ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಟ ಜಗ್ಗೇಶ್ ಸೋಲು ಕಂಡಿದ್ದಾರೆ. ಸುಮಾರು 45 ಸಾವಿರ ಮತಗಳ ಅಂತರದ ಸೋಲು ಕಂಡಿರುವ ಜಗ್ಗೇಶ್ ತಮ್ಮ ಸೋಲಿನ ಬಗ್ಗೆ ಮಾತಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್, ಹಣ , ಹೆಂಡ ಈ ಚುನಾವಣೆಯಲ್ಲಿ ಗೆದ್ದಿದೆ ಅಂದಿದ್ದಾರೆ. ಇದು ನನ್ನ ಸೋಲಲ್ಲ. ನನ್ನ ಮೇಲಿನ ಅಭಿಮಾನ ಗೆದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಾನು 15ದಿನದ ಅಭ್ಯರ್ಥಿ..ನನ್ನ ಪಲಿತಾಂಶಕ್ಕಿಂತ ನನಗೆ ನನ್ನ ಪಕ್ಷದ ಪಲಿತಾಂಶ ಮುಖ್ಯ..
ರಾಯರ ದಯೇಯಿಂದ ಘಡಿತಲುಪಿದೆ ನನ್ನ ಪಕ್ಷ.
ಸಂಭವಾಮಿ ಯುಗೆ ಯುಗೆ..
ನನ್ನ ಪಕ್ಷ ಗೆಲ್ಲುತ್ತೆ..ಅಂದ ಮೇಲೆ ನನ್ನ
ಬಯಕೆ ಗೆದ್ದಿದೆ..
ನಮ್ಮ ಮನೆ ಗದ್ದರೆ ಮನೆಯವರು ಗೆದ್ದಂತೆ..ನೆಮ್ಮದಿಯಾಗಿ ಬಾಳಿ ನಂಬಿಕೆಯಿಂದ ಬದುಕುವ ಈ 5ವರ್ಷ.
ಜೈ ಯಡಿಯೊರಪ್ಪ ಜೈ ಮೋದಿಜಿ— ನವರಸನಾಯಕ ಜಗ್ಗೇಶ್ (@Jaggesh2) May 15, 2018
ಟಿಕೆಟ್ ಸಿಕ್ಕಿದ್ದು ಕೊನೆಯ ಘಳಿಗೆಯಲ್ಲಿ . ಸಿಕ್ಕ ಕಡಿಮೆ ಸಮಯದಲ್ಲಿ ಜನರ ಅಭಿಮಾನಗಳಿಸಿಕೊಂಡಿದ್ದೀನಿ. ಒಂದು ವೇಳೆ ಮೂರು ತಿಂಗಳ ಮುಂಚೆಯೇ ಅವಕಾಶ ನೀಡಿದ್ದರೆ ಚಿತ್ರಣವೇ ಬೇರೆ ಆಗ್ತಿತ್ತು ಎಂದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ನಾನು 15 ದಿನದ ಅಭ್ಯರ್ಥಿ. ನನ್ನ ಫಲಿತಾಂಶಕ್ಕಿಂತ ನನಗೆ ನನ್ನ ಪಕ್ಷದ ಫಲಿತಾಂಶ ಮುಖ್ಯ. ರಾಯರ ದಯೆಯಿಂದ ನನ್ನ ಪಕ್ಷ ಗಡಿತಲುಪಿದೆ ಎಂದು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ 12 ಸಾವಿರ ಮತವಿದ್ದ ಯಶವಂತಪುರ
ಭಾ.ಜ.ಪ..ನನ್ನ 10ದಿನದ ಶ್ರಮಕ್ಕೆ.. ಹಾಗು ಹಣಹೆಂಡ ಹಂಚದೆ..ಕಲಾವಿದನೆಂಬ ಅಭಿಮಾನದಿಂದ"52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ..
ನಾನು ಸೋತರು ನನ್ನ ಮೇಲಿನ ಅಭಿಮಾನ ಗೆದ್ದಿದೆ..3ತಿಂಗಳ ಮೊದಲೆ ಅಕಾಡಕ್ಕೆ ಇಳಿಸಿದ್ದರೆ ಚಿತ್ರಣ ಬೇರೆ ಇರುತ್ತಿತ್ತು..ಆದರು ಹೆಮ್ಮೆಯಿದೆ.— ನವರಸನಾಯಕ ಜಗ್ಗೇಶ್ (@Jaggesh2) May 15, 2018