ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಹಳಿಗೆ ಮರಳಿ ಕಪ್ ಗೆಲ್ಲುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಅನ್ನು 6ವಿಕೆಟ್ ಗಳಿಂದ ಮಣಿಸುವ ಮೂಲಕ 2 ನೇ ಗೆಲುವು ಪಡೆಯಿತು.
ಟಾಸ್ ಸೋತ ಡೆಲ್ಲಿ ಡೇರ್ ಡೆವಿಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. ನಿಗಧಿತ 20ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.

ರಿಷಬ್ ಪಂತ್ 85, ಶ್ರೇಯಸ್ ಅಯ್ಯರ್ 52 ರನ್ ಗಳಿಸಿ ಡೆಲ್ಲಿ ಪರ ಉತ್ತಮ ಆಟ ಪ್ರದರ್ಶಿಸಿದರು.
ಗುರಿ ಬೆನ್ನತ್ತಿದ ಆರ್ ಸಿ ಬಿ 9 ರನ್ ಆಗುವಷ್ಟರಲ್ಲಿ ವೋರ ವಿಕೆಟ್ ಕಳೆದುಕೊಂಡಿತು. 29 ರನ್ ಗೆ ಡಿಕಾಕ್ ಪೆವಿಲಿಯನ್ ಸೇರಿದ್ರು. ನಂತರ ನಾಯಕ ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ತಂಡಕ್ಕೆ ಆಧಾರವಾಗಿ ನಿಂತರು. ವಿರಾಟ್ 30 ರನ್ ಗಳಿಸಿದ್ದಾಗ ಹರ್ಷಲ್ ಪಟೇಲ್ ಎಸೆತದಲ್ಲಿ ಬೋಲ್ಟ್ ಪಡೆದ ಅತ್ಯುತ್ತಮ ಕ್ಯಾಚ್ ನಿಂದ ನಿರಾಸೆಯಿಂದ ಪೆವಿಲಿಯನ್ ದಾರಿ ಹಿಡಿದರು.
ವಿರಾಟ್ ಔಟಾದರೂ ಡಿವಿಯರ್ಸ್ ಗಟ್ಟಿಯಾಗಿ ನಿಂತು ಗೆಲುವಿನ ದಡ ಸೇರಿಸಿದರು. 39 ಎಸೆತಗಳಲ್ಲಿ ಎಬಿಡಿ ಅಜೇಯ 90 ರನ್ ಬಾರಿಸಿದರು. ಜೊತೆಗೆ ಮಂದೀಪ್ ಸಿಂಗ್ 9 ಎಸೆತದಲ್ಲಿ 17 ರನ್ ಕೊಡುಗೆ ನೀಡಿದರು.







