ಬೆಸ್ಟ್ ಆಂಕರ್ ಸೌತ್ ಇಂಡಿಯಾ ಅವಾರ್ಡ್ ಮುಡಿಗೇರಿಸಿಕೊಂಡ ಸುವರ್ಣ ನ್ಯೂಸ್ನ ಜಯಪ್ರಕಾಶ್ ಶೆಟ್ಟಿ..
ಕ್ಯಾಮರ ಮುಂದೆ ಕೂತು ಸಮಸ್ಯೆಯೊಂದನ್ನ ಎತ್ತಿಕೊಂಡ್ರು ಅಂದ್ರೆ ಅದಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಬಿಡದ, ತನ್ನ ಖಡಕ್ ನಿರೂಪಣ ಶೈಲಿಯ ಮೂಲಕ, ಜನರ ದನಿಯಾಗಿ ಕೆಲಸ ಮಾಡುವ ಕೆಲವೇ ಕೆಲವು ನಿರೂಪಕರುಗಳಲ್ಲಿ ಜಯ ಪ್ರಕಾಶ್ ಶೆಟ್ಟಿ ಮುಂಚುಣಿಯಲ್ಲಿ ನಿಲ್ಲುತ್ತಾರೆ.. ಅದಕ್ಕೆ ಬೆಸ್ಟ್ ಎಗ್ಸಾಂಪಲ್ ಒಂದು ಬಿಗ್ -3 ಕಾರ್ಯಕ್ರಮ.. ವಿಷಯ ಯಾವುದೇ ಇರಲಿ, ವಿಚಾರ ಎಷ್ಟೇ ಆಳವಾಗಿರಲಿ, ಸಮಸ್ಯೆ ಎಷ್ಟೇ ದೊಡ್ಡದಿರಲಿ, ಅಳೆದು ತೂಗಿ ನಿರೂಪಣೆ ಮಾಡುವ ಕೌಶಲ್ಯ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರಗತ…
ಕನ್ನಡದಲ್ಲಿ ಹತ್ತಕ್ಕಿಂತ ಹೆಚ್ಚು ನ್ಯೂಸ್ ಚಾನೆಲ್ ಗಳಿವೆ.. ದಕ್ಷಿಣ ಭಾರತದಲ್ಲಿ 60 ಕ್ಕೂ ಹೆಚ್ಚು ಸುದ್ದಿ ವಾಹಿನಿಗಳಿವೆ.. ಇದರಲ್ಲಿ ಲೆಕ್ಕ ಹಾಕಿದ್ರೆ ಸುಮಾರು 250 ರಿಂದ 300 ಆಂಕರ್ ಗಳಿದ್ದಾರೆ.. ಈ ಎಲ್ಲರನ್ನ ಹಿಂದಿಕ್ಕಿ ಸೌತ್ ಇಂಡಿಯಾ ನ್ಯೂಸ್ ಚಾನೆಲ್ ನ ಬೆಸ್ಟ್ ಅಂಕರ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.. ಎನ್ಬ 2018, ನ್ಯೂಸ್ ನೆಕ್ಸ್ಟ್ ವತಿಯಿಂದ ಜಯಪ್ರಕಾಶ್ ಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ..
ದೆಹಲಿಯನ್ನ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಬೆಸ್ಟ್ ಆಂಕರ್ ಪ್ರಶಸ್ತಿಯನ್ನು ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿ ಅವರು ಮುಡಿಗೇರಿಸಿಕೊಂಡಿದ್ದಾರೆ.. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಸಂಭ್ರಮಿಸುವ ಸಮಯವಲ್ಲ ಈ ಪ್ರಶಸ್ತಿಯನ್ನು ದೇಶಕ್ಕಾಗಿ ಹುತಾತ್ಮರಾದ 49 ವೀರ ಯೋಧರ ಕುಟುಂಬಗಳಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.
ಶೆಟ್ರ ಸ್ಟ್ರೈಟ್ ಫಾರ್ವರ್ಡ್ ನಿರೂಪಣೆ ಶೈಲಿಗೆ ಕರುನಾಡಿನ ಜನತೆ ಕೂಡ ಬೆಂಬಲ ನೀಡಿದ್ದಾರೆ.. ಹೀಗೆ ಇವರ ಹಾದಿ ಮತ್ತಷ್ಟು ಯಶಸ್ಸಿನ ಜೊತೆಗೆ ಮುಂದೆ ಸಾಗಿ ಎಂಬುದು ನಮ್ಮ ಆಶಯ..