ನೆಹ್ರಾಗೆ ಸಿಗುವುದೇ ಗೆಲುವಿನ ಬೀಳ್ಕೊಡಿಗೆ…?

Date:

ವಿಶ್ವದ ನಂಬರ್ 1 ಟಿ20 ತಂಡ ನ್ಯೂಜಿಲೆಂಡ್ ಹಾಗೂ ಅತಿಥೇಯ ಭಾರತ ತಂಡದ‌ ನುಡವಿನ ಮೊದಲ‌ ಟಿ20 ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಸಜ್ಜಾಗಿದೆ. ಏಕದಿನ ಸರಣಿ ಜಯದಿಂದ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಪಡೆ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಗೆಲುವಿಗೆ ಎದುರು ನೋಡುತ್ತಿದೆ.

ಟಿ20 ಶುರುವಾತಿನಿಂದ ಇಲ್ಲಿತನಕ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 5 ಪಂದ್ಯಗಳು ನಡೆದಿದ್ದು ಐದರಲ್ಲೂ ಭಾರತ ಸೋಲುಕಂಡಿದೆ. ಇಂದಿನಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಗೆಲ್ಲುವ ಮೂಲಕ ಕೀವಿಸ್ ವಿರುದ್ಧ ಟಿ20 ಗೆಲುವಿನ ಖಾತೆ ತೆರೆಯಲು ಟೀಂ ಇಂಡಿಯಾ ಕಾಯುತ್ತಿದೆ.


ಅದೇರೀತಿ ಭಾರತದ ಹಿರಿಯ ವೇಗಿ ಆಶಿಶ್ ನೆಹ್ರಾ ಅವರಿಗಿದು ವಿದಾಯದ ಪಂದ್ಯ. ಚೊಚ್ಚಲ ಪ್ರಥಮ ದರ್ಜೆ ಪಂದ್ಯ ವಾಡಿದ್ದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲೇ ನೆಹ್ರಾ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದಾರೆ..!


1999 ಫೆಬ್ರವರಿ 24 ರಂದು ಕೊಲೊಂಬೊದಲ್ಲಿ ಶ್ರೀಲಂಕಾ‌ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ನೆಹ್ರಾ 2014 ರ ಏಪ್ರಿಲ್ 13 ರಂದು ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಜಿಂಬಾಬ್ವೆ ವಿರುದ್ಧ 2001ಜೂನ್ 24 ರಂದು ಹರಾರೆಯಲ್ಲಿ ಏಕದಿನ ಪಂದ್ಯಕ್ಕೆ ಎಂಟ್ರಿಕೊಟ್ಟಿದ್ದ ಆಶಿಶ್ ಪಾಕಿಸ್ತಾನ ವಿರುದ್ಧ ಮೊಹಲಿಯಲ್ಲಿ 2011 ಮಾರ್ಚ್ 30 ರಂದು ಕೊನೆಯ ಏಕದಿನ ಪಂದ್ಯ ಆಡಿದ್ದರು. 2009ರ ಡಿಸೆಂಬರ್ 9 ರಂದು ಶ್ರೀಲಂಕಾ ವಿರುದ್ಧ ಜೊಹಾನ್ಸ್ ಬರ್ಗ್ ನಲ್ಲಿ ಟಿ20 ಗೆ ಪಾದಾರ್ಪಣೆ ಮಾಡಿದ್ದ ಇವರು ಬೆಂಗಳೂರಲ್ಲಿ 2017 ಫೆಬ್ರವರಿ 1ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ರು.
ಟೀ‌ಇಂಡಿಯಾ ಪರ 17 ಟೆಸ್ಟ್ ಆಡಿರುವ ಇವರು 44 ವಿಕೆಟ್ ಕಿತ್ತಿದ್ದಾರೆ. 120 ಏಕದಿನ ಪಂದ್ಯಗಳಿಂದ 157 ವಿಕೆಟ್ , 26 ಟಿ20 ಪಂದ್ಯಗಳಿಂದ 34 ವಿಕೆಟ್ ಪಡೆದಿರೋದು ವೇಗಿ ನೆಹ್ರಾ ಅವರ ಸಾಧನೆ.

ಪಂದ್ಯ ಆರಂಭ  : ಸಂಜೆ‌7 ಗಂಟೆ

Share post:

Subscribe

spot_imgspot_img

Popular

More like this
Related

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...