ಐಪಿಎಲ್ ಹರಾಜು : ಯುವಿ 7 ಕೋಟಿಗೆ, ವ್ಯಾಟ್ಸನ್ 9.5 ಕೋಟಿಗೆ ಬಿಕರಿ..!

admin
By admin
2 Min Read

ಐಪಿಎಲ್ ಹರಾಜು : ಯುವಿ 7 ಕೋಟಿಗೆ, ವ್ಯಾಟ್ಸನ್ 9.5 ಕೋಟಿಗೆ ಬಿಕರಿ..!
ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ 2016ರ ಐಪಿಎಲ್ ಹರಾಜಿನಲ್ಲಿ ಭಾರತದ ಯವರಾಜ್ ಸಿಂಗ್ 7 ಕೋಟಿ ರೂಗೆ ಎಸ್ಆರ್ಹೆಚ್ ನ ಪಾಲಾಗಿದ್ದಾರೆ. ಯುವಿಗಿಂತಲೂ ಹೆಚ್ಚಿನ ಬೆಲೆಯಲ್ಲಿ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಬಿಕರಿಯಾಗಿದ್ದು, ಅವರನ್ನು ರಾಯಲ್ ಚಾಲೆಂಜೆರ್ಸ್ 9.5 ಕೋಟಿಗೆ ಕೊಂಡುಕೊಂಡಿದೆ..! ಇದರೊಂದಿಗೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅಧಿಕ ಹಣಕ್ಕೆ ಬಿಕರಿಯಾದ ಆಟಗಾರ ಎಂಬ ಖ್ಯಾತಿಗೆ ವ್ಯಾಟ್ಸನ್ ಭಾಜನರಾಗಿದ್ದಾರೆ..!
ಯುವಿಯನ್ನು ಕೊಂಡುಕೊಂಡ ಎಸ್ಆರ್ಹೆಚ್ (ಸನ್ ರೈಸಸ್ ಹೈದರಾಬಾದ್) ನವರೇ ಭಾರತೀಯ ವೇಗಿ ಆಶೀಶ್ ನೆಹ್ರಾರನ್ನು 5.5 ಕೋಟಿಗೆ ಖರೀಧಿಸಿದ್ದಾರೆ.
ಇನ್ನೊಬ್ಬ ವೇಗಿ ಇಶಾಂತ್ ಶರ್ಮಾ 3.8 ಕೋಟಿ ರೂಗಳಿಗೆ ಪುಣೆ ಸೂಪರ್ ಜೈಂಟ್ಸ್ ತಂಡದೊಂದಿಗೆ ಕೂಡಿ ಕೊಂಡಿದ್ದಾರೆ..! ಇರ್ಫಾನ್ ಪಠಾಣ್ ರನ್ನೂ ಕೂಡ ಪುಣೆ ತಂಡ 1ಕೋಟಿ ಮೂಲಬೆಲೆಗೇನೇ ಕೊಂಡಿದೆ..! ಯುವ ಆಟಗಾರ ಸಂಜು ಸ್ಯಾಮ್ಸನ್ ಡೆಲ್ಲಿ ಡೇರ್ಡೆವಿಲ್ ತಂಡಕ್ಕೆ 4.2 ಕೋಟಿ ರೂಗಳಿಗೆ ಹರಾಜಾಗಿದ್ದಾರೆ..!
ವಿಂಡಿಸ್ನ ಸ್ಮಿತ್ 2.3 ಕೋಟಿಗೆ ಗುಜರಾತ್ ಲಯನ್ಸ್ ತಂಡಕ್ಕೂ, ಪೀಟರ್ ಸನ್ 3.5 ಕೋಟಿಗೆ ಪುಣೆ ತಂಡಕ್ಕೂ ಬಿಕರಿಯಾಗಿದ್ದಾರೆ.
ಇನ್ನುಳಿದಂತೆ ಅಚ್ಚರಿಯ ಸಂಗತಿಗಳೆಂದರೆ, ಶ್ರೀಲಂಕಾದ ಜಯವರ್ಧನೆ, ಆಸ್ಟ್ರೇಲಿಯಾದ ಮೈಕಲ್ ಹಸ್ಸಿ, ಉಸ್ಮಾನ್ ಖ್ವಾಜ, ಭಾರತದ ಚೇತೇಶ್ವರ ಪೂಜಾರ, ನ್ಯೂಜಿಲ್ಯಾಂಡ್ನ ಮಾರ್ಟಿನ್ ಗುಪ್ಟಿಲ್, ಆಸ್ಟ್ರೇಲಿಯಾದ ಆರನ್ ಪಿಂಚ್ ರನ್ನು ಕೊಂಡುಕೊಳ್ಳು ಯಾವ ತಂಡವೂ ಆಸಕ್ತಿ ತೋರಿಲ್ಲ..

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

Share This Article