ಕೊಳೆಯಾದ ,ಮಣ್ಣಾದ 200ರೂ ಮತ್ತು 2000 ರೂ ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ನೋಟು ಪಡೆಯುವಾಗ ಹುಷಾರಾಗಿರಿ…ಎಚ್ಚರ ಅಗತ್ಯ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2009ರ ನೋಟು ಬದಲಾವಣೆ ನಿಯಮದ ಪ್ರಕಾರ, 1, 2, 5, 10,20, 50, 100, 500, 1000 ರೂ ಮುಖಬೆಲೆಯ ನೋಟುಗಳನ್ನು ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ.
ಆದ್ದರಿಂದ ನೋಟು ಅಮಾನ್ಯೀಕರಣದ ಬಳಿಕ ಬಂದ 200 ಮತ್ತು 2000ರೂ ಮುಖಬೆಲೆಯ ನೋಟುಗಳನ್ನು ಬದಲಾಯಿಸಿ ಕೊಡಲು ಸಾಧ್ಯವಿಲ್ಲ.
ಆದ್ದರಿಂದ ನೀವು ನೋಟು ಕೊಳೆಯಾಗದಂತೆ ನೋಡಿಕೊಳ್ಳಿ ಮತ್ತು ಕೊಳೆಯಾದ ನೋಟುಗಳನ್ನು ತೆಗೆದುಕೊಳ್ಳಬೇಡಿ.