ಐಎಎಸ್ ಮಾಡೋಕೆ ಇಂಜಿನಿಯರ್ ಕೆಲಸ ಬಿಟ್ರು, ಹೋಟೆಲ್ ಮಾಣಿಯಾದ್ರು, ಆರು ಬಾರಿ ಸೋತ್ರು, ಏಳನೇ ಬಾರಿ ಗೆದ್ದೇ ಬಿಟ್ರು..!

0
91

ಸೋಲೇ ಗೆಲುವಿನ ಮೆಟ್ಟಿಲು..! ಸೋಲನ್ನು ಪ್ರೀತಿಸುವವರು ಒಂದಲ್ಲ ಒಂದುದಿನ ಗೆದ್ದೇ ಗೆಲ್ಲುತ್ತಾರೆ..! ಸತತ ಪ್ರಯತ್ನವಿದ್ದರೆ ಗೆಲುವು ನಿಶ್ಚಿತ..! ಇದಕ್ಕೆ ಕೆ. ಜಯಗಣೇಶನ್ ಲೈಫ್ ಸ್ಟೋರಿಯೇ ಒಂದು ನಿದರ್ಶನ.
ಯಾರಿವರು ಕೆ. ಜಯಗಣೇಶನ್? ಅವರು ಸೋತಿದ್ದು ಎಲ್ಲಿ..!? ಈಗ ಅವರು ಪಡೆದಿರುವ ಗೆಲುವು ಯಾವುದು?
ಜಯಗಣೇಶನ್, ತಮಿಳುನಾಡಿನ ವೆಲ್ಲೂರಿನ ವಿಜಯ ಮಂಗಳಂ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವರು. ಇವರದ್ದು ಬಡ ಕುಟುಂಬ. ಅಪ್ಪ, ಕೃಷ್ಣನ್ ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದವರು. ಮನೆಯಲ್ಲಿ ಜಯಗಣೇಶನ್ ರವರೇ ಹಿರಿಯ ಮಗ. ಇವರಿಗೆ ಇಬ್ಬರು ತಂಗಿಯರು, ಒಬ್ಬನೇ ಒಬ್ಬ ತಮ್ಮ..! ಮನೆಯ ಒಟ್ಟು ಆರು ಮಂದಿಗೂ ಕೃಷ್ಣನ್ ಅವರ ದುಡಿಮೆಯೇ ಗತಿ..! ಜಯಗಣೇಶನ್ ಅವರ ತಾಯಿ ಗೃಹಿಣಿ.
ಬಡತನದ ನಡುವೆಯೂ ಜಯಗಣೇಶನ್ಗೆ ಓದಿಸಬೇಕೆಂಬ ಆಸೆ ಅಅಪ್ಪ-ಅಮ್ಮನಿಗೆ. ಗಣೇಶನ್ ಎಂಟನೇ ತರಗತಿಯವರೆಗೆ ತನ್ನ ಹಳ್ಳಿ ಶಾಲೆಯಲ್ಲೇ ಓದಿ, ಉಳಿದ ಎರಡು ವರ್ಷದ ಶಾಲಾ ಶಿಕ್ಷಣವನ್ನು ಹತ್ತಿರದ ಪಟ್ಟಣದ ಶಾಲೆಯಲ್ಲಿ ಪಡೀತಾರೆ..!
ಓದಿನಲ್ಲಿ ಜಯಗಣೇಶನ್ ಯಾವಾಗಲೂ ಮುಂದು. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಇವರಿಗೆ ಬಾಲ್ಯದಲ್ಲಿದ್ದುದ್ದು ಒಂದೇ ಒಂದು ಗುರಿ, ನಾನು ಆದಷ್ಟು ಬೇಗ ಕೆಲಸ ಗಿಟ್ಟಿಸಿಕೊಳ್ಳಬೇಕು, ಅಪ್ಪನಿಗೆ ನೆರವಾಗಬೇಕು..! ಪಾಪ, ಇವರ ಅಪ್ಪನಿಗೆ ಸಿಗ್ತಾ ಇದ್ದಿದ್ದು ಕೇವಲ 4,500 ರೂಪಾಯಿ ಸಂಬಳ..! ಇಷ್ಟೊಂದು ಕಡಿಮೆ ಸಂಬಳದಲ್ಲಿ ನಾಲ್ಕು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಹೊಟ್ಟೆ-ಬಟ್ಟೆ, ಮನೆಯ ಖರ್ಚನ್ನೂ ನಿಭಾಯಿಸಬೇಕಿತ್ತು..! ಆದ್ದರಿಂದ ಬೇಗನೇ ಕೆಲಸಕ್ಕೆ ಸೇರಬೇಕಂತ ಜಯಗಣೇಶನ್ ಎಸ್ಎಸ್ಎಲ್ಸಿ ಮುಗಿದ ಮೇಲೆ ಪಾಲಿಟೆಕ್ನಿಕ್ ಕಾಲೇಜಿಗೆ ಸೇರ್ತಾರೆ..! ಅಲ್ಲಿ ಶೇಕಡ 91ದಷ್ಟು ಅಂಕಗಳೊಂದಿಗೆ ಪಾಸ್ ಆಗ್ತಾರೆ..! ನಂತರ ಮೆರಿಟ್ ಸೀಟ್ ಅಡಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಅವಕಾಶ ಸಿಗುತ್ತೆ..! ಆಗ ತಂತೈ ಪೆರಿಯರ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕನಿಕಲ್ ಇಂಜಿನಿಯರಿಂಗ್ ಮಾಡ್ತೀನಂತ ಡಿಸೈಡ್ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರಿಯೇ ಬಿಡ್ತಾರೆ..! ಅಪ್ಪ ತ್ಯಾಗ ಮಾಡಿ, ಅವರ ಓದಿಗೆ ಪ್ರೋತ್ಸಾಹ ನೀಡ್ತಾರೆ. ಇಂಜಿನಿಯರಿಂಗ್ ಮಾಡುವಾಗಲೂ ಅವರಿಗೆ ಇದ್ದ ಏಕೈಕ ಗುರಿ ಪದವಿ ಮುಗಿಯುತ್ತಿದ್ದಂತೆ ಕೆಲಸವನ್ನು ಪಡೆಯೋದಾಗಿತ್ತು..!
ಅವರ ಹಳ್ಳಿ ಬಹುತೇಕರು ಹೆಚ್ಚಾಗಿ ಓದಿದ್ದು ಎಸ್ಎಸ್ಎಲ್ಸಿ ತನಕ ಮಾತ್ರ..! ಕೆಲವರಂತು ಅಷ್ಟೂ ಓದಿರ್ಲಿಲ್ಲ..! ಅವರೆಲ್ಲಾ ಕೂಲಿಯಾಳುಗಳಾಗಿ, ಡ್ರೈವರ್ಗಳಾಗಿ ಕೆಲಸ ಮಾಡ್ತಾ ಇದ್ರು..! ಗಣೇಶನ್ ಮಾತ್ರ ಅವರ ಸ್ನೇಹತರುಗಳಲ್ಲಿ ಕಾಲೇಜು ಮೆಟ್ಟಿಲನ್ನೇರಿದರಾಗಿದ್ದರು..!
ಜಯಗಣೇಶನ್ ಗೆ ಶಿಕ್ಷಣದ ಮೌಲ್ಯ ಏನು ಅಂತ ಗೊತ್ತಿತ್ತು..! ಅವರ ತಂದೆ ಮಾತ್ರ ಅವರ ಕುಟುಂಬದಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ರು..! ಅವರಿಗೂ ಶಿಕ್ಷಣದ ಮೌಲ್ಯ ತಿಳಿದಿತ್ತು..! ಅವರು ಮಗನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಕೊಟ್ರು..!
ಅಂತೂ-ಇಂತೂ ನಾಲ್ಕು ವರ್ಷ ಇಂಜಿನಿಯರಿಂಗ್ ಪದವಿ ಮುಗಿಯಿತು. 2000ನೇ ಇಸವಿಯಲ್ಲಿ ಪದವಿ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಬಂದರು..! 2500ರೂಪಾಯಿ ಸಂಬಳಕ್ಕೆ ಕೆಲಸವೂ ಸಿಗ್ತು..! ಬೆಂಗಳೂರಲ್ಲಿರ ಬೇಕಾದಾಗ, ಹಳ್ಳಿ, ಹಳ್ಳಿ ಜನ, ಸ್ನೇಹಿತರು, ಅವರ ಬದುಕು, ಶಿಕ್ಷಣ ಜಾಗೃತಿ ಇಲ್ಲದಿರೋದು ಎಲ್ಲವೂ ನೆನಪಾಯ್ತು, ಬರಿ ನೆನಪಾಗಲಿಲ್ಲ.. ಮತ್ತೆ ಮತ್ತೆ ಅವರನ್ನು ಕಾಡತೊಡಗಿದವು..! ಆಗ ಬಡವರಿಗಾಗಿ ನಾನು ಸಹಾಯ ಮಾಡ್ಬೇಕಂದ್ರೆ ಐಎಎಸ್ ಆಫೀಸರ್ ಆಗಲೇ ಬೇಕೆಂಬ ಗುರಿ ಇಟ್ಕೊಂಡ್ರು ಕಷ್ಟಪಟ್ಟು ಓದೋಕೆ ಶುರು ಮಾಡಿದ್ರು..! ಸರ್ಕಾರಿ ಕೋಚಿಂಗ್ ಸೆಂಟರ್ನಲ್ಲಿ ಐಎಎಸ್ ಪರೀಕ್ಷಾ ಸಿದ್ದತೆಗಾಗಿ ಸೇರಿದ್ರು..! ಆಗ ತನ್ನ ಕೆಲಸ ಬಿಟ್ಟು, ತಮಿಳುನಾಡಿನಲ್ಲಿ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡಿದ್ರು..!
ಮೊದಲನೇ ಸಲ ಪರೀಕ್ಷೆ ಬರೆದಾಗ ಫೇಲ್..! ಎರಡನೇ ಸಲವೂ ಫೇಲ್..! ಮೂರನೇ ಸಲವೂ.. ಹ್ಞೂಂ, ಹ್ಞೂಂ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಆಗಲೇ ಇಲ್ಲ..! ನಾಲ್ಕು ಮತ್ತು ಐದನೇ ಪ್ರಯತ್ನದಲ್ಲೂ ಸೋತರು..! ಆರನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಮತ್ತು ಮೈನ್ಸ್ ಪಾಸ್ ಆದರೂ ಕೂಡ ಇಂಟರ್ ವೀವ್ ನಲ್ಲಿ ವಿಫಲರಾದರು..! ಆದರೆ ಛಲ ಬಿಡಲಿಲ್ಲ..! ಗೆದ್ದೇ ಗೆಲ್ಲುತ್ತೇನೆಂದು ಹಠ ತೊಟ್ಟು ಏಳನೇ ಬಾರಿ ಐಎಎಸ್ ಪರೀಕ್ಷೆ ತೆಗೆದುಕೊಂಡ್ರು..! 2008ರಲ್ಲಿ ಐಎಎಸ್ ಪರೀಕ್ಷೆಯನ್ನು 156ನೇ ರ್ಯಾಂಕ್ನೊಂದಿಗೆ ತೇರ್ಗಡೆ ಆಗಿಯೇ ಬಿಟ್ಟರು..! ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು ಅಲ್ವೇ?

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ಹಾಲಿವುಡ್ ಗೆ ಎಂಟ್ರಿ ಕೊಟ್ರು ದೀಪಿಕಾ ಪಡುಕೋಣೆ..! ವಿನ್ ಡಿಸೇಲ್ ಜೊತೆ ದೀಪಿಕಾ ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್’.

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

LEAVE A REPLY

Please enter your comment!
Please enter your name here