ಐಪಿಎಲ್ ಪ್ರಯುಕ್ತ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

Date:

ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಾವಳಿಯ ಪ್ರಯುಕ್ತ ಬೆಂಗಳೂರು ಮೆಟ್ರೋ ಅವಧಿಯ‌ನ್ನು ತಡರಾತ್ರಿ 12.30ರವರೆಗೆ ವಿಸ್ತರಿಸಲಾಗಿದೆ.
ಐಪಿಎಲ್ ಪಂದ್ಯಗಳು ನಡೆಯಲಿರುವ ಏ.13, 21, 25, 29 ಹಾಗೂ ಮೇ 1ಮತ್ತು 17ರಂದು ಮೆಟ್ರೋ ರೈಲು ರಾತ್ರಿ 11ಗಂಟೆ ಬದಲಿಗೆ ತಡರಾತ್ರಿ 12.30ರವರೆಗೆ ಸಂಚಾರ ಸೇವೆ ಒದಗಿಸಲಿದೆ.


ರಾತ್ರಿ 11ರ ನಂತರ ಪ್ರತಿ 15 ನಿಮಿಷಗಳ ಅವಧಿಯಲ್ಲಿ ಮೆಟ್ರೊ ರೈಲ್ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರ ಮೆಟ್ರೊ ನಿಲ್ದಾನದವರೆಗೆ ಸಂಚರಿಸಲಿದೆ. ಕೊನೆಯ ವಾಣಿಜ್ಯ ರೈಲು ಸಂಚಾರವು ಕಬ್ಬನ್‌ಪಾರ್ಕ್ ಮೆಟ್ರೊ ರೈಲು ನಿಲ್ದಾಣದಿಂದ ಮೈಸೂರು ರಸ್ತೆ ಮೆಟ್ರೊ ರೈಲು ನಿಲ್ದಾಣದ ಕಡೆಗೆ ಹೊರಡಲಿದೆ. ಇದು ನಾಗಸಂದ್ರ ಮತ್ತು ಯಲಚೇನಹಳ್ಳಿ ಮೆಟ್ರೊ ರೈಲು ನಿಲ್ದಾಣಗಳ ಕಡೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಸಂಪರ್ಕ ಕಲ್ಪಿಸಲಿದೆ.


ಕ್ರಿಕೆಟ್ ಪಂದ್ಯಾವಳಿ ಮುಗಿದ ನಂತರ ಕಬ್ಬನ್‌ಪಾರ್ಕ್ ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೊ ರೈಲು ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲ ವಾಗುವಂತೆ ರಿರ್ಟನ್ ಜರ್ನಿ ಪೇಪರ್ ಟಿಕೆಟುಗಳನ್ನು ಯಾವುದೇ ಮೆಟ್ರೊ ನಿಲ್ದಾಣಗಳಿಂದ ಖರೀದಿಸಬಹುದು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...