ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ನಡುವಿನ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಪೊಲೀಸ್ ಪೇದೆಯ ಪುತ್ರ ಇದೀಗ ಸೇನೆ ಸೇರಲು ರೆಡಿಯಾಗಿದ್ದಾನೆ.
ತಂದೆಯನ್ನು ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕೂಡ ಭಾರತೀಯ ಸೇನೆ ಸೇರುತ್ತೇನೆ ಎಂದು ಪೇದೆ ಪುತ್ರ ಹೇಳಿಕೆ ನೀಡಿದ್ದಾನೆ. ಕಳೆದ ಬಾಟಮಾಲೂ ಪ್ರದೇಶದಲ್ಲಿ ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಪೇದೆ ಪರ್ವೇಜ್ ಅಹ್ಮದ್ ಹುತಾತ್ಮರಾಗಿದ್ದರು.
ನಿನ್ನೆ ಅವರ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪುತ್ರ ತಾನೂ ಕೂಡ ಸೇನೆ ಸೇರಿ ನನ್ನ ತಂದೆಯ ಕೊಂದ ಉಗ್ರರನ್ನು ಕೊಂದು ಹಾಕುತ್ತೇನೆ ಎಂದು ಸಂಕಲ್ಪ ಮಾಡಿದ್ದಾನೆ.
ಪರ್ವೇಜ್ ಅಹ್ಮದ್ ಸಾವಿನ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರಿಗೆ ಕಾಶ್ಮೀರ ಸರ್ಕಾರ ಉದ್ಯೋಗ ಭರವಸ ನೀಡಿದೆಯಾದರೂ, ತಾನು ಸೇನೆಯನ್ನೇ ಸೇರುವುದಾಗಿ ಪುತ್ರ ಹೇಳ್ತಿದ್ದಾನೆ.