ಮೋದಿಯನ್ನೇ ಮದುವೆಯಾಗ್ಬೇಕಂತ 1 ತಿಂಗಳಿಂದ ಧರಣಿ ನಡೆಸ್ತಿರೋ 40ರ ಮಹಿಳೆ..!

Date:

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೆ ವಿರೋಧಿಗಳು ಸಹ ಇರೋದು ಗೊತ್ತಿರುವ ವಿಷಯವೇ..! ಆದರೆ, ಇವರನ್ನು ಮದುವೆಯಾಗಬೇಕು ಎಂದು ಹಠ ಹಿಡಿದ ಮಹಿಳೆಯ ಬಗ್ಗೆ ಗೊತ್ತೇ?
`ನನಗೆ ಮೋದಿಯನ್ನು ಭೇಟಿಯಾಗಲು ನನಗೆ ಬಿಡುವುದಿಲ್ಲ..! ಅವ್ರೂ ಕೂಡ ನನ್ನಂತೇ ಒಂಟಿಯಾಗಿದ್ದಾರೆ..! ಅವರಿಗೆ ಸಹಾಯ ಬೇಕಿದೆ. ಅದಕ್ಕಾಗಿ ನಾನು ಅವರನ್ನು ಮದುವೆಯಾಗಬೇಕು’’ಎಂದು ಓರ್ವ ಮಹಿಳೆ ಧರಣಿ ನಡೆಸುತ್ತಿದ್ದಾರೆ..!
ಮೋದಿ ವಿವಾಹಿತರಾಗಿದ್ದರೂ ಸಾಂಸರಿಕ ಜೀವನಕ್ಕಿಂತ ಹೆಚ್ಚಾಗಿ ದೇಶದ ಜನ ನೀಡಿರುವ ಜವಬ್ದಾರಿಯನ್ನು ನಿಭಾಯಿಸಲು ತಮ್ಮ ಅಷ್ಟೂ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗಿದ್ದರೂ ಮೋದಿಯನ್ನು ಮದುವೆಯಾಗಬೇಕು ಎಂದು ಹಠ ಹಿಡಿದಿರುವ ಈ ಮಹಿಳೆ ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ 1 ತಿಂಗಳಿಂದ ಧರಣಿ ಕುಳಿತಿದ್ದಾರೆ..!


ರಾಜಸ್ಥಾನ ಮೂಲದ ಓಂ ಶಾಂತಿ ಶರ್ಮಾ ಎಂಬ 40 ವರ್ಷದ ವಿಚ್ಛೇದಿತ ಮಹಿಳೆ ಮೋದಿಯ ಪತ್ನಿಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿರುವವರು.
ಈಕೆಯೇ ಹೇಳಿಕೊಂಡಿರುವಂತೆ ಇವರಿಗೆ ಹಿಂದೆ ಮದುವೆಯಾಗಿತ್ತು. ಆ ಸಂಬಂಧಗಟ್ಟಿಯಾಗಿ ಉಳಿದಿಲ್ಲ..! ಈಗ ಒಂಟಿಯಾಗಿದ್ದಾರಂತೆ. ಸಿಕ್ಕಾಪಟ್ಟೆ ಮದುವೆ ಪ್ರಸ್ತಾಪಗಳು ಬಂದ್ರೂ ಇವರು ರಿಜೆಕ್ಟ್ ಮಾಡಿದ್ದಾರಂತೆ..! ಇದೀಗ ನರೇಂದ್ರ ಮೋದಿ ಅವರನ್ನು ಮದುವೆ ಆಗಬೇಕು ಎಂದು ಸೆಪ್ಟೆಂಬರ್ 8ರಿಂದ ಧರಣಿ ನಡೆಸುತ್ತಿದ್ದಾರೆ..!


ಜಂತರ್ ಮಂತರ್‍ನ ಸಾರ್ವಜನಿಕ ಶೌಚಾಲಯ ಬಳಸುತ್ತಿದ್ದಾರೆ. ಗುರುದ್ವಾರ ಹಾಗೂ ದೇವಸ್ಥಾನಗಳಲ್ಲಿ ಊಟ ಮಾಡುತ್ತಿದ್ದಾರೆ.
ಈಕೆ ಮೊದಲ ಪತಿಯಿಂದ ಪಡೆದ 20 ವರ್ಷ ಮಗಳೂ ಕೂಡ ಇದ್ದಾಳೆ..! ಅವರ ಭವಿಷ್ಯದ ಬಗ್ಗೆ ಸ್ವಲ್ಪೂ ಚಿಂತೆ ಇಲ್ಲವಂತೆ..! ಜೈಪುರದಲ್ಲಿ ಇವರಿಗೆ ಸಿಕ್ಕಾಪಟ್ಟೆ ಭೂಮಿ ಇದೆಯಂತೆ…! ಬೇಕಾದಷ್ಟು ದುಡ್ಡು ಕೂಡ ಇದೆಯಂತೆ..! ಸ್ವಲ್ಪ ಜಮೀನನ್ನು ಮಾರಿ ಪ್ರಧಾನಿ ನರೇಂದ್ರ ಮೋದಿಯರಿಗೆ ಉಡುಗೊರೆ ಕೊಡಬೇಕೆಂದು ಕೊಂಡಿದ್ದಾರಂತೆ..! ಮದುವೆ ಇವರನ್ನು ಭೇಟಿ ಆಗುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಶಪತ ಮಾಡಿಬಿಟ್ಟಿದ್ದಾರೆ ಈಕೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...