ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ ಸಿಗುವುದು ಯಾವಾಗ ಎಂದರೆ ಒಬ್ಬ ಒಂಟಿ ಮಹಿಳೆ ಮಧ್ಯರಾತ್ರಿಯಲ್ಲಿ ಮೈತುಂಬಾ ಒಡವೆಗಳನ್ನು ಧರಿಸಿಕೊಂಡು ನಿರ್ಭಯವಾಗಿ ಮಧ್ಯರಾತ್ರಿಯಲ್ಲಿ ಓಡಾಡುವಂತಿದ್ದರೆ ಅದು ನಿಜವಾದ ಸ್ವಾತಂತ್ರ ಎಂದು ಗಾಂಧೀ ಹೇಳಿದ್ದರು. ಆದರೆ ಅದು ನಮ್ಮ ದೇಶದಲ್ಲಿ ಸಾಧ್ಯವಾಗುವುದು ಕನಸಿನ ಮಾತು. ಆದರೆ, ಒಂದು ದೇಶದಲ್ಲಿ ಯಾವುದೇ ಅಪರಾಧಗ:ಳೇ ನಡೆಯದೇ ಅಲ್ಲಿನ ಜೈಲುಗಳು ಬಿಕೋ ಎನ್ನಲು ಸಾಧ್ಯವೇ? ಅದು ಈ ಯುಗದಲ್ಲಿ ಸಾಧ್ಯವಾಗದ ಮಾತು ಎಂಬ ನಿಮ್ಮ ಲೆಕ್ಕಾಚಾರಗಳಾಗಿರಬಹದು. ಆದರೆ, ಇಡೀ ವಿಶ್ವವೇ ನಿಬ್ಬೆರೆಗಾಗಿಸುವಂತೆ ನೆದರ್‍ಲ್ಯಾಂಡ್ಸ್ ಈಗ ಸಂಪೂರ್ಣ ಅಪರಾಧ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಹೊರಟಿದೆ. ಆ ದೇಶದಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಅಲ್ಲಿನ ಪ್ರಮುಖ ಐದು ಸೆರೆಮನೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಮುಂದಿನ ಐದು ವರ್ಷದೊಳಗಡೆ ಇನ್ನೂ ಕೆಲ ಸೆರೆಮನೆಗಳನ್ನು ಮುಚ್ಚಲಾಗುತ್ತದೆ ಎಂದು ಕಾನೂನು ಮಂತ್ರಿ ಆರ್ಡ್ ವ್ಯಾನ್‍ಡರ್ ಸ್ಟ್ಯೂಯೆರ್ ತಿಳಿಸಿದ್ದಾರೆ. ಇತ್ತೀಚಿಗೆ ಅಲ್ಲಿನ ಪ್ರಮುಖ ಐದು ಸೆರೆಮನೆಗಳಲ್ಲಿ ಖೈದಿಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದ್ದು, ಸುಮ್ಮನೇ ಅವುಗಳಿಗೆ ವೆಚ್ಚ ಮಾಡುವ ಬದಲು ಮುಚ್ಚುವುದೇ ಲೇಸು ಎಂಬ ನಿರ್ಧಾರವನ್ನು ಅಲ್ಲಿನ ಸರಕಾರ ತೆಳೆದಿದೆಯಂತೆ. ಜೈಲುಗಳನ್ನು ಮುಚ್ಚುತ್ತಿರುವುದರಿಂದ ಸುಮಾರು 1,900 ನೌಕರರು ಸಂಕಷ್ಟಕ್ಕೀಡಾಗಿದ್ದಾರೆ ಎಂದೂ ತಿಳಿಸಿದೆ. ಆದರೆ, ಇವರಿಗೆ ಪರಿಹಾರ ನೀಡುವುದಕ್ಕೂ ಸರಕಾರ ಮುಂದಾಗಿದ್ದು, ಇವರಿಗೆ ಬದಲಿ ಕೆಲಸಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದೆ. ಆ ದೇಶದಲ್ಲಿ ಅಪರಾಧಗಳ ಸಂಖ್ಯೆ ವರ್ಷಾನು ವರ್ಷಕ್ಕೆ ಶೇ.0.9ರಷ್ಟು ಕುಗ್ಗುತ್ತಿದ್ದು, ಇನ್ನು ಐದು ವರ್ಷದೊಳಗಾಗಿ ಸುಮಾರು 300- 3,000 ಜೈಲುಗಳಿಗೆ ಬೀಗ ಮುದ್ರೆ ಜಡೆಯಲಾಗುತ್ತಿದೆ ಎಂದು ತಿಳಿಸಿದೆ.
ಟೆಲಿಗ್ರಾಫ್ ವರದಿಯ ಪ್ರಕಾರ, ಅಲ್ಲಿನ ನ್ಯಾಯಾಧೀಶರು ಅಪರಾಧಿಗಳಿಗೆ ಕಡಿಮೆ ಶಿಕ್ಷೆ ವಿಧಿಸುತ್ತಿದ್ದು, ಹೀಗಾಗಿ ಬಂಧನಕ್ಕೊಳಗಾದವರು ಜೈಲಿನಲ್ಲಿ ಕಡಿಮೆ ಸಮಯ ಕಳೆಯುವಂತಾಗಿದೆ ಹಾಗೂ ಗಂಭೀರ ಪ್ರಮಾಣದ ಅಪರಾಧಗಳು ನಡೆದಿದ್ದು ತೀರಾ ವಿರಳ ಎಂದಿದೆ.ಕಳೆದ ವರ್ಷ ಅಲ್ಲಿನ ಸುಮಾರು 19 ಸೆರೆಮನೆಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ ಆದರೆ, ಖಾಲಿ ಸೆರೆಮನೆಗಳಿಂದ ದೇಶಕ್ಕೆ ಅಪಾರವಾದ ನಷ್ಟ ಸಂಭವಿಸಿದೆಯಂತೆ.
ಸೆರೆಮನೆಗಳಿರುವುದೇ ಅಪರಾಧಿಗಳಿಗಾಗಿ ಆದರೆ ಅಲ್ಲಿ ಯಾರೂ ಇರುವುದಿಲ್ಲ ಎಂದ ಮೇಲೆ ಜೈಲುಗಳು ಯಾಕೆ ಬೇಕು ಎಂದು ಅಲ್ಲಿನ ಸರಕಾರದ ವಾದವಾಗಿದೆ. ಇವರು ವಾದಿಸುತ್ತಿರುವುದರಲ್ಲಿ ಒಂದು ರೀತಿಯಲ್ಲಿ ಅರ್ಥವೂ ಇದೆ. ಒಂದು ಕ್ಷಣ ಬೆಂಗಳೂರಿನಲ್ಲಿರುವ ಸ್ವಾತಂತ್ರ ಉದ್ಯಾನವನವನ್ನು ಯೋಚಿಸಿಕೊಳ್ಳಿ. ಅದು ಹೆಸರಿಗಾಗಿ ಮಾತ್ರ ಜೈಲು. ಈಗ ಅದು ಪ್ರಸಿದ್ದ ಪ್ರೇಕ್ಷಣೀಯ ಸ್ಥಳ ಎಂದೆನಿಸಿಕೊಂಡಿದೆ. ಒಂದು ಕಾಲದಲ್ಲಿ ಘಟಾನುಗಟಿಗಳಿಗೆ ಶಿಕ್ಷೆ ವಿಧಿಸಿದ ಸ್ಥಳ ಎಂದು ಪಾತ್ರವಾಗಿತ್ತು ಎಂದು ಹೇಳಿದರೆ ತುಸು ನಂಬಲೂ ಕಷ್ಟವಾಗುತ್ತದೆ. ಅಂತಹದರಲ್ಲಿ ಆ ದೇಶದ ಈ ನಿರ್ಧಾರ ತೆಳೆಯುವುದರಲ್ಲಿ ತಪ್ಪೇನಿದೆ ಬಿಡಿ.
- ವಿಶು.
POPULAR STORIES :
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ