ಏಷ್ಯಾಕಪ್ ಟೂರ್ನಿಯ ಫೈನಲ್ ಪೈಪೋಟಿಗೆ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮತ್ತು ಮುಶ್ರಫೆ ಮೊರ್ತಾಜ ಮುಂದಾಳತ್ವದ ಬಾಂಗ್ಲಾ ತಂಡಗಳ ನಡುವೆ ಪ್ರಶಸ್ತಿಗಾಗಿ ಕಾಳಗ ನಡೆಯಲಿದೆ.
ಟೀಂ ಇಂಡಿಯಾ ಗೆಲ್ಲುವ ಫೇವರೇಟ್ ಅನಿಸಿದರೂ ಬಾಂಗ್ಲಾವನ್ನು ಕಡೆಗಾಣಿಸುವಂತಿಲ್ಲ. ಪಾಕಿಸ್ತಾನವನ್ನು ಹೆಡೆಮುರಿಕಟ್ಟಿ ಫೈನಲ್ ಗೆ ಲಗ್ಗೆ ಇಟ್ಟಿರುವ ಬಾಂಗ್ಲಾ ಭಾರತಕ್ಕೆ ಈ ಹಿಂದೆ ಅನೇಕಬಾರಿ ಶಾಕ್ ಕೊಟ್ಟಿದ್ದು ಗೊತ್ತೇ ಇದೆ.
ಭಾರತಕ್ಕೆ 7ನೇ ಏಷ್ಯಾಕಪ್ ಗೆಲುವಿನ ತುಡಿತ. ಬಾಂಗ್ಲಾಕ್ಕೆ ಪ್ರಬಲ ಭಾರತವನ್ನು ಮಣಿಸಿ ಚೊಚ್ಚಲ ಏಷ್ಯಾಕಪ್ ಗೆಲ್ಲುವಾಸೆ. ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಅನ್ನೋದನ್ನು ಕಾದು ನೋಡಬೇಕು.
ಭಾರತೀಯ ಕಾಲಮಾನದ ಪ್ರಕಾರ ಸಂಜೆ 5ಗಂಟೆಗೆ ಪಂದ್ಯ ಶುರುವಾಗಲಿದೆ.