ಐಪಿಎಲ್ 11ನೇ ಆವೃತ್ತಿ ಯಶಸ್ವಿಯಾಗಿ ನಡೆಯುತ್ತಿದೆ. 8 ತಂಡಗಳ ನಡುವೆ ತೀವ್ರ ಪೈಪೋಟಿ ಇದೆ. ಹೈದರಾಬಾದ್ ಮತ್ತು ಚೆನ್ನೈ ಹಾಗೂ ಕೋಲ್ಕತ್ತಾ ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಪಂಜಾಬ್ ಈ ಮೂರು ತಂಡಗಳ ಹಿಂದೆ ವೇಗವಾಗಿ ಓಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ನಮ್ಮ ರಾಯಲ್ ಚಾಲೆಂಜರ್ಸ್ ತಂಡಗಳು ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿವೆ.
ಅದಿರಲಿ, ಈ ಐಪಿಎಲ್ ಇತಿಹಾಸದಲ್ಲಿ ಕನ್ನಡಿಗರ ಸಾಧನೆ ಕೂಡ ದೊಡ್ಡದಿದೆ.
ಮುಖ್ಯವಾಗಿ 5 ಮಂದಿ ಕನ್ನಡಿಗರು ಸಾವಿರ ರನ್ ಗಡಿ ದಾಟಿದ್ದಾರೆ.
ಇದುವರೆಗೆ 158 ಪಂದ್ಯಗಳನ್ನು ಆಡಿರುವ ರಾಬಿನ್ ಉತ್ತಪ್ಪ 132.25 ರ ಸ್ಟ್ರೈಕ್ ರೇಟ್ ನಲ್ಲಿ 3940 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಮನೀಶ್ ಪಾಂಡೆ 111 ಪಂದ್ಯಗಳಿಂದ 2373 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 119.60. ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕೀರ್ತಿ ಸಹ ಮನೀಶ್ ಪಾಂಡೆಯದ್ದು.
ನಿವೃತ್ತಿ ಘೋಷಿಸಿರುವ ರಾಹುಲ್ ದ್ರಾವಿಡ್ ತಾನಾಡಿರುವ 89 ಪಂದ್ಯಗಳಿಂದ 115.51 ಸ್ಟ್ರೈಕ್ ರೇಟ್ ನಲ್ಲಿ 2174 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಕರುಣ್ ನಾಯರ್ 63 ಪಂದ್ಯಗಳಿಂದ 127.75 ರ ಸ್ಟ್ರೈಕ್ ರೇಟ್ ನಲ್ಲಿ 1367 ರನ್ ಗಳಿಸಿದ್ದಾರೆ.
47 ಪಂದ್ಯಗಳನ್ನು ಆಡಿರುವ ಕೆ ಎಲ್ ರಾಹುಲ್ 134.88ರ ಸ್ಟ್ರೈಕ್ ರೇಟ್ ನಲ್ಲಿ 1017 ರನ್ ಗಳಿಸಿದ್ದಾರೆ.