ನೀವು ಯಾವುದೇ ತಪ್ಪನ್ನೂ ಮಾಡದೇ ಒಂದು ದಿನಗಳ ಕಾಲ ಜೈಲುವಾಸ ಅನುಭವಿಸುವ ತವಕ ನಿಮ್ಮಲ್ಲಿದೆಯೇ..? ಜೈಲಿನಲ್ಲಿ ಖೈದಿಗಳ ಜೀವನ ಕ್ರಮ ಹೇಗಿರುತ್ತೆ ಅಂತ ನೀವು ತಿಳಿಯಬೇಕೇ..? ಹಾಗಾದರೆ ತೆಲ್ಲಂಗಾಣದ ಮೇದಕ್ ಜಿಲ್ಲೆಯ ಸಂಗಾರೆಡ್ಡಿ ಜೈಲಿನಲ್ಲಿ ನೀವು 500ರೂ. ಹಣ ಕೊಟ್ಟರೆ ನಿಮಗೆ ಒಂದು ದಿನದ ಜೈಲುವಾಸ ಅನುಭವಿಸಬಹುದು ನೋಡಿ..!
ಈ ಸಂಗಾರೆಡ್ಡಿ ಜೈಲು ಸುಮಾರು 200 ವರ್ಷ ಹಳೇಯದಾಗಿದ್ದು, 1796ರಲ್ಲಿ ನಿಜಾಮರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಜೈಲನ್ನು ಸುಮಾರು 3 ಎಕರೆ ಜಮೀನನ್ನು ಬಳಿಸಿಕೊಂಡು ನಿರ್ಮಿಸಲಾಗಿದೆ. ಇದೀಗ ಜಿಲ್ಲಾ ಸೆಂಟ್ರಲ್ ಜೈಲ್‍ನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಕಾರಣದಿಂದಾಗಿ ಈ ಜೈಲಿನ ಸಮೀಪದಲ್ಲೇ ನಿರ್ಮಿಸಲಾಗಿರುವ ಹೊಸ ಜೈಲಿಗೆ ಖೈದಿಗಳನ್ನು ಶಿಫ್ಟ್ ಮಾಡಲಾಗ್ತಾ ಇದೆ..! ಹೀಗಾಗಿ ಈ ಜೈಲಿನಲ್ಲಿ ಈಗ ಸಮಯ ಕಳೆಯಲು ಬಯಸುವ ಪ್ರವಾಸಿಗರಿಗೆ ಒಂದು ದಿನಗಳಕಾಲ ‘ಜೈಲಿನ ಅನುಭವ’ ಎಂಬ ವಿನೂತನ ಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಪ್ರಕಾರ ಜೈಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದು ದಿನ ಜೈಲಿನಲ್ಲಿರಲು ಅವಕಾಶ ನಿಡಲಾಗಿದ್ದು, ಜೈಲುವಾಸದ ಅವಧಿಯಲ್ಲಿ ಖಾದಿ ಸಮವಸ್ತ್ರ, ಸ್ಟೀಲ್ ತಟ್ಟೆ, ಲೋಟ, ಮಗ್, ಸೋಪು, ಹಾಸಿಗೆಯನ್ನು ಒದಗಿಸಲಾಗುತ್ತದೆ. ಈ ರೀತಿ ಪ್ರವಾಸಿಗರಿಗೆ ಅವಕಾಶವನ್ನು ಕಲ್ಪಿಸುತ್ತಿರುವುದು ಭಾರತದಲ್ಲೇ ಇದೇ ಮೊದಲು ಎನ್ನುತ್ತಾರೆ ಜೈಲಿನ ಉಪ ಅಧೀಕ್ಷಕ ಲಕ್ಷ್ಮೀ ನರಸಿಂಹನವರು.
POPULAR STORIES :
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.