IPL ದುಬೈಗೆ ಸ್ಥಳಾಂತರಿಸಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ BCCI

Date:

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ಆವೃತ್ತಿಯ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಖಾತರಿಪಡಿಸಿದೆ. ಬಿಸಿಸಿಐ ಸಭೆಯ ಬಳಿಕ ಶನಿವಾರ ಈ ನಿರ್ಧಾರ ಅಧಿಕೃತವಾಗಿ ಪ್ರಕಟವಾಯಿತು.

ಕಳೆದ ವರ್ಷ ಅಂದರೆ 2020ರ ಐಪಿಎಲ್ ಸೀಸನ್ ಕೂಡ ಯುಎಇಯಲ್ಲಿ ಯಶಸ್ವಿಯಾಗಿ ನೆರವೇರಿತ್ತು. ಈ ಬಾರಿಯ ಐಪಿಎಲ್ ಅನ್ನು ಭಾರತದಲ್ಲಿ ಆರಂಭಿಸಲಾಗಿತ್ತಾದರೂ ಕೋವಿಡ್-19 ಪ್ರಕರಣಗಳು ಐಪಿಎಲ್ ಬಯೋ ಬಬಲ್ ಒಳಗೆ ಕಾಣಲಾರಂಭಿಸಿದ್ದರಿಂದ ಐಪಿಎಲ್ ಯುಎಇಗೆ ಸ್ಥಳಾಂತರವಾಗಿದೆ. ಆದರೆ ಪಂದ್ಯಗಳ ಆರಂಭದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ.

ಈ ಬಾರಿಯ ಐಪಿಎಲ್ ಯುಎಇಗೆ ಸ್ಥಳಾಂತರಿಸುವ ನಿರ್ಧಾರ ತಾಳಿದ್ದೇಕೆ ಅನ್ನೋದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಐಪಿಎಲ್ ಮುಂದುವರೆಯಲಿರುವ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಳೆಯಾದಂತಹ ಉದಾಹರಣೆಗಳಿವೆ. ಹೀಗಾಗಿಯೇ ಯುಎಇಯಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆವು ಎಂದು ಶಾ ತಿಳಿಸಿದ್ದಾರೆ.

‘ನಾವು ಯುಎಇಯಲ್ಲಿ ಐಪಿಎಲ್ ನಡೆಸಲು ನಿರ್ಧರಿಸಿದೆವು ಯಾಕೆಂದರೆ, ಆ ವೇಳೆ ಭಾರತದಲ್ಲಿ ಮಾನ್ಸೂನ್ ಇರುತ್ತದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಆ ವೇಳೆ ಪಂದ್ಯಗಳನ್ನು ಹಿಡಿದಿಟ್ಟುಕೊಳ್ಳಲಾಗದು. ಇದೇ ಕಾರಣಕ್ಕೆ ನಾವು ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಿದೆವು,’ ಎಂದು ಶಾ ವಿವರಿಸಿದರು. ಐಪಿಎಲ್ 2021ರಲ್ಲಿ 29 ಪಂದ್ಯಗಳು ನಡೆದಿದ್ದು, 31 ಪಂದ್ಯಗಳು ಬಾಕಿ ಉಳಿದಿವೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...