ಭಾರತೀಯ ಸೇನೆ ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡ್ತಿದೆ. ದೇಶದ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಉಗ್ರರನ್ನು ಸದೆಬಡಿಯಲು ಪಣತೊಟ್ಟಿದ್ದಾರೆ.
ಪಾಕ್ ಮೂಲದ ಜೈಶ್-ಇ –ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಾರ್‍ನ ಸಂಬಂಧಿ ಸೇರಿದಂತೆ ಮೂವರು ಭಯೋತ್ಪಾದಕರ ಸಂಹಾರ ಮಾಡುವಲ್ಲಿ ನಮ್ಮ ಹೆಮ್ಮೆಯ ಸೇನೆ ಯಶಸ್ವಿಯಾಗಿದೆ.
ಜಮ್ಮು-ಕಾಶ್ಮಿರದ ಪುಲ್ವಾಮದ ಅಗ್ಲಾರ್ ಕಂಡಿ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಅಜಾರ್‍ನ ಸಂಬಂಧಿ, ವಿಭಾಗೀಯ ಉಗ್ರ ಕಮಾಂಡರ್ ತಲ್ಹಾ ರಶೀದ್ ಸೇರಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.
ಆದರೆ, ನೋವಿನ ಸಂಗತಿ ಎಂದರೆ ಸೇನೆಯ ಲಾನ್ಸ್ ನಾಯಕ ವ್ರಹ್ಮಾ ಪಾಲ್ ಸಿಂಗ್ ಹುತಾತ್ಮರಾಗಿದ್ದಾರೆ.