IPL ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಸೇಲಾದ ಕನ್ನಡಿಗ

Date:

ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಟಗಾರರ ಹರಾಜಿನಲ್ಲಿ ಕರ್ನಾಟಕದ ಸ್ಪಿನ್‌ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್ 9.25 ಕೋಟಿ ರೂ. ನೀಡಿ ಖರೀದಿಸಿತು. ಐಪಿಎಲ್‌ ಇತಿಹಾಸದಲ್ಲಿಯೇ ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರ ಪಡೆದ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ.

ಕಳೆದ ಬಾರಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ (ಪಂಜಾಬ್‌ ಕಿಂಗ್ಸ್) ಪ್ರತಿನಿಧಿಸಿದ್ದ ಕೆ.ಗೌತಮ್‌ ಅವರ ಮೂಲ ಬೆಲೆ ಹರಾಜಿನಲ್ಲಿ 20 ಲಕ್ಷ ರೂ. ಗಳಿತ್ತು. ಇಂಗ್ಲೆಂಡ್‌ನ ಮೊಯಿನ್‌ ಅಲಿ ಅವರನ್ನು ಹರಾಜಿನಲ್ಲಿ ಮೊದಲನೇ ಆಲ್‌ರೌಂಡರ್‌ ಆಗಿ ಖರೀದಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಎರಡನೇ ಆಲ್‌ರೌಂಡರ್‌ ಆಗಿ ಕೆ ಗೌತಮ್‌ ಅವರನ್ನೂ ತನ್ನ ಕುಟುಂಬಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಆಫ್‌ ಸ್ಪಿನ್‌ ಆಲ್‌ರೌಂಡರ್‌ ಕೆ. ಗೌತಮ್‌ ಅವರನ್ನು ಖರೀದಿ ಮಾಡಲು ಕೋಲ್ಕತಾ ನೈಟ್‌ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ಆಸಕ್ತಿ ತೋರಿಸಿತ್ತು, ಆದರೆ ,ಕೊನೆಯ ಹಂತದಲ್ಲಿ ಚೆನ್ನೈ ಫ್ರಾಂಚೈಸಿಗೆ ಕರ್ನಾಟಕ ಮೂಲದ ಆಟಗಾರ ಒಲಿದರು.

ಚೆನ್ನೈ ಸೂಪರ್ ಕಿಂಗ್ಸ್ 2021ರ ಐಪಿಎಲ್‌ ಹರಾಜಿಗೆ ಆರು ಆಟಗಾರರನ್ನು ಬಿಡುಗಡೆ ಮಾಡಿತ್ತು. ಕೆಲವು ಕೀ ಆಟಗಾರರ ಜತೆಗೆ ಕೇದಾರ್‌ ಜಾಧವ್‌ ಮತ್ತು ಪಿಯೂಷ್‌ ಚಾವ್ಲಾ ಅವರನ್ನು ಸಿಎಸ್‌ಕೆ ಕಳೆದ ವರ್ಷ ಹರಾಜಿಗೆ ಬಿಡುಗಡೆ ಮಾಡಿತ್ತು. ವೈಯಕ್ತಿಕ ಕಾರಣಗಳಿಂದ ಕಳೆದ ಆವೃತ್ತಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದ ಸ್ಟಾರ್‌ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಇದೀಗ ತಂಡಕ್ಕೆ ಮರಳಿದ್ದಾರೆ.

ಸತತ ಹತ್ತು ಆವೃತ್ತಿಗಳಲ್ಲಿ ನಾಕ್‌ಔಟ್‌ ತಲುಪಿದ ಏಕಮಾತ್ರ ತಂಡ ಎನಿಸಿಕೊಂಡಿದ್ದ ಸಿಎಸ್‌ಕೆ ಕಳೆದ ಬಾರಿ ಯುಎಇ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯ 7ನೇ ಸ್ಥಾನದಲ್ಲಿ ಅಭಿಯಾನ ಅಂತ್ಯಗೊಳಿಸಿತ್ತು. ಹೀಗಾಗಿ ಈ ಬಾರಿ ಭರ್ಜರಿ ಕಮ್‌ಬ್ಯಾಕ್‌ ಮಾಡುವುದನ್ನು ಎದುರು ನೋಡುತ್ತಿದೆ.

ಎಂಎಸ್‌ ಧೋನಿ, ಸುರೇಶ್‌ ರೈನಾ, ಅಂಬಾಟಿ ರಾಯುಡು, ಕೆ.ಎಂ ಆಸೀಫ್, ದೀಪಕ್‌ ಚಹರ್‌, ಡ್ವೇನ್ ಬ್ರಾವೊ, ಫಾಫ್‌ ಡು ಪ್ಲೆಸಿಸ್‌, ಇಮ್ರಾನ್‌ ತಾಹೀರ್, ಎನ್‌ ಜಗದೀಶನ್‌, ಕರ್ಣ್‌ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್‌ ಸ್ಯಾಂಟ್ನರ್‌, ರವೀಂದ್ರ ಜಡೇಜಾ, ಋತುರಾಜ್‌ ಗಾಯಕ್ವಾಡ್‌, ಶಾರ್ದುಲ್‌ ಠಾಕೂರ್‌, ಸ್ಯಾಮ್‌ ಕರ್ರನ್‌, ಜಾಶ್‌ ಹೇಝಲ್‌ವುಡ್‌, ಆರ್‌ ಸಾಯಿ ಕಿಶೋರ್‌.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...