IPLಆಡುವ ಉತ್ಸಾಹದಲ್ಲಿದ್ದ ಶ್ರೀಶಾಂತ್ ಗೆ ನಿರಾಸೆ

Date:

ಫೆ.18 ರಂದು ನಡೆಯುವ 2021ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಆಟಗಾರರ ಹರಾಜಿಗೆ ಭಾರತ ಅನುಭವಿ ವೇಗಿ ಎಸ್‌ ಶ್ರೀಶಾಂತ್‌ ಅವರನ್ನು ಯಾವುದೇ ಫ್ರಾಂಚೈಸಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಸತತ ಏಳು ವರ್ಷಗಳ ಬಳಿಕ ಐಪಿಎಲ್‌ ಆಡಬೇಕೆಂಬ ಉತ್ಸಾಹದಲ್ಲಿದ್ದ ಕೇರಳ ವೇಗಿಗೆ ಭಾರಿ ನಿರಾಸೆಯಾಗಿದೆ.

ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಮಗ ಅರ್ಜುನ್‌ ತೆಂಡೂಲ್ಕರ್‌ 20 ಲಕ್ಷ ಮೂಲ ಬೆಲೆಯೊಂದಿಗೆ ಶಾರ್ಟ್ ಲಿಸ್ಟ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಹಾಗೂ ಭಾರತದ ಚೇತೇಶ್ವರ್‌ ಪೂಜಾರ ಕ್ರಮವಾಗಿ ಒಂದು ಕೋಟಿ ಹಾಗೂ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಶಾರ್ಟ್‌ ಲಿಸ್ಟ್‌ನಲ್ಲಿದ್ದಾರೆ.

2021ರ ಐಪಿಎಲ್‌ ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ. ಫೆಬ್ರುವರಿ 18ರಂದು ಚೆನ್ನೈನಲ್ಲಿ ಒಟ್ಟು 292 ಕ್ರಿಕೆಟಿಗರ ಹೆಸರು ಹರಾಜಿನಲ್ಲಿ ಕಿವಿಗೆ ಬೀಳಲಿದೆ.

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಒಟ್ಟು 1114 ಆಟಗಾರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದರು. ಅಂತಿಮವಾಗಿ ಎಂಟು ಫ್ರಾಂಚೈಸಿಗಳು ಶಾರ್ಟ್‌ ಲಿಸ್ಟ್‌ ಅನ್ನು ಕಳುಹಿಸಿದ ಬಳಿಕ ಇದೀಗ 292 ಆಟಗಾರರು ಮಾತ್ರ ಹರಾಜಿಗೆ ಪರಿಗಣಿಸಲಾಗಿದೆ.

ಭಾರತದ ಹರಭಜನ್‌ ಸಿಂಗ್‌ ಹಾಗೂ ಕೇದಾರ್ ಜಾಧವ್ ಸೇರಿದಂತೆ ವಿದೇಶಿ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಸ್ಟೀವನ್‌ ಸ್ಮಿತ್, ಶಕಿಬ್‌ ಅಲ್‌-ಹಸನ್, ಮೊಯಿನ್‌ ಅಲಿ, ಸ್ಯಾಮ್‌ ಬಿಲ್ಲಿಂಗ್ಸ್‌, ಲಿಯಾಮ್‌ ಪ್ಲೆಂಕೆಟ್‌, ಜೇಸನ್‌ ರಾಯ್‌ ಹಾಗೂ ಮಾರ್ಕ್‌ ವುಡ್‌ ಅವರಿಗೆ ಮುಂಬರುವ ಹರಾಜಿನಲ್ಲಿ ಎರಡು ಕೊಟಿ ಮೂಲ ಬೆಲೆ ನಿಗದಿಪಡಿಸಲಾಗಿದೆ.

ಇನ್ನು 12 ಆಟಗಾರರಿಗೆ 1.5 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಹನುಮ ವಿಹಾರಿ ಹಾಗೂ ಉಮೇಶ್‌ ಯಾದವ್‌ ಸೇರಿದಂತೆ ಪಟ್ಟಿಯ 11 ಆಟಗಾರರಿಗೆ ಒಂದು ಕೋಟಿ ಮೂಲ ಬೆಲೆಯನ್ನು ಫಿಕ್ಸ್ ಮಾಡಲಾಗಿದೆ.

ಹರಾಜಿನಲ್ಲಿ 164 ಭಾರತೀಯ ಆಟಗಾರರು, 126 ವಿದೇಶಿ ಆಟಗಾರರು ಹಾಗೂ ಮೂವರು ಸದಸ್ಯ ರಾಷ್ಟ್ರಗಳ ಆಟಗಾರರು ಚೆನ್ನೈನಲ್ಲಿ ನಡೆಯಲಿರುವ 2021ರ ಐಪಿಎಲ್‌ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರಿ(13) ನಲ್ಲಿ ಅತಿ ಹೆಚ್ಚು ಸ್ಥಾನಗಳು ಲಭ್ಯವಿರುವ ಫ್ರಾಂಚೈಸಿಯಾಗಿದೆ. ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದಲ್ಲಿ 9 ಸ್ಥಾನಗಳು, ರಾಜಸ್ಥಾನ್‌ ರಾಯಲ್ಸ್‌ನಲ್ಲಿ 8, ಕೋಲ್ಕತಾ ನೈಟ್‌ ರೈಡರ್ಸ್ ತಂಡದಲ್ಲಿ 8, ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಮೂರು ಸ್ಥಾನಗಳು ತುಂಬುವ ಅಗತ್ಯವಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...