ಕ್ರಿಕೆಟ್ ನಲ್ಲಿ ಕ್ಯಾಚ್ ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ ಎಂಬ ಮಾತಿದೆ. ಒಂದು ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಬಲ್ಲದು.
ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ನಲ್ಲಿ 8 ತಂಡಗಳು ಒಟ್ಟಾರೆಯಾಗಿ 475 ಕ್ಯಾಚ್ ಗಳನ್ನು ಪಡೆದಿವೆ. ಒಟ್ಟು 110 ಕ್ಯಾಚ್ ಗಳನ್ನು ಕೈಚೆಲ್ಲಿವೆ.
ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ 63 ಕ್ಯಾಚ್ ಗಳನ್ನು ಪಡೆದಿದ್ದು, 18 ಕ್ಯಾಚ್ ಗಳನ್ನು ಕೈ ಚೆಲ್ಲಿವೆ.
ಈ ಮೂಲಕ ಈ ಬಾರಿ ಐಪಿಎಲ್ ನಲ್ಲಿ ಕ್ಯಾಚ್ ಬಿಟ್ಟ ತಂಡಗಳ ಪೈಕಿ ಕೋಲ್ಕತ್ತಾ ಮೊದಲ ಸ್ಥಾನ ಪಡೆದಿದೆ. ರನ್ನರ್ ಅಪ್ ಆಗಿ ಹೊರಹೊಮ್ಮಿರುವ ಸನ್ ರೈಸರ್ಸ್ ಹೈದರಾಬಾದ್ 17 ಕ್ಯಾಚ್ ಗಳನ್ನು ಕೈಚೆಲ್ಲಿದೆ.
ಮೂರನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ 17 ಪಂದ್ಯಗಳಿಂದ 69 ಕ್ಯಾಚ್ ಪಡೆದಿದ್ದು, 14 ಕ್ಯಾಚ್ ಗಳನ್ನು ಡ್ರಾಪ್ ಮಾಡಿದೆ.
ರಾಜಸ್ಥಾನ್ ರಾಯಲ್ಸ್ 15 ಪಂದ್ಯಗಳನ್ನು ಆಡಿದ್ದು 54 ಕ್ಯಾಚ್ ಪಡೆದು, 14 ಕ್ಯಾಚ್ ಗಳನ್ನು ಬಿಟ್ಟಿದೆ.
ಇನ್ನುಳಿದಂತೆ ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಲಾ 12 ಕ್ಯಾಚ್ ಗಳನ್ನು ಬಿಟ್ಟಿವೆ. ಡೆಲ್ಲಿ ಡೇರ್ ಡೆವಿಲ್ಸ್ 10 ಕ್ಯಾಚ್ ಗಳನ್ನು ಬಿಟ್ಟಿದೆ.