ಈ ಕ್ಷಣಕ್ಕೂ ಕೋಹ್ಲಿ ಆಟ ಮೈನವಿರೇಳಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಕೋಹ್ಲಿ ಆಡಿದ್ದು ನಿಜಕ್ಕೂ ಅಸಾಮಾನ್ಯ ಆಟ. ಅದನ್ನು ಮೆಲುಕು ಹಾಕಿದಷ್ಟು ಖುಷಿಯಾಗುತ್ತದೆ. ಕೊಹ್ಲಿಯಲ್ಲಿ ಬರೀ ಸಚಿನ್ ಮಾತ್ರವಲ್ಲ, ಪಾಂಟಿಂಗ್, ಸೆಹ್ವಾಗ್, ಗೇಲ್- ಹಾಳೂಮೂಳು ಎಲ್ಲರನ್ನೂ ಕಾಣಬಹುದು. ನಾಳೆ ಮತ್ತದೇ ಕೊಹ್ಲಿಯ ಆಟವನ್ನು ಸವಿಯುವ ಅಪಾರ ಕಾತರವಿದೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಸೆಮಿಫೈನಲ್ನಲ್ಲಿ ಸೆಣಸಲಿರುವ ಭಾರತ ಗೆದ್ದೇ ಗೆಲ್ಲುತ್ತೆ ಎಂಬ ಪಕ್ಕಾ ಭರವಸೆಯಿದೆ. ಈ ವಿಶ್ವಕಪ್ನ ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿರುವ ರೋಹಿತ್ ಶರ್ಮ, ಶಿಖರ್ ಧವನ್ ಎಲ್ಲಾದರೂ ಕ್ಲಿಕ್ ಆಗಿಬಿಟ್ಟರೇ ಕೋಹ್ಲಿ, ದೋನಿಗೆ ಸಿಂಹಬಲ ಬಂದಂತಾಗುತ್ತದೆ. ಸ್ಕೋರ್ ಬೋರ್ಡ್ ನಲ್ಲಿ ರನ್ ಸುರಿಮಳೆ ಸುರಿದಂತೆ ಲೆಕ್ಕ. ಇದೀಗ ಯುವರಾಜ್ ಬದಲಿಗೆ ಸ್ಥಾನ ಪಡೆದಿರುವ ಮನೀಶ್ ಪಾಂಡೆ ಎಷ್ಟು ಸೊಗಸಾದ ಅಟಗಾರ ಎನ್ನುವುದು ಜಗತ್ತಿಗೆ ಗೊತ್ತಿದೆ. ಆದರೆ ಅವರೇಕೋ ಆಗಾಗ ಅವಕಾಶವಂಚಿತರಾಗುತ್ತಾರೆ. ಡಸ್ ನಾಟ್ ಮ್ಯಾಟರ್. ಇನ್ನು ವೆಸ್ಟ್ ಇಂಡೀಸ್ ನಲ್ಲೂ ಪ್ರತಿಭಾವಂತ ಅಟಗಾರರಿದ್ದಾರೆ. ಕ್ರಿಸ್ ಗೇಲ್ ನಿಂತರೇ ಧೂಳು ಎದ್ದೇಳುತ್ತದೆ.
ಅದೃಷ್ಟವೆಂದರೇ ಭಾರತದ ವಿರುದ್ಧ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. `ಸೆಮಿಫೈನಲ್ ನಲ್ಲಿ ನೀನು ಶತಕ ಬಾರಿಸು, ಆದರೆ ಪಂದ್ಯವನ್ನು ಭಾರತ ಗೆಲ್ಲಲಿ’ ಅಂತ ಕ್ರಿಸ್ ಗೇಲ್ ಮುಂದೆ ಅಮಿತಾಬ್ ಹೇಳಿದ್ದರು. ಅದಕ್ಕೆ ಕ್ರಿಸ್ ಗೇಲ್,` ಬಾಸ್, ನಾನು ಶತಕ ಬಾರಿಸದಿದ್ದರೂ ಪರ್ವಾಗಿಲ್ಲ, ವಿಂಡೀಸ್ ಗೆಲ್ಲಬೇಕು’ ಅಂತ ನಗುತ್ತಲೇ ಉತ್ತರಿಸಿದ್ದರು. ಒಟ್ಟಿನಲ್ಲಿ ಎಂತಹ ಪಂದ್ಯದ ದಿಕ್ಕನ್ನು ಬದಲಿಸುವುದರಲ್ಲಿ ನಿಷ್ಣಾತರಾಗಿರುವ ಭಾರತದ ಆಟಗಾರರು ಈ ಬಾರಿ ವಿಶ್ವಕಪ್ ಅನ್ನು ಎತ್ತಿ ಹಿಡಿಯುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಜೈಹೋ….
POPULAR STORIES :
ಯಶ್- ರಾಧಿಕಾಗೆ ತಿಲಕ್ `ಮಾಂಜಾ’ ಏನಿದು ಸುದ್ದಿ… ನೀವೇ ಓದಿ..!!?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ…! #Video
ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…
ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!