ಐಪಿಎಲ್ 2018ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡೋ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಹೊಡೆಬಡೆಯ ದಾಂಡಿಗ ಕ್ರಿಸ್ ಗೇಲ್ ತಮಾಷೆಯಿಂದ ಟ್ವೀಟ್ ಗೆ ಶೇರ್ ಮಾಡಿದ್ದಾರೆ.
ತಾನು ಗೇಲ್ ಅವರನ್ನು ಆಯ್ಕೆಮಾಡಿ ಐಪಿಎಲ್ ರಕ್ಷಿಸಿದ್ದೇನೆಂದು ಸೆಹ್ವಾಗ್ ಟ್ವೀಟ್ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ಗೇಲ್ ಹೌದೆಂದಿದ್ದಾರೆ.

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿದ್ದವು. ಹೀಗಿದ್ದಾಗ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಸೆಹ್ವಾಗ್ ಗೇಲ್ ರನ್ನು ಮೂಲಬೆಲೆ 2ಕೋಟಿ ರೂ ಗೆ ತಂಡಕ್ಕೆ ಸೇರಿಸಿಕೊಂಡಿದ್ದರು.
ಕೆಲವು ದಿನಗಳ ಹಿಂದಷ್ಟೇ ಕನ್ನಡಿಗ ಕೆ ಎಲ್ ರಾಹುಲ್ ಕ್ರಿಸ್ ಗೇಲ್ ಬಗ್ಗೆ ಎಲ್ಲಾ ಎದುರಾಳಿ ತಂಡದ ಆಟಗಾರರಿಗೆ ಎಚ್ಚರಿಸಿದ್ದರು.
ಗೇಲ್ ಆಡಿದ ಎರಡೂ ಪಂದ್ಯಗಳಲ್ಲಿ ಅತ್ಯತ್ತಮ ಆಟವಾಡಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ನಿನ್ನೆ ಸನ್ ರೈಸರ್ಸ್ ವಿರುದ್ಧದ ಶತಕವಂತೂ ಅವರನ್ನು ಕಡೆಗಾಣಿಸಿದವರಿಗೆ ನೀಡಿದ ಉತ್ತರವಾಗಿದೆ.
— Chris Gayle (@henrygayle) April 19, 2018






