ತಾಯಿಯ ಜೀನ್ ಗಳು ಮಕ್ಕಳ ಬುದ್ದಿವಂತಿಕೆಗೆ ಕಾರಣವಾಗಿದೆಯಂತೆ, ಇದು ತಂದೆಯನ್ನು ಎಂದಿಗೂ ಅವಲಂಬಿಸಿಲ್ಲ, ಇನ್ಟೆಲಿಜೆನ್ಸ್ ಜೀನ್ ಗಳು ಹೆಣ್ಣಿನಿಂದ ಆಕೆಯ ಮಕ್ಕಳಿಗೆ ವರ್ಗಾವಣೆಯಾಗುತ್ತದಂತೆ, ಯಾಕಂದರೆ ಹೆಣ್ಣಿನಲ್ಲಿ x ಕ್ರೋಮೋಸೋಮ್ ಎರಡು ಇದ್ದು, ಗಂಡಿನಲ್ಲಿ ಕೇವಲ ಇದು ಒಂದೇ ಇರುವುದು. ವಿಜ್ಝಾನಿಗಳ ಪ್ರಕಾರ ಅಡ್ವಾನ್ಸ್ಡ್ ವಿಧಾನಗಳಿಂದಲೂ ತಂದೆಯಿಂದ ಅನುವಂಶಿಕವಾಗಿ ಬಂದ ಜೀನ್ ಗಳು ತನ್ನಿಂತಾನಾಗಿಯೇ ತನ್ನ ಕಾರ್ಯಕ್ಷಮತೆಯನ್ನು ನಿಲ್ಲಿಸುತ್ತದೆಯಂತೆ. ಹಾಗಾಗಿ ಕೆಲವೊಂದು ವಿಶೇಷವಾದ ಬುದ್ದಿವಂತಿಕೆಯನ್ನು ಒಳಗೊಂಡ (ಕಂಡಿಷನ್ಡ್)ಜೀನ್ ಗಳು ತಾಯಿಯಿಂದಲೇ ವರ್ಗಾಯಿಸಲ್ಪಡುತ್ತದಂತೆ.
ಪ್ರಯೋಗಶಾಲೆಯಲ್ಲಿ ಅನುವಂಶಿಕ ರೂಪದಲ್ಲಿ ಇಲಿಗಳ ಮೇಲೆ ನಡೆದ ಸಂಶೋಧನೆಯಲ್ಲಿ ಮ್ಯಾಟರ್ನಲ್ (ಮಾತೃ ಸಹಜ)ಜೀನ್ಸ್ ನ ಅಧಿಕ ಡೋಸ್ ನಿಂದ ದೊಡ್ದ ತಲೆ ಮತ್ತು ಬ್ರೈನ್ ಹಾಗೂ ಸಣ್ಣ ಶರೀರ ಬೆಳವಣಿಗೆಯಾದರೆ, ಪ್ಯಾಟರ್ನಲ್(ತಂದೆ ಸಹಜ)ಜೀನ್ಸ್ ನಿಂದ ಸಣ್ಣ ಬ್ರೈನ್ ಹಾಗೂ ದೊಡ್ದ ದೇಹದ ಬೆಳವಣಿಗೆಯಾಯ್ತು. ಮಿದುಳಿನ ಕೋಶದಲ್ಲಿ ಯಾವುದೇ ತರಹದ ಪ್ಯಾಟರ್ನಲ್ ಜೀನ್ ಗಳೂ ಕಾಣ ಬಂದಿಲ್ಲವಂತೆ
ಸ್ಕೋಟ್ ಲ್ಯಾಂಡ್ ನ ಗ್ಲಾಸ್ ಗೋವ್ ನಲ್ಲಿ ನಡೆದ ಇನ್ನೊಂದು ಪ್ರಯೋಗದಲ್ಲಿಯೂ ಸಹಾ ಇದು ಸಾಬೀತಾಯಿತು. 1994 ರಿಂದಲೂ ಸುಮಾರು 14-22 ವಯಸ್ಸಿನ 12,686 ಯುವಕರ ಬುದ್ದಿವಂತಿಕೆ, ವಿದ್ಯಾರ್ಹತೆ ಎಲ್ಲವನ್ನೂ ಪ್ರತೀ ವರುಷವೂ ಪರೀಕ್ಷೆಗೊಳಪಡಿಸುತ್ತಿದಂತೆ,ಅವರ ಇನ್ಟೆಲಿಜೆನ್ಸ್ ನಲ್ಲಿ ತಾಯಿಯ IQ ಇರುವುದು ತಿಳಿದುಬಂತು. ಇದಲ್ಲದೆ,ಬುದ್ದಿವಂತಿಕೆಯ ಅನುವಂಶಿಕತೆಯು ಕೇವಲ 40-60% ನಷ್ಟೇ ವರ್ಗಾವಣೆಯಾಗುವುದು ಹಾಗೂ ಇನ್ನುಳಿದಿರುವುದು ಅವರಿಗೆ ತಮ್ಮ ಸುತ್ತ ಮುತ್ತಲ ಪರಿಸರ ಪರಿಸ್ಥಿತಿಗೆ ಹೊಂದ್ಕೊಂಡು ರೂಪುಗೊಳ್ಳುತ್ತದೆ ಎಂಬುದಾಗಿಯೂ ವಿಜ್ಝಾನಿಗಳು ತಿಳಿಸಿದ್ದಾರೆ.
ವಾಶಿಂಗ್ ಟನ್ ನಲ್ಲಿ ನಡೆದ ಸಂಶೋಧನೆಯ ಪ್ರಕಾರ, ತಜ್ಝರು ತಿಳಿಸುವುದೇನೆಂದರೆ, ತಾಯಿ ಮತ್ತು ಮಗುವಿನ ನಡುವೆ ಇರೋ ಒಂದು ಆರೋಗ್ಯಕರವಾದ ಭಾವನಾತ್ಮಕ ಸಂಬಂಧವು, ಮಕ್ಕಳ ಮಿದುಳಿನ ಕೆಲವೊಂದು ಭಾಗಗಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುತ್ತಾರೆ. ಕೆಲವೊಂದು ತಾಯಿ ಮಕ್ಕಳ ಈ ಸಂಬಂಧವನ್ನು ಸತತ 7 ವರುಷಗಳ ತನಕ ಪರಿಶೀಲಿಸಿದಾಗ ಅವರಿಗೆ ಆ ಮಕ್ಕಳ ಮಿದುಳಿನಲ್ಲಿ, ಪ್ರಗತಿ, ನೆನಪುಶಕ್ತಿ, ಹಾಗೂ ಒತ್ತಡರಹಿತ ಬೆಳವಣಿಗೆಗಳು ಕಂಡುಬಂದವು.
ತಾಯಿ ಹಾಗೂ ಮಗುವಿನ ನಡುವಿನ ಒಂದು ಸುಭದ್ರ ಬಾಂಧವ್ಯವು ಮಕ್ಕಳಿಗೆ ಭದ್ರತೆಯ ಜೊತೆಗೆ ಪ್ರಪಂಚದಲ್ಲಿ ಮುನ್ನಡೆಯಲು ಅವಕಾಶ ನೀಡುವುದಲ್ಲದೆ, ಅನೇಕ ತರಹದ ಸಮಸ್ಯೆಯನ್ನು ಎದುರಿಸಿ ಬದುಕಲು ಆತ್ಮವಿಶ್ವಾಸವನ್ನೂ ತುಂಬುತ್ತದೆ.ಜೊತೆಗೆ ತಂದೆಯಿಂದ ಅನುವಂಶಿಕವಾಗಿ ಬರೋ ಭಾವನೆಗಳು,ಇತರ ವಿಷ್ಯಗಳೂ ಸಹ ಬುದ್ದಿವಂತಿಕೆ ಬೆಳವಣಿಗೆಯಾಗುವತ್ತ ಉತ್ತಮ ಪಾತ್ರ ವಹಿಸುತ್ತದೆ ಎನ್ನುತ್ತಾರೆ ವಿಜ್ಝಾನಿಗಳು.
- ಸ್ವರ್ಣಲತ ಭಟ್