ಭೀಕರ ಚಂಡಮಾರುತಕ್ಕೆ ನಲುಗಿ ಹೋಗಿದ್ದ ಚೆನ್ನೈ ಮಹಾ ನಗರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 10 ಸಾವಿರ ಜನರನ್ನು ಇಸ್ರೋ ಸ್ಯಾಟಲೈಟ್ ರಕ್ಷಣೆ ಮಾಡಿದ್ವು ಎಂದು ತಿಳಿದು ಬಂದಿದೆ. ಆಂಗ್ಲ ಪತ್ರಿಕೆಯೊಂದು ಈ ಸುದ್ದಿಯನ್ನು ವರದಿ ಮಾಡಿದ್ದು, ಇಸ್ರೋ ಸಂಸ್ಥೆಯ ಎರಡು ಸ್ಯಾಟಲೈಟ್‍ಗಳು ವಾರ್ಧಾ ಚಂಟಮಾರುತದ ಚಲನಾವಲನಗಳನ್ನು ಗುರುತಿಸಿತ್ತು ಎಂದು ಹೇಳಿದೆ. ಹೀಗಾಗಿ ಚಂಡಮಾರುತ ಅಪ್ಪಳಿಸುವ ಜಾಗದಲ್ಲಿ ನೆಲೆಸಿದ್ದ ಒಟ್ಟು 10 ಸಾವಿರ ಮಂದಿಯನ್ನು ಇಸ್ರೋ ಸ್ಯಾಟಲೈಟ್ ಸಹಾಯದಿಂದ ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಯಿತು. ವರ್ಧಾ ಚಂಡಮಾರುತಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡುವುದಕ್ಕೆ ಚೆನ್ನೈನ ರಾಷ್ಟ್ರೀಯ ವಿಪತ್ತು ನಿಗ್ರಹ ಧಳ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ಹೀಗಾಗಿ ಅಧಿಕಾರಿಗಳು ಹವಾಮಾನ ಇಲಾಖೆ ಹಾಗೂ ಇಸ್ರೋ ಮೊರೆ ಹೋಗಿದ್ದರು.
ಇನ್ನು ಇಸ್ರೋದ ಇನ್ಸಾಟ್ 3ಡಿಆರ್ ಮತ್ತು ಸ್ಕಾಟ್ ಸ್ಯಾಟ್-1 ಉಪಗ್ರಹಗಳ ಮೂಲಕ ಚೆನ್ನೈನಲ್ಲಿ ಅಪಾಯಕ್ಕೆ ಸಿಲುಕಿದ್ದ 10 ಸಾವಿರ ಮಂದಿಯನ್ನು ಎನ್‍ಡಿಆರ್‍ಎಫ್ ತಂಡ ರಕ್ಷಣೆ ಮಾಡಿದೆ. ಉಪಗ್ರಹಗಳು ನೀಡಿದ ಮಾಹಿತಿ ಮೇರೆಗೆ ತಿರುವಳ್ಳೂರು ಮತ್ತು ಕಾಂಚಿಪುರಂಗಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕುರಿತಾಗಿ ಸ್ಯಾಟಲೈಟ್ ಮಾಹಿತಿ ನೀಡಿದ್ದವು. ಅಂತೆಯೇ ಆಂಧ್ರದ ಭಾಗಗಳಲ್ಲೂ ಚಂಡಮಾರುತ ಅಪ್ಪಳಿಸುವ ಕುರಿತು ಉಪಗ್ರಹಗಳು ಮಾಹಿತಿ ನೀಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ಸಾಟ್ 3ಡಿಆರ್ ಉಪಗ್ರಹ ಅತ್ಯಾಧುನಿಕ ಹವಾಮಾನಕ್ಕೆ ಸಂಬಂಧಿಸಿದ ಉಪಗ್ರಹವಾಗಿದ್ದು, ಚಂಡಮಾರುತ ಹಾಗೂ ಮಳೆಯಂತಹ ವಿಕೋಪಗಳ ಕುರಿತು ಕಾಲ ಕಾಲಕ್ಕೆ ಫೊಟೋಗಳ ಮೂಲಕ ಮಾಹಿತಿ ನೀಡುತ್ತಿರುತ್ತದೆ. ಕಳೆದ ಸೆ.8 ರಂದು ಈ ಬಹು ಉದ್ದೇಶಿತ ಉಪಗ್ರಹವನ್ನು ಜಿಎಸ್‍ಎಲ್‍ವಿ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಸೇರಿಸಲಾಗಿತ್ತು. ಅದರಂತೆಯೇ ಸ್ಕಾಟ್ ಸ್ಯಾಟ್-1 ಕೂಡ ಉಪಗ್ರಹ ಹಾಗೂ ಮಳೆಯಂತಹ ವಿಕೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತಹದ್ದು. ಇದನ್ನು ಸೆ. 26ರಂದು ಕಕ್ಷೆಗೆ ಉಡಾವಣೆ ಮಾಡಲಾಯಿತು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?
ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?
ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?