ಐಪಿಎಲ್ 11ನೇ ಆವೃತ್ತಿ ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಂಜಾಬ್ ಅನ್ನು ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ಬ್ಯಾಟಿಂಗ್ ಗೆ ಆಹ್ವಾನಿಸಿತು.
ನಾಯಕ ಗೌತಮ್ ಗಂಭೀರ್ ಅವರ ನಿರ್ಧಾರ ಸರಿಯಾಗಿಯೇ ಇದೆ ಎಂಬಂತೆ ಬೌಲ್ ಮಾಡಿದ ಡೆಲ್ಲಿ ಬೌಲರ್ ಗಳು ಕೇವಲ 143 ರನ್ ಗಳಿಗೆ ಪಂಜಾಬ್ ಅನ್ನು ಕಟ್ಟಿಹಾಕಿದರು.
ಸುಲಭ ಗುರಿ ಬೆನ್ನತ್ತಿದ ದೆಹಲಿ ಬ್ಯಾಟ್ಸ್ ಮನ್ ಗಳಿಗೆ ಕಡಿವಾಣ ಹಾಕಿ ಅಲ್ಪ ಮೊತ್ತವನ್ನು ಸಮರ್ಥಿಸಿಕೊಳ್ಳುವಲ್ಲಿ ಅಶ್ವಿನ್ ಮುಂದಾಳತ್ವದ ಪಂಜಾಬ್ ಯಶಸ್ವಿಯಾಯಿತು. ಶ್ರೇಯಸ್ ಅಯ್ಯರ್ (57) ಏಕಾಂಗಿ ಹೋರಾಟ ವ್ಯರ್ಥವಾಗಿ ಪಂಜಾಬ್ 4 ರನ್ ಗಳಿಂದ ಗೆದ್ದು ಬೀಗಿತು.
ಆಡಿರುವ 6 ಪಂದ್ಯಗಳಲ್ಲಿ ಪಂಜಾಬ್ ಗೆ ಇದು 5ನೇ ಗೆಲುವು.