2015ರ ಹಣಕಾಸು ವರ್ಷದಲ್ಲಿ ಐಪಿಎಲ್ ಟೀಮ್ ಗಳ ಪೈಕಿ ಲಾಭ ಪಡೆದಿರೋ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಹೊರ ಹೊಮ್ಮಿದೆ.. ಹೀಗೆ ಐಪಿಎಲ್ ನಲ್ಲಿರೋ 8 ತಂಡಗಳ ಪೈಕಿ ಈ ಟೀಮೆ ಯಾಕ್ ಲಾಭವನ್ನ ಪಡಿತು ಅನ್ನೋದಕ್ಕೆ ಒಂದು ಆ ತಂಡದ ಮಾಲೀಕರಾದ ಬಾಲಿವುಡ್ ನ ಬಾದ್ ಷಾ ಶಾರುಕ್ ಕಾರಣವಿರಬಹುದು ಜೊತೆಗೆ ಕೆಕೆಆರ್ನ ಸ್ಥಿರ ಪ್ರದರ್ಶನ ಸಹ ಕೆಕೆಆರ್ ನ ಪ್ರಾಫಿಟ್ ನ ಹೆಚ್ಚುವಲ್ಲಿ ಯಶಸ್ವಿಯಾಗಿದೆ..
2014ರಲ್ಲಿ ಐಪಿಎಲ್ ನ ಚಾಂಪಿಯನ್ ಆಗಿ ಕಪ್ ಎತ್ತಿಹಿಡಿದ್ದ ಈ ಟೀಮ್ನ ನೆಟ್ ಪ್ರಾಫಿಟ್ ಬರೋಬ್ಬರಿ 168.71 ಕೋಟಿಗಳು.. ಈ ಹಿಂದೆ ಅಂದ್ರೆ 2013-2014ರಲ್ಲಿ ಕೆಕೆಆರ್ 128.81 ಕೋಟಿಯಷ್ಟು ಹಣವನ್ನ ಕೊಳ್ಳೆ ಹೊಡೆದಿತ್ತು..
ಇದರಿಂದ ತಿಳಿಯೋದು ಏನು ಅಂದ್ರೆ ಚಾಂಪಿಯನ್ ಆದ ತಂಡ ಹೆಚ್ಚು ಹಣವನ್ನ ಪಡೆಯುತ್ತೆ ಅನ್ನೋದು.. ಕಾರಣ ಸಿಂಪಲ್.. ಅದೇನಂದ್ರೆ ಓಡೋ ಕುದುರೆ ಹಿಂದೆ ಬಾಜಿ ಅಂತಾರಲ್ಲ ಹಾಗೆ.. ಯಾವ ತಂಡ ಐಪಿಎಲ್ ನ ಚಾಂಪಿಯನ್ ಆಗಿ ಹೊರಹೊಮ್ಮುತ್ತು ಆ ತಂಡಕ್ಕೆ ಪ್ರಯೋಜಕತ್ವದ ಆದಾಯ ಸಹ ಹೆಚ್ಚಾಗೆ ಇರುತ್ತೆ.. ಇದ್ರ ಜೊತೆಗೆ ತಂಡಗಳು ಪ್ಲೇ ಆಫ್ ಗೆ ಹೊದಹಾಗೆ ಈ ತಂಡಗಳಿಗೆ ಸಂದಾಯವಾಗೋ ಹಣವು ಅಧಿಕವಾಗ್ತಾ ಹೋಗುತ್ತೆ..
ಇದ್ರ ಜೊತೆಗೆ ಈಗ ಬ್ಯಾನ್ ಆಗಿರೋ ಹಿಂದಿನ ಚೆನ್ನೈ ಸೂಪರ್ ಕಿಂಗ್ಸ್ ಹಾಗೆ ಮುಂಬೈ ಇಂಡಿಯನ್ಸ್ ಸಹ ಎರಡು ಬಾರಿ ಐಪಿಎಲ್ ಕೀರಿಟವನ್ನ ಮುಡಿಗೇರಿಸಿಕೊಂಡಿವೆ.. ಆದ್ರೆ ಕೊಲ್ಕತ್ತಾ ತಂಡದ ಹಾಗೆ ಅಧಿಕ ಲಾಭವನ್ನ ಗಳಿಸೋಕೆ ಇವುಗಳಿಂದ ಸಾಧ್ಯವಾಗಿಲ್ಲ.. ಈ ನಡುವೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ವಿಶ್ವದ ಶ್ರೇಷ್ಟ ಆಟಗಾರರಿದ್ರು 2011-2014ರವರೆಗೆ ಗಮನಾರ್ಹ ಲಾಭವನ್ನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ..
2014-2015ನೇ ಸಾಲಿನಲ್ಲಿ 14.15 ಲಾಭವನ್ನ ಪಡೆದಿದ್ದ ಕೆಕೆಆರ್ 2013/2014ನೇ ಸಾಲಿನಲ್ಲಿ ಗಳಿಸಿದ್ದು 9.18ಕೋಟಿಯನ್ನ.. ಇದಕ್ಕೆ ಕಾರಣವಾಗಿರೋದು ಮತ್ತದೆ ಶಾರುಕ್.. ಕಾರಣ ಪ್ರಯೋಜಕತ್ವವನ್ನ ನೀಡೊ ಸಂಸ್ಥೆಗಳಿಗೆ ಶಾರುಕ್ ಮುಖ್ಯ ಅಟ್ರ್ಯಾಕ್ಷನ್.. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಎದುರು ಸ್ಪಾನ್ಸರ್ ನೀಡಿದ ಕಂಪನಿಯ ಶರ್ಟ್ಸ್ ತೊಟ್ಟು ನಿಂತರೆ ಅದಕ್ಕಿಂತ ಬೇರೊಂದು ಜಾಹೀರಾತು ಹೇಗೆ ತಾನು ಸಿಗಬಹುದು ಹೇಳಿ.. ಜೊತೆಗೆ ಕೆಕೆಆರ್ ನ ಆಟವೂ ಅದ್ಭುತವಾಗಿರೋದು ಸಹ ಈ ಟೀಮ್ಗೆ ವರವಾಗಿದೆ..
ಇನ್ನೂ ಮುಖೇಶ್ ಅಂಬಾನಿ ತಂಡವಾದ ಮುಂಬೈ ಇಂಡಿಯನ್ಸ್ 2011ರಿಂದ ಒಳ್ಳೆ ಆಟವನ್ನ ನೀಡ್ತಾ ಬಂದಿದೆ.. ಆದ್ರೆ ಲಾಭ ಮಾಡೋದ್ರಲ್ಲಿ ಹೇಳಿಕೊಳ್ಳುವಂತಹ ಯಶಸ್ಸನ್ನ ಪಡೆದಿಲ್ಲ.. 220.87 2013ರಲ್ಲಿ ಗಳಿಸಿತ್ತು.. ಆಗಾಗ ಮುಂಬೈ ಇಂಡಿಯನ್ಸ್ ಐಪಿಎಲ್ ನ ವಿನ್ನರ್ ಆಗಿದ್ರು.. ಅದ್ರೂ ಕೂಡ ಇದು ಮುಂಬೈ ತಂಡಕ್ಕೆ ಲಾಭ ನೀಡಲಿಲ್ಲ.. ಬದಲಿಗೆ 5.04 ಕೋಟಿ ನಷ್ಟವಾಗಿತ್ತು.. ಆದರ ನಂತರದ ವರ್ಷದಲ್ಲಿ ಮುಂಬೈ ಪಡೆದುಕೊಂಡಿದ್ದ 167.75 ಹಣವನ್ನಷ್ಟೆ.. ಆದ್ರೆ ಈ ಹಿಂದಿನ ಬಾರಿಗೆ ಹೋಲಿಸಿಕೊಂಡ್ರೆ 3.87ಕೋಟಿಯಷ್ಟು ನಷ್ಟವನ್ನ ಅನುಭವಿಸಿದೆ..
ಇವೂಗಳಲ್ಲಿ ಲಾಭವನ್ನು ಕಂಡ ಮತ್ತೊಂದು ತಂಡವೆಂದ್ರೆ ಅದು ಕಿಂಗ್ಸ್ ಇಲೆವೆನ್ ಪಂಜಾಬ್.. 2014ರಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ ಈ ಟೀಮ್ ತನ್ನ ಮಾಲೀಕರ ಜೇಬು ತುಂಬಿಸುವಲ್ಲಿ ಯಶಸ್ವಿ ಕೂಡ ಆಗಿತ್ತು.. ಆಗ ತಂಡಕ್ಕೆ 12.76 ಕೋಟಿ ಲಾಭ ಸಿಕ್ಕಿತ್ತು..
ಒಟ್ಟಿನಲ್ಲಿ ದುಡ್ಡಿನ ಆಟವೆಂದೆ ಪರಿಗಣಿಸೋ ಐಪಿಲ್ ನಲ್ಲಿ ಆಟದೊಂದಿಗೆ ದೊಡ್ಡಿನ ಲೆಕ್ಕಚಾರ ಜೋರಾಗಿ ನಡಿತಿರೊದಂತು ಸುಳ್ಳಲ್ಲ..
- ಅಶೋಕ
POPULAR STORIES :
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie