ಪುಣೆ ಮೂಲದ ದಂಪತಿ ಸತ್ತ ತಮ್ಮ ಮಗನ ವೀರ್ಯದಿಂದ ಅವಳಿ ಮೊಮ್ಮಕ್ಕಳನ್ನು ಪಡೆದಿದ್ದಾರೆ. ಸಾವನ್ನಪ್ಪಿದ ಮಗನ ಸಂಗ್ರಹಿತ ವೀರ್ಯದಿಂದ ಐವಿಎಫ್ ವೈದ್ಯಕೀಯ ಪದ್ಧತಿಯಿಂದ ಬಾಡಿಗೆ ತಾಯಿ ಮೂಲಕ ವಂಶದ ಕುಡಿಗಳನ್ನು ಪಡೆದ ಖುಷಿ ದಂಪತಿಯದ್ದು.
ಪುಣೆ ಮೂಲದ ಶ್ರೀಮಂತ ದಂಪತಿಯ 27ವರ್ಷದ ಮಗ 2013ರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಮೆದುಳಿನ ಕ್ಯಾನ್ಸರ್ ಗೆ ತುತ್ತಾಗಿದ್ದರು. ಅಲ್ಲಿಯೇ ಕಿಮಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, 2016ರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಕಿಮಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾಗ ಮುಂದೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕೆ ವೈದ್ಯರು ವೀರ್ಯ ಸಂಗ್ರಹಿಸಿಟ್ಟಿದ್ದರು.
ಮಗ ಸತ್ತಮೇಲೆ ತಮ್ಮ ವಂಶ ಬೆಳಗಲು ಯಾರೂ ಇಲ್ಲವಲ್ಲ ಎಂಬ ದಂಪತಿ ಮಗನನ್ನು ಕಳೆದುಕೊಂಡ ದಂಪತಿಯದ್ದಾಗಿತ್ತು. ಆದರೆ, ಅವನಿಂದಲೇ ಮೊಮ್ಮಕ್ಕಳ ಪಡೆಯಬೇಕಿಂದಿದ್ದ ಅವರು ಬಾಡಗೆ ತಾಯಿಯ ಮೊರೆಹೋದ್ರು.
ಹತ್ತಿರದ ಸಂಬಂಧಿಯೊಬ್ಬರು ಮೇ ತಿಂಗಳಲ್ಲಿ ಬಾಡಿಗೆ ತಾಯಿಯಾಗಲು ಒಪ್ಪದ್ದರು. ಮೂರು ದಿನದ ಹಿಂದೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರೂ ಸಹ ಆರೋಗ್ಯವಾಗಿಯೇ ಇದ್ದಾರೆ.