದ್ದಾರೆ. ಅದೇನೇಯಾದ್ರು ದೆಹಲಿ ಮೇಲ್ ಪಾಕ್ ದಾಳಿ ಮಾಡಿದ್ರೆ ನಮ್ಮ ದೇಶಕ್ಕೆ ಐದೇ, ಐದು ನಿಮಿಷ ಸಾಕು ಪಾಕಿಸ್ತಾನದ ಹೆಸರೆ ಇಲ್ಲದಂತೆ ಮಾಡೋದಕ್ಕೆ ಅನ್ನೋದಂತು ನಿಜ.

  • ರಾ ಚಿಂತನ್

POPULAR  STORIES :

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...