ಪಾಪಿ ಪಾಕಿಸ್ತಾನ, ಭಾರತಕ್ಕೆ ಯಾವುದೇ ರೀತಿಯಲ್ಲೂ ಸವಾಲಾಗದ ಕಂಟ್ರಿ. ಕಾಶ್ಮೀರ ತನ್ನದು ಎಂದು ಸದಾ ಕಾಲು ಕೆರೆದುಕೊಂಡು ಬರುವ ಈ ದೇಶ ಭಾರತದ ವಿರುದ್ದ ನಡೆದ ಎಲ್ಲಾ ಯುದ್ದಗಳಲ್ಲಿ ಹಿಗ್ಗಾ ಮುಗ್ಗಾ ಏಟು ತಿಂದು ಹಿಮ್ಮೆಟ್ಟಿತು. ಅದೇ ಇತಿಹಾಸ. ಆದರೆ ಈಗ ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ಭಾರತವನ್ನು ಹೈರಾಣಾಗಿಸಲು ಯತ್ನಿಸುತ್ತಿದೆ. ಅದರಲ್ಲೂ ಯಶಸ್ಸು ದೂರದ ಮಾತು ಎಂಬುದನ್ನು ತಿಳಿದಾದ ಮೇಲೆ ಈಗ ಮತ್ತೊಂದು ಯುದ್ಧಕ್ಕೆ ಮುಂದಾಗಿತ್ತು. ವಿಚಿತ್ರವೆಂದರೆ ಅದರಲ್ಲೂ ಪಾಕಿಸ್ತಾನ ಇನ್ನಿಲ್ಲದಂತೆ ಸೋಲೊಪ್ಪಿಕೊಂಡಿದೆ. ಇಷ್ಟಕ್ಕೂ ಆ ವಾರ್ ಯಾವುದು ಗೊತ್ತಾ..? ಹ್ಯಾಕರ್ಸ್ ವಾರ್.
ಯೆಸ್.. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹ್ಯಾಕಿಂಗ್ ವಾರ್ ನಡೆದಿತ್ತು. ಇಲ್ಲೂ ಮೊದಲು ಯುದ್ಧ ಆರಂಭಿಸಿದ್ದು ಪಾಕಿಸ್ತಾನ. ಫೈಸಲ್ 1337 ಎಂಬ ಹ್ಯಾಕರ್ಗಳು ಕೇರಳ ಸರ್ಕಾರದ www.kerala.gov.in ಎಂಬ ವೆಬ್ ಸೈಟನ್ನು ಹ್ಯಾಕ್ ಮಾಡಿತ್ತು. ಅಲ್ಲದೇ `ಭದ್ರತೆಯು ಕೇವಲ ಭ್ರಮೆ' ಎಂದು ಬರೆದಿತ್ತು. ಅಲ್ಲದೇ ಚೆನ್ನೈನಲ್ಲೂ ಇದೇ ರೀತಿಯ ಕೇಸ್ ದಾಖಲಾಗಿತ್ತು. ಆದರೆ ಈಗ ಆ ಹ್ಯಾಕರ್ಗಳು ಸೋತು ಸುಣ್ಣವಾಗಿದ್ದಾರೆ. ಭಾರತದ ಪವರ್ ಮುಂದೆ ಮಂಡಿಯೂರಿದ್ದಾರೆ.
ಪಾಕ್ ಹ್ಯಾಕರ್ಗಳು ಮಂಡಿಯೂರಲು ಕಾರಣ `ದ ಮಲ್ಲು ಸೈಬರ್ ಸೋಲ್ಜರ್ಸ್'ಗಳು. ಇವರು ಪಕ್ಕಾ ಭಾರತದ ಹ್ಯಾಕರ್ಗಳು. ಇವರು ಮಾಡಿದ್ದೇನೆಂದರೆ ಪಾಕಿಸ್ತಾನ ಸರ್ಕಾರ, ಅಲ್ಲಿನ ವಿಶ್ವವಿದ್ಯಾಲಯ ಮತ್ತು ಕೆಲ ಸಂಸ್ಥೆಗಳ ಬರೋಬ್ಬರಿ 120 ಸೈಟ್ ಗಳನ್ನು ಹ್ಯಾಕ್ ಮಾಡಿ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಅಲ್ಲದೇ ಇದು ಪಾಕಿಸ್ತಾನ ಮರಿ ಹ್ಯಾಕರ್ಗಳಿಗೆ ನಾವು ಕಲಿಸುತ್ತಿರುವ ಪಾಠ ಎಂಬಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲಿಗೆ ಭಾರತದ ಸೈಬರ್ ದಾಳಿಗೆ ಪಾಕಿಸ್ತಾನಿ ಹ್ಯಾಕರ್ಗಳು ಸೋತು ಸುಣ್ಣವಾಗಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದಪ್ಪಾ ಭಾರತದ ಪವರ್. ಅಲ್ಲವೇ..?
- ರಾಜಶೇಖರ ಜೆ
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com