ಸತತ ಸೋಲಿನಿಂದ ಒತ್ತಡಕ್ಕೆ ಒಳಗಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ತ್ಯಜಿಸಿರುವ ಗೌತಮ್ ಗಂಭೀರ್ ಪ್ರಾಂಚೈಸಿಯಿಂದ ಯಾವುದೇ ರೀತಿಯ ಹಣ ಪಡೆಯದಿರಲು ನಿರ್ಧರಿಸಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೌತಮ್ ಗಂಭೀರ್ ಅವರನ್ನು 2.8ಕೋಟಿ ರೂ ಗಳಿಗೆ ಡೆಲ್ಲಿ ಖರೀದಿಸಿತ್ತು.
ಹಿಂದೆ ಕೆಕೆಆರ್ ನಲ್ಲಿರುವಾಗ ನಾಯಕನಾಗಿ ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತಿ ಈ ಬಾರಿ ಡೆಲ್ಲಿ ತಂಡದ ನಾಯಕರಾಗಿದ್ದಾರೆ. ಆದರೆ, ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಒಂದೆಡೆ ತಂಡದ ಸೋಲಾದರೆ ಒಬ್ಬ ಬ್ಯಾಟ್ಸ್‌ಮನ್ ಆಗಿಯೂ ಗಂಭೀರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿನ 55ರನ್ ಸೇರಿದಂತೆ 85ರನ್ ಮಾತ್ರ ಗಳಿಸಿದ್ದಾರೆ.
ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಣ ಕೂಡ ಬೇಡ ಅಂದಿದ್ದಾರೆ. ಉಳಿದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಗೌತಿ ಆಟಗಾರನಾಗಿ ತಂಡದಲ್ಲಿರುತ್ತಾರೆ.