12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 23ರಿಂದ ಆರಂಭವಾಗಲಿದ್ದು 8 ತಂಡಗಳು ಗೆಲುವಿಗಾಗಿ ಸೆಣೆಸಲಿವೆ. ಈ 8 ತಂಡಗಳು ಯಾವುವು? ಅವುಗಳ ಫ್ರಾಂಚೈಸಿ ಯಾರು? ನಾಯಕರು ಯಾರು? ಅನ್ನೋದರ ವಿವರ ಇಲ್ಲಿದೆ.
ಬೆಂಗಳೂರು : ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್ಸಿಬಿ) ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. 2016ರಲ್ಲಿ ರನ್ನರ್ ಅಪ್ ಆಗಿದ್ದ ಆರ್ಸಿಬಿ ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಇದರ ಮಾಲೀಕರು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ
ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಲಿ ಚಾಂಪಿಯನ್. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಈ ತಂಡ ಈ ಬಾರಿಯೂ ಪ್ರಶಸ್ತಿ ಮುಡಿಗೇರಿಸಿಕೊಳ್ಳ ಬಲ್ಲ ಫೇವರೇಟ್ ಟೀಮ್.
ದೆಹಲಿ : ಜಿಎಂಆರ್ ಸ್ಪೋರ್ಟ್ಸ್ ಪ್ರೈ.ಲಿ ನ ಡೆಲ್ಲಿ ಟೀಮ್ ಕಳೆದ ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ಹೆಸರಲ್ಲಿ ಕಣಕ್ಕಿಳಿದಿತ್ತು. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹೆಸರಲ್ಲಿ ಕಣಕ್ಕಿಳಿಯುತ್ತಿದೆ. ಯುವ ಆಟಗಾರ ಶ್ರೇಯಸ್ ಅಯ್ಯರ್ ಈ ತಂಡದ ಸಾರಥಿ.
ಹೈದರಬಾದ್ : ಸನ್ ಟಿವಿ ನೆಟ್ವರ್ಕ್ಸ್ ಮಾಲಿಕತ್ವದ ಸನ್ ರೈಸರ್ಸ್ ಹೈದರಬಾದ್ ಕಳೆದ ಬಾರಿ ರನ್ನರ್ ಅಪ್ ಆಗಿತ್ತು. ಕೇನ್ ವಿಲಿಯಮ್ಸನ್ ನಾಯಕತ್ವದ ಈ ತಂಡ ಕಳೆದ ಬಾರಿ ಫೈನಲ್ ನಲ್ಲಿ ಚೆನ್ನೈ ವಿರುದ್ಧ ಸೋಲುಂಡಿತ್ತು. ಈ ಬಾರಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದೆ.
ಕೋಲ್ಕತ್ತಾ : ದಿನೇಶ್ ಕಾರ್ತಿಕ್ ನಾಯಕತ್ವದ, ನೈಟ್ ರೈಡರ್ಸ್ ಸ್ಪೋರ್ಟ್ಸ್ ಪ್ರೈ.ಲಿ ನ ಮಾಲೀಕತ್ವದ ಕೆಕೆಆರ್ ( ಕೋಲ್ಕತ್ತಾ ನೈಟ್ ರೈಡರ್ಸ್ ) 2 ಬಾರಿ ಚಾಂಪಿಯನ್ ಆಗಿರುವ ತಂಡ.
ಮುಂಬೈ : ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ.ಲಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.
ಈ ತಂಡ ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರೇಟ್ ಟೀಮ್ಗಳಲ್ಲೊಂದು. ಮೂರಿ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿರುವ ಟೀಮ್ ಇದು.
ಪಂಜಾಬ್ : ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈ.ಲಿನ ಕಿಂಗ್ಸ್ ಇಲೆವೆನ್ ಪಂಜಾಬ್ ರವೀಂದ್ರ ಚಂದ್ರನ್ ಅಶ್ವಿನ್ ನಾಯಕತ್ವದ ತಂಡ. ಕ್ರಿಸ್ ಗೇಲ್, ಕೆ.ಎಲ್ ರಾಹುಲ್ ಸೇರಿದಂತೆ ಘಟಾನುಘಟಿಗಳನ್ನು ಒಳಗೊಂಡಿರುವ ಟೀಮ್.
ರಾಜಸ್ಥಾನ : ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈ.ಲಿ ಮಾಲಿಕತ್ವದ ಟೀಮ್. ಪ್ರಥಮ ಆವೃತ್ತಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಟೀಮ್.