ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!

Date:

ಜಗ್ಗದಾದ ಚಿತ್ರದ ಸಂತೋಷ ಕೂಟದಲ್ಲಿ ಸಂತೋಷವೇ ಕಣ್ಮರೆಯಾಗಿತ್ತು. ಅದ್ರಲ್ಲೂ ಛಾಲೆಂಜಿಂಗ್ ಸ್ಟಾರ್ ದರ್ಶನ್ ಫುಲ್ ಗರಂ ಆಗಿದ್ದರು. ಜಗ್ಗುದಾದ ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆಗೆ ತರಾಟೆ ತೆಗೆದುಕೊಂಡಿದ್ದಲ್ಲದೇ ನಯವಾಗೇ ಮೈ ಚಳಿ ಬಿಡಿಸಿದ್ದರು.

‘ಒಂದು ಚಿತ್ರ ಹಿಟ್ ಆದ್ರೆ, ಅದಕ್ಕೆ ಎಲ್ಲರೂ ಕಾರಣವಾಗಿರುತ್ತಾರೆ. ಬರೀ ನಿರ್ದೇಶಕರಷ್ಟೇ ಅಲ್ಲ. ಆ ಯಶಸ್ಸನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುವುದಕ್ಕೆ ಕಲೀರಿ. ಯಶಸ್ಸು ಬಂದಿದ್ದು ನನ್ನಿಂದ ಮಾತ್ರ ಎಂಬ ಮನೋಭಾವ ಬೇಡ. ಕಾಲಲ್ಲಿ ನಡೆಯೋದನ್ನ ಕಲೀರಿ’. ಅಂತ ಫಿಲ್ಮೀ ಸ್ಟೈಲ್ ನಲ್ಲೇ ಕ್ಲಾಸ್ ತೆಗೆದುಕೊಂಡ್ರು.

‘ಜಗ್ಗುದಾದ’ ಚಿತ್ರತಂಡ ಏರ್ಪಡಿಸಿದ್ದ ಈ ಸಂತೋಷ ಕೂಟಕ್ಕೆ ನಾಲ್ವರನ್ನು ಹೊರತುಪಡಿಸಿ ಯಾವ ಕಲಾವಿದರು ಮತ್ತು ತಂತ್ರಜ್ಞರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಮತ್ತಷ್ಟು ಗರಂ ಆದ ದರ್ಶನ್ ನಿರ್ದೇಶಕ ರಾಘವೇಂದ್ರ ಹೆಗಡೆ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡ್ರು. ಹಿರಿಯನಾಗಿ ಒಂದಿಷ್ಟು ವಿಷಯಗಳನ್ನು ಹೇಳುತ್ತೀನಿ, ಬೇಸರ ಮಾಡ್ಕೋಬೇಡಿ ಎನ್ನುತ್ತಾ ಗೌರವದಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇಡೀ ಸಮಾರಂಭ ತುಂಬಾ ಬಿಕೋ ಎನಿಸುತ್ತಿದೆ. ಇಲ್ಲಿ ಮಾತಾಡೋಕೆ ಇರೋದು ನಾವು ನಾಲ್ಕೇ ಜನ. ಅದೇ ‘ಜಗ್ಗುದಾದ’ ಚಿತ್ರದ ಆಡಿಯೋ ರಿಲೀಸ್‍ಗೆ ಎಷ್ಟೊಂದು ಜನ ಬಂದಿದ್ದರು. ಈಗ ಯಾರೂ ಇಲ್ಲ. ಒಂದು ಸಿನಿಮಾ ಹಿಟ್ ಆದರೆ, ಅದು ನನ್ನಿಂದ ಎಂಬ ಮನೋಭಾವ ಬೇಡ. ನಿರ್ದೇಶಕರು ಯಾರಿಗೂ ಫೋನ್ ಮಾಡಿಲ್ಲ. ಮಾಡಿದ್ದರೆ ಬಂದಿರೋರು” ಅಂತಾ ದರ್ಶನ್ ತಮ್ಮ ಅಭಿಪ್ರಾಯ ಹಂಚಿಕೊಳ್ಳೋದರ ಜೊತೆಗೆ ನಿರ್ದೇಶಕರ ನಡೆಗೆ ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.

ಒಟ್ಟಾರೆ ಸಿಲಿಕಾನ್ ಸಿಟಿಯ ತಂಪಾದ ವಾತವರಣದ ನಡುವೆಯೂ ದರ್ಶನ್ ಮಾತು ನಿರ್ದೇಶಕರ ಬೆವರಿಳಿಸಿದ್ದು ಸುಳ್ಳಲ್ಲ.

  • ಶ್ರೀ

POPULAR  STORIES :

ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!

ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?

ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

 

Share post:

Subscribe

spot_imgspot_img

Popular

More like this
Related

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ ದರ?

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ...

ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ?: ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ?: ಸಿದ್ದರಾಮಯ್ಯ...

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...