ಮತ್ತೆ ಸುವರ್ಣ ಬಳಗ ಸೇರಿದ ಶೆಟ್ರು…!

Date:

ಎಲೆಕ್ಷನ್ ಹತ್ತಿರ ಬರ್ತಿದೆ…! ರಾಜಕೀಯ ಪಕ್ಷಗಳು ನಡೆಸುವ ತಯಾರಿ ಒಂದು ರೀತಿಯಾದ್ರೆ, ಸುದ್ದಿ ಮಾಧ್ಯಮಗಳದ್ದು ಇನ್ನೊಂದು ರೀತಿಯ ತಯಾರಿ…! ಚುನಾವಣೆ, ರಾಜಕೀಯ ಬೆಳವಣಿಗೆಳನ್ನು ಎಲ್ಲಾ ಚಾನಲ್‍ಗಳಿಗಿಂತ ಭಿನ್ನವಾಗಿ, ಮುಂಚಿತವಾಗಿ ಕೊಡಬೇಕು ಅನ್ನೋ ಆರೋಗ್ಯಕರ ಪೈಪೋಟಿ ಯಾವಾಗ್ಲೂ ಮಾಧ್ಯಮವಲಯದಲ್ಲಿ ಇದ್ದಿದ್ದೇ…! ರಾಜಕೀಯದ ಬಗ್ಗೆ ಹೆಚ್ಚು ತಿಳಿದುಕೊಂಡಿರೂ, ‘ನೇರ-ದಿಟ್ಟ- ನಿರಂತರ’ವಾಗಿ ಮಾತಾಡಬಲ್ಲ ಪತ್ರಕರ್ತರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದೇ ಇದೆ.

ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ ಏನ್ ಗೊತ್ತಾ…? ಎಂಥಾ ರಾಜಕಾರಣಿಗಳ ಬೆವರಿಳಿಸಬಲ್ಲ ಕೆಚ್ಚೆದೆಯ ಪತ್ರಕರ್ತ, ನಿರೂಪಕ ಜಯಪ್ರಕಾಶ್ ಶೆಟ್ಟಿ ಸಮಯ ಚಾನಲ್ ಬಿಟ್ಟಿದ್ದಾರೆ…! ಬಿಗ್ 3 ಖ್ಯಾತಿಯ ಶೆಟ್ಟಿಯವರು ಸುವರ್ಣ ನ್ಯೂಸ್ ಸೇರಿದ್ದು, ಇಂದು ಸಂಜೆ ೭ ಗಂಟೆಗೆ ಆನ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಜಯಪ್ರಕಾಶ್ ಶೆಟ್ಟಿಯವರು ಯಾರಿಗೆ ತಾನೆ ಗೊತ್ತಿಲ್ಲ…? ಸಮಯ ಚಾನಲ್‍ನಲ್ಲಿ ಬರ್ತಿದ್ದ ‘ಬಿಗ್3’ ಕಾರ್ಯಕ್ರಮವನ್ನು ಯಾರು ತಾನೆ ನೋಡಿಲ್ಲ…? ಅತ್ಯಂತ ಕಡಿಮೆ ಅವಧಿಯಲ್ಲಿ ಜನಮನ ಗೆದ್ದ ಕಾರ್ಯಕ್ರಮವಿದು. ಅನ್ಯಾಯದ ವಿರುದ್ಧದ ದನಿಯಾಗಿದ್ದ ಕಾರ್ಯಕ್ರಮ. ಜೆಪಿಯವರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಫೋನಾಯಿಸಿ ಮುಲಾಜಿಲ್ಲದೆ ಬೆಂಡೆತ್ತುತ್ತಿದ್ದುದು ನಿಮಗೆ ನೆನಪಿದೆ ಅಲ್ವೇ…?


ಇವರೀಗ ಮತ್ತೆ ಘರ್ಜಿಸಲು ನಿಮ್ಮಮುಂದೆ ಬರ್ತಿದ್ದಾರೆ. ಆದರೆ, ಸಮಯ ನ್ಯೂಸ್ ನಲ್ಲಲ್ಲ… ಸುವರ್ಣ ನ್ಯೂಸ್ ಮೂಲಕ…! ಅಂದಹಾಗೆ ಜೆಪಿಯವರಿಗೆ ಸುವರ್ಣ ಹೊಸತಲ್ಲ. ನಾಲ್ಕು ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿಯೇ ಇದ್ದವರು. ಬದಲಾದ ಸನ್ನಿವೇಶದಲ್ಲಿ ಸಮಯದತ್ತ ಪಯಣ ಬೆಳೆಸಿದ್ದರು. ಅಂದು ಸುವರ್ಣದಲ್ಲಿ ಇವರು ನಡೆಸಿಕೊಡುತ್ತಿದ್ದ ‘ಕಟ್ಟೆಚ್ಚರ’ ಸೂಪರ್ ಹಿಟ್ ಆಗಿತ್ತು. ಸಂದರ್ಶನವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಅಳಿಸುವ ಮೂಲಕ ಸುವರ್ಣಕ್ಕೆ ಮೊಟ್ಟಮೊದಲಬಾರಿಗೆ 100+ ಟಿಆರ್‍ಪಿಯನ್ನು ತಂದುಕೊಟ್ಟಿದ್ದು ಇದೇ ಜಯಪ್ರಕಾಶ್ ಶೆಟ್ಟಿಯವರು.


ಇವರು ಸುವರ್ಣದಲ್ಲಿ ನಡೆಸಿಕೊಡುತ್ತಿದ್ದ ‘ಸಿನಿಮಾ ಸೆಂಚುರಿ’, ‘ಬ್ರೇಕ್ ಫಾಸ್ಟ್ ನ್ಯೂಸ್’, ಸಮಯದಲ್ಲಿ ನಡೆಸಿಕೊಡುತ್ತಿದ್ದ ‘ಸಾಲ ಮನ್ನಾ’ ಹಾಗೂ ‘ಸಮಯ ಸಕಾಲ’ ಕೂಡ ಅತ್ಯಂತ ಜನಪ್ರಿಯತೆ ಪಡೆದಿದ್ದವು. ಇದೀಗ ಸುವರ್ಣ ಕುಟುಂಬಕ್ಕೆ ಮರಳಿದ್ದಾರೆ. ಪೊಲಿಟಿಕಲ್ ಡಿಸ್ಕಷನ್, ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಡೈನಾಮಿಕ್ ಜರ್ನಲಿಸ್ಟ್ ಜಯಪ್ರಕಾಶ್ ಶೆಟ್ಟಿ ನಿಮ್ಮ ಮುಂದೆ ಬರಲಿದ್ದಾರೆ… ಎನಿವೇ…ಸುವರ್ಣ ನ್ಯೂಸ್‍ಗೆ ಎಂಟ್ರಿಕೊಟ್ಟಿರೋ ಜಯ ಪ್ರಕಾಶ್ ಶೆಟ್ಟಿಯವರಿಗೆ ಶುಭವಾಗಲಿ…

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...